ಬ್ರೇಕಿಂಗ್ ನ್ಯೂಸ್
20-07-22 10:06 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 20: ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಆರಂಭಿಸಿದೆ. ಕೆಎಸ್‍ಆರ್‍ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು- ಜೋಗ ಜಲಪಾತ ಶಿವಮೊಗ್ಗ ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ ಅಂದರೆ, ಶುಕ್ರವಾರ ಮತ್ತು ಶನಿವಾರ ಪ್ಯಾಕೇಜ್ ಪ್ರವಾಸವನ್ನು ಜುಲೈ 22ರಿಂದ ಪ್ರಾರಂಭಿಸಲಿದೆ.
ಅದರಂತೆ, ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಬೆಳಗ್ಗೆ 5.30 ತಲುಪುವುದು, ಬೆಳಗ್ಗೆ 7ರ ವರೆಗೂ ವಿಶ್ರಾಂತಿ ಪಡೆಯುವುದು. ನಂತರ 7ಕ್ಕೆ ಉಪಹಾರ ಸೇವನೆ ಮಾಡಬಹುದು, 7.15ಕ್ಕೆ ಸಾಗರದಿಂದ ಹೊರಟು ವರದಹಳ್ಳಿಗೆ 7.30ಕ್ಕೆ ತಲುಪಲಿದೆ. ವರದಹಳ್ಳಿಯಿಂದ 7.15ಕ್ಕೆ ಹೊರಟು ವರದ ಮೂಲಕ್ಕೆ 9ಕ್ಕೆ ತಲುಪುತ್ತದೆ.
ವರದಾ ಮೂಲ ನೋಡಿಕೊಂಡು ಇಕ್ಕೇರಿಗೆ 9.30ಕ್ಕೆ ತಲುಪುವುದು, ಅಲ್ಲಿ 10ರ ವೆರಗೂ ತಾಣ ನೋಡುವುದು. ನಂತರ ಇಕ್ಕೇರಿ ನೋಡಿಕೊಂಡು 10.30ಕ್ಕೆ ಹೊರಟು 11ಕ್ಕೆ ಕೆಳದಿಗೆ ತಲುಪುವುದು. 12ಕ್ಕೆ ಕೆಳದಿಯಿಂದ ಹೊರಟು 12.30ಕ್ಕೆ ಸಾಗರ ತಲುಪಲಾಗುತ್ತದೆ. ನಂತರ ಸಾಗರದಲ್ಲಿ 12.45ರಿಂದ 1.15ರ ವರೆಗೆ ಊಟದ ಸಮಯ, 1.30ರ ವರೆಗೆ ಸಾಗರದಿಂದ ಹೊರಟು 2.13ಕ್ಕೆ ಜೋಗ ತಲುಪುವುದು ಅಲ್ಲಿ ಸಂಜೆ 5ರ ವರೆಗೂ ಜೋಗದ ಅಹ್ಲಾದಕರ ವಾತಾವರಣ ಸವಿಯಬಹುದು.
ನಂತರ 6.15ಕ್ಕೆ ಹೊರಟು ಸಂಜೆ 7ಕ್ಕೆ ಸಾಗರ ತಲುಪುವುದು, 7ರಿಂದ 8ರವರೆಗೆ ಒಂದು ಗಂಟೆ ಸಾಗರದಲ್ಲಿ ಶಾಪಿಂಗ್ ಸಮಯವಿರುತ್ತದೆ. ನಂತರ 8.30ಕ್ಕೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ನಂತರ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪುತ್ತದೆ. ಬೆಂಗಳೂರು- ಜೋಗ ಜಲಪಾತ ಪ್ಯಾಕೇಜ್ ಟೂರ್‍ನ ಪ್ರಯಾಣದ ದರಗಳು ಇಂತಿವೆ. ವಯಸ್ಕರಿಗೆ 2,300 ರುಪಾಯಿಗಳು. 6ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 2100 ರುಪಾಯಿಗಳು ಎಂದು ಕೆಎಸ್‍ಆರ್ ಟಿಸಿ ಪ್ರಕಟಣೆ ತಿಳಿಸಿದೆ.
The Karnataka State Road Transport Corporation (KSRTC) will be introducing a new package tour from Bengaluru to Jog Falls via Shivamogga and Sagara with non-AC sleeper service on weekends (Fridays and Saturdays) from this Friday. The bus will depart from Bengaluru at 10.30 pm and will return at 5 am the day after. The ticket fare for an adult is Rs 2,300, while children aged 6-12 will be charged Rs 2,100.
18-06-26 09:57 pm
HK News Staffer
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
19-06-26 12:24 pm
HK News Staffer
Bejai, Kadri Water Issue: ಬಿಜೈ, ಕದ್ರಿಗೆ ಕಲುಷಿ...
18-06-26 12:33 pm
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm