ಬ್ರೇಕಿಂಗ್ ನ್ಯೂಸ್
04-07-22 10:28 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 4: ರಾಜ್ಯದಲ್ಲಿ ಸಂಚಲನ ಎಬ್ಬಿಸಿದ್ದ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಬಿಜೆಪಿ ಸರಕಾರ ಹೆಚ್ಚಿನ ತನಿಖೆಗಾಗಿ ಎನ್ಐಎಗೆ ಒಪ್ಪಿಸಿತ್ತು. ಆದರೆ, ಬಂಧನದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಹಂತಕರು ಮೊಬೈಲ್ ಫೋನ್ ಬಳಕೆ ಮಾಡಿದ್ದಲ್ಲದೆ, ಟಿಕ್ ಟಾಕ್ ವಿಡಿಯೋ ಮಾಡಿ ತಾವು ಜೈಲಿನಲ್ಲಿದ್ದರೂ ರಾಜಾತಿಥ್ಯದಲ್ಲಿದ್ದೇವೆ ಎಂಬುದನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ.
ಹರ್ಷ ಹತ್ಯೆ ಪ್ರಕರಣ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಕಾರಣ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತನಿಖೆಯನ್ನು ಎನ್ ಐಎಗೆ ವಹಿಸಿತ್ತು. ಎನ್ ಐಎ ಅಧಿಕಾರಿಗಳು ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಇದುವರೆಗೆ 450ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಶಿವಮೊಗ್ಗಕ್ಕೆ ಹಲವು ಬಾರಿ ಭೇಟಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ.
ಇಂತಹ ಗಂಭೀರ ಪ್ರಕರಣದಲ್ಲಿಯೂ ಆರೋಪಿಗಳು ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಿಂದಾಸ್ ಆಗಿ ಜೀವನ ಮಾಡುತ್ತಿದ್ದಾರೆ ಎನ್ನುವುದು ನಿಜಕ್ಕೂ ಸೋಹಿಗವೇ ಸರಿ. ಈಗೆಲ್ಲಾ ಜೈಲು ಕಾಸಿದ್ದವರಿಗೆ ಎಲ್ಲವೂ ಇರುವ ವಸತಿ ಗೃಹ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ಆರೋಪಿಗಳಿಗೆ ಜೈಲಿನೊಳಗೆ ಮೊಬೈಲ್ ಫೋನ್ ನೀಡಲಾಗಿದೆ. ಅಲ್ಲದೆ, ಮೊಬೈಲ್ ಮೂಲಕ ಕುಟುಂಬಸ್ಥರ ಜೊತೆ ವೀಡಿಯೋ ಕಾಲ್, ವಾಟ್ಸಾಪ್ ಕಾಲ್ ಮಾಡುವ ಜೊತೆಗೆ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಪ್ರಕರಣದ ಬಗ್ಗೆ ತಿಳಿದ ಹರ್ಷ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಮ್ಮ ಮಗನ ಕೊಲೆ ಪ್ರಕರಣವನ್ನು ಎನ್ ಐಎಗೆ ವಹಿಸಿದೆ. ನಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಸುದ್ದಿ ಕೇಳಿ ನಮ್ಮ ನಂಬಿಕೆ ಕಳೆದು ಹೋಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೋನ್ ಬಳಕೆ ಮಾಡಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಭಾನುವಾರ ಮುಂಜಾನೆಯೇ ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ರೈಡ್ ಮಾಡಿಸಲಾಗಿದೆ. ಈ ವೇಳೆ ಕೆಲವು ಮೊಬೈಲ್ ಸಹ ಪತ್ತೆಯಾಗಿದೆ ಎಂದು ತಿಳಿಸಿದರು.
ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಹೀಗಾಗಿ ಇಂತಹ ಸಮಸ್ಯೆ ಎದುರಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಹಲವು ವರ್ಷಗಳಿಂದ ಇರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
Shivamogga Harsha Murder accused get royal treatment in Bangalore Jail allowed to make online video calls and celebrate birthday functions via online.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm