ಬ್ರೇಕಿಂಗ್ ನ್ಯೂಸ್
25-07-22 08:29 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 25: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿ ಕೇಂದ್ರ ನಾಯಕರು, ರಾಜ್ಯದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಹಳಬರನ್ನು ಬದಲಿಸಿ ಯುವಕರಿಗೆ ಆದ್ಯತೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಇತ್ತೀಚೆಗಷ್ಟೆ ಮಾಜಿ ಸಿಎಂ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ಹೇಳಿ ರಾಜ್ಯದ ಜನತೆಗೆ ಶಾಕ್ ನೀಡಿದ್ದರು. 75 ಪ್ಲಸ್ ಆದವರಿಗೆ ಬಿಜೆಪಿಯಲ್ಲಿ ಟಿಕೆಟ್ ಇಲ್ಲವೆಂಬ ನಿಯಮದ ಪ್ರಕಾರ, 79 ವಯಸ್ಸಿನ ಯಡಿಯೂರಪ್ಪ ಮುಂದಿನ ಬಾರಿ ತನಗೆ ಸ್ಥಾನ ಸಿಗದು ಅನ್ನುವ ನೆಲೆಯಲ್ಲಿಯೇ ಈ ಮಾತು ಹೇಳಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ನಾಯಕರು ಉತ್ತರ ಪ್ರದೇಶ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಲಿದ್ದಾರೆ ಎನ್ನುವ ಗುಸು ಗುಸು ಹರಡಿದೆ. ಈ ಬಗ್ಗೆ ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಎರಡು-ಮೂರು ಬಾರಿ ಗೆದ್ದವರನ್ನು ಬದಲಾಯಿಸಿ, ಹೊಸಬರಿಗೆ ಅವಕಾಶ ನೀಡಿ ಅಭೂತಪೂರ್ವ ಗೆಲುವು ದಾಖಲಿಸಿದ್ದು ಬಿಜೆಪಿ ಕೇಂದ್ರ ನಾಯಕರಿಗೆ ಟಾನಿಕ್ ಸಿಕ್ಕಂತಾಗಿತ್ತು. ಇದೇ ಪ್ರಯೋಗವನ್ನು ರಾಜ್ಯದಲ್ಲಿ ಅಳವಡಿಸಲು ಮುಂದಾದರೆ, 40ಕ್ಕೂ ಹೆಚ್ಚು ಮಂದಿ ಸ್ಥಾನ ಕಳಕೊಳ್ಳಲಿದ್ದಾರೆ. ವಯಸ್ಸಾದವರು, 2-3 ಬಾರಿ ಗೆದ್ದರೂ ಪಕ್ಷದ ಕೆಲಸದಲ್ಲಿ ತೊಡಗದೇ ಇರುವವರು, ಸ್ವಂತ ವರ್ಚಸ್ಸು ಗಳಿಸಿಕೊಳ್ಳದೇ ಇರುವವರನ್ನು ಬದಲಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಈಗಾಗಲೇ ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಕಡೆಯಿಂದ ಖಾಸಗಿ ಸರ್ವೇ ನಡೆಸಿದ್ದು, ಪ್ರತಿಕೂಲ ಫಲಿತಾಂಶ ಬಂದಿರುವುದು ದೊಡ್ಡ ಸರ್ಜರಿಗೆ ಕಾರಣ ಎನ್ನಲಾಗುತ್ತಿದೆ. ಕರಾವಳಿಯಿಂದ ತೊಡಗಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಪಕ್ಷದ ಬಲ ಇರುವ ಎಲ್ಲ ಕಡೆಯೂ ಹಳೆ ಮುಖಗಳನ್ನು ಬದಲಿಸಿ ಹೊಸಬರಿಗೆ ಮಣೆ ಹಾಕಲು ಪ್ಲಾನ್ ನಡೆದಿದೆ. ಹೀಗಾಗಿ ಕೆಲವು ಹಿರಿಯ ನಾಯಕರು ತಮ್ಮ ಮಕ್ಕಳಿಗೆ ಸ್ಥಾನ ಸಿಗಲಿ ಎಂದು ತೆರೆಮರೆಯ ಕಸರತ್ತನ್ನೂ ಆರಂಭಿಸಿದ್ದಾರೆ. ಯಡಿಯೂರಪ್ಪ ತಮ್ಮ ಸ್ಥಾನವನ್ನು ಪುತ್ರನಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದರೆ, ಇತರೇ ನಾಯಕರು ಆ ರೀತಿ ಹೇಳುವುದಕ್ಕೆ ಧೈರ್ಯ ಹೊಂದಿಲ್ಲ. ಹೀಗಾಗಿ ಬಿಜೆಪಿ ಒಳಗಡೆ ಚುನಾವಣೆ ಸಮೀಪ ಬರುತ್ತಿದ್ದಂತೆ ದೊಡ್ಡ ರೀತಿಯ ಸರ್ಜರಿ ಆಗೋದು ಖಚಿತ ಎನ್ನಲಾಗುತ್ತಿದೆ.
Uttar Pradesh model to come in Karnataka Politics, no ticket for those won twice and thrice. More than 40 plus constitutes to have new faces.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm