ಬ್ರೇಕಿಂಗ್ ನ್ಯೂಸ್
10-08-22 08:11 pm HK News Desk ಕರ್ನಾಟಕ
ಚಾಮರಾಜನಗರ, ಆಗಸ್ಟ್ 10 : ಖಾಸಗಿ ಕಾಲೇಜಿನ ಉಪನ್ಯಾಸಕಿಯಾಗಿದ್ದ ಚಂದನಾ(26) ಎಂಬ ಸ್ಫುರದ್ರೂಪಿ ಹೆಣ್ಮಗಳು ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದು ಭಾರೀ ಕುತೂಹಲ, ಸಂಶಯಕ್ಕೆ ಕಾರಣವಾಗಿದೆ. ಒಂದೆಡೆ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದ್ದರೆ, ಕಾಲೇಜಿನ ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಸಾವು ಕಂಡಿದ್ದು ಜೊತೆಗಿದ್ದವರನ್ನೇ ದಿಗ್ಭ್ರಾಂತಿಗೊಳಿಸಿತ್ತು.
ಆದರೆ ಸಾವಿಗೂ ಮುನ್ನ ತನ್ನೊಳಗಿನ ನೋವನ್ನು ಡೆತ್ ನೋಟಲ್ಲಿ ಬರೆದಿಟ್ಟಿದ್ದು ಏನೇನೋ ಮನಸ್ಸಿನ ತಳಮಳವನ್ನು ಹೇಳಿಕೊಂಡಿದ್ದಾರೆ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿವಾಸಿ ಮಹದೇವಸ್ವಾಮಿ ಮತ್ತು ಶೈಲಜಾ ಅವರ ಪುತ್ರಿ ಚಂದನಾ, ಚಾಮರಾಜನಗರದ ಖಾಸಗಿ ಕಾಲೇಜಿನಲ್ಲಿ ಎಂಎಸ್ಸಿ ವ್ಯಾಸಂಗ ಮುಗಿಸಿದ್ದರು. ಅದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೂ ಸೇರಿದ್ದರು. ಮನೆಗೆ ಹೋಗದೆ ಕಾಲೇಜಿನ ಹಾಸ್ಟೆಲ್ನಲ್ಲೇ ಉಳಿದುಕೊಂಡಿದ್ದರು. ಮಂಗಳವಾರ ಇವರ 26ನೇ ವರ್ಷದ ಜನ್ಮದಿನವಿತ್ತು. ಆದರೆ ಬೆಳಗ್ಗೆ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಡೆಟ್ನೋಟ್ ಪತ್ತೆಯಾಗಿದ್ದು ಅದರಲ್ಲಿ ಕುಟುಂಬಸ್ಥರಿಗೆಲ್ಲ ಸುದೀರ್ಘ ಪತ್ರವನ್ನೇ ಬರೆದಿರುವುದು ಕಂಡುಬಂದಿದೆ.
ಮೇಲ್ನೋಟಕ್ಕೆ ಚಂದನಾ ಬರೆದಿದ್ದಾರೆ ಎನ್ನಲಾದ ಡೆತ್ನೋಟ್ ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಬರೆದಿರುವಂತಿದೆ. ಅದರ ಸ್ಥೂಲ ರೂಪ ಇಲ್ಲಿದೆ. 'ಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ನಾನು ಯಾರ ಪರ ಇರಲಿ, ಯಾರ ಮಾತು ಕೇಳಲಿ? ಎಂದು ಗೊತ್ತಾಗುತ್ತಿಲ್ಲ. ನಾನು ಏನು ಅಂದುಕೊಂಡರೂ ಮಾಡಲು ಆಗುತ್ತಿಲ್ಲ, ಮಾಡೋಕ್ಕೆ ಬಿಡುತ್ತಿಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿ ಸಾಕಾಗಿದೆ. ಮುಂದೆ ಏನು ಮಾಡಬೇಕು? ಹೇಗೆ ಇರಬೇಕು? ಎಲ್ಲವೂ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ಮೈಂಡ್ ಫುಲ್ ಬ್ಲ್ಯಾಂಕ್ ಆಗಿದೆ. ಏನು ಮಾಡೋಕು ಆಗುತ್ತಿಲ್ಲ'.
'ಈ ಕಡೆ ಕಾಲೇಜು, ಆ ಕಡೆ ಮನೆ. ಎರಡೂ ಕಡೆ ಒಟ್ಟಿಗೆ ಹೇಗೆ ಇರೋದಿಕ್ಕೆ ಆಗುತ್ತೆ? ಕೆಲಸ ಹೊಸದು. ಮಕ್ಕಳಿಗೆ ಅರ್ಥ ಆಗೋ ಹಾಗೆ ಪಾಠ ಮಾಡಬೇಕು, ಓದಬೇಕು. ನೋಟ್ಸ್ ಮಾಡಬೇಕು. ನಾನು ಓದೋದು ನಿಧಾನ. ಟೈಂ ಹೇಗೆ ಮ್ಯಾನೇಜ್ ಮಾಡಬೇಕು ಗೊತ್ತಾಗುತ್ತಿಲ್ಲ. ಅದಕ್ಕೆ ನಾನು ಮನೆಗೂ ಬರ್ತಾ ಇರಲಿಲ್ಲ. ಸಾರಿ ಪಪ್ಪಾ.. ನನಗೆ ಆಗುತ್ತಿಲ್ಲ. ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮ್ಮದೇ ಆದ ದೃಷ್ಟಿಯಲ್ಲಿ ನೋಡ್ತೀರಾ. ಸಾರಿ ಫ್ರೆಂಡ್ಸ್ ಆಲ್… ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ'.
'ಮೇಘ ಅಕ್ಕ ಯಾರಿಗೂ ಹಿಂಸೆ ಕೊಡಬೇಡ. ಅನು ಅಕ್ಕ ಸಾರಿ ಕಣೆ, ನೀನು ನನಗೆ ಎಲ್ಲ ಮಾಡಿದ್ರೂ ಯೂ ಆರ್ ಮೈ ಬೆಸ್ಟ್. ನಿತ್ಯ ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊ. ಈ ಕೆಲಸ ಬೇಡ. ಆರೋಗ್ಯ ಹಾಳಾಗುತ್ತೆ. ಅಜ್ಜಿ, ಅಮ್ಮ ಎಲ್ಲರೂ ಚೆನ್ನಾಗಿರಿ. ರಮ್ಯ ಮೇಡಂ ಸಾರಿ… ಮಿಸ್ ಯು ಆಲ್' ಎಂದು ಡೆತ್ನೋಟ್ನಲ್ಲಿ ಬರೆದಿರುವುದು ಕಂಡುಬಂದಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಷ್ಟಕ್ಕೇ ಆಕೆ ಸಾವು ಕಂಡಿದ್ದಾಳೆಯೇ, ಬೇರೆ ಏನಾದ್ರೂ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
College professor commits suicide in Chamrajnagar detailed death note found says no one understood me not even my father. She committed suicide on the day of her Birthday.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm