ಬ್ರೇಕಿಂಗ್ ನ್ಯೂಸ್
08-08-22 09:58 pm HK News Desk ಕರ್ನಾಟಕ
ಧಾರವಾಡ, ಆಗಸ್ಟ್ 8 : ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲ್ಲ ಎಂಬ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ. ಇದು ಖಂಡನೀಯ, ಇದನ್ನ ವಿರೋಧಿಸುತ್ತೇನೆ. ಇದು ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ ಎಂದಿದ್ದಾರೆ.
ವಕ್ಫ್ ಬೋರ್ಡಿನದ್ದೂ ಅಲ್ಲ, ಮುಸ್ಲಿಮರದೂ ಅಲ್ಲ, ಇದು ಹಿಂದೂಗಳದ್ದು ಅಲ್ಲ. ಸರ್ಕಾರದ ಜಾಗ ಅದು. ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ.. ವಿಧಿ ವಿಧಾನದ ಮೂಲಕ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ. ಹಾಗಾದ್ರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ? ನೀವು ಕೇವಲ ಮುಸ್ಲಿಂ ಓಟಿನ ಮೇಲೆ ಗೆದ್ದಿಲ್ಲ. ನೀವು ಮುಸ್ಲಿಮರಿಂದ ಮಾತ್ರ ಗೆದ್ದಿಲ್ಲ, ಮುಸ್ಲಿಂ ಎಂಎಲ್ಎ ಅಲ್ಲ. ನೀವು ಚಾಮರಾಜಪೇಟೆ ಶಾಸಕ, ನಿಮಗೆ ಹಿಂದೂಗಳು ಓಟು ಹಾಕಿದ್ದಾರೆ, ನೆನೆಪಿಟ್ಟುಕೊಳ್ಳಿ.
ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಅದನ್ನ ನೀವು ವಾಪಾಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು. ಅದೇ ಮೈದಾನದಲ್ಲಿ ನಾವು ಗಣೇಶೋತ್ಸವ ಆಚರಣೆ ಮಾಡ್ತೀವಿ. ತಾಕತ್ತಿದ್ದರೆ ಅದನ್ನ ವಿರೋಧ ಮಾಡಿ. ಈ ರೀತಿಯ ಹೇಳಿಕೆಯಿಂದ ಅಶಾಂತಿ ಮತ್ತು ಗಲಭೆ ಸೃಷ್ಟಿ ಮಾಡ್ತಿದ್ದೀರಿ. ಹಿಂದೂಗಳಿಗೆ ಈ ಮೂಲಕ ಹೇಳ್ತೀನಿ. ನೀವೇನಾದರೂ ಮುಂದೆ ಜಮೀರ್ ಗೆ ಮತ ಹಾಕಿದ್ರೆ, ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ. ಅವರ ಸೊಕ್ಕನ್ನ ಮುರಿಯಬೇಕು ಅಂದ್ರೆ ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು. ವಿಜೃಂಭಣೆಯಿಂದ ಅಲ್ಲಿ ನಾವು ಮತ್ತು ಹಿಂದುಗಳೆಲ್ಲ ಸೇರಿ ಗಣೇಶೋತ್ಸವ ಮಾಡ್ತಾರೆ.
ರಾಷ್ಟ್ರ ಧ್ವಜ ಹಾರಿಸೋ ಮಾತಿಗೆ ನಾವು ಸಹ ಬರ್ತೀವಿ. ಎಲ್ಲಾ ಜನರು ಅದಕ್ಕೆ ಬರ್ತಾರೆ. ಅದು ಕೇವಲ 75 ರ ಸಂಭ್ರಮಾಚರಣೆಗೆ ಮಾತ್ರ ಆಗಿರುವುದಲ್ಲ. ಪ್ರತಿ ಜನವರಿ 26 ಹಾಗೂ ಆಗಸ್ಟ್ 15 ರಂದು ಧ್ವಜ ಹಾರಬೇಕು. ಧ್ವಜ ಹಾರಿಸುವ ವಿಚಾರದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.
Idgah Maidan row we wont allow anyone to touch the property Pramod Muthalik. Amid controversy over the ownership of 'Idgah Maidan' in the heart of the city, the Karnataka Revenue Minister R Ashoka said the land belongs to the Revenue Department and it will decide on its usage. Seeking to end the controversy over Wakf Board claiming right over the ‘Idgah Maidan’ at Chamarajpet, the Minister said the department will decide how it should be used.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm