ಬ್ರೇಕಿಂಗ್ ನ್ಯೂಸ್
16-08-22 03:32 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 16: ದೇಶಾದ್ಯಂತ ಸ್ವಾತಂತ್ರ್ಯೋತ್ಸವ ಆಚರಣೆಯ ಸಂಭ್ರಮದ ನಡುವಲ್ಲೇ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳು ಸೇರಿಕೊಂಡು ಕ್ಲಬ್ ಹೌಸ್ ನಲ್ಲಿ ಪಾಕಿಸ್ಥಾನದ ಪರವಾಗಿ ಘೋಷಣೆ ಹಾಕಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಬೆಂಗಳೂರಿನ ಟೆಕ್ಕಿಗಳು ಸೇರಿದಂತೆ ವಿವಿಧ ಕಡೆಯ ಯುವಕ- ಯುವತಿಯರಿದ್ದ ಕ್ಲಬ್ ಹೌಸ್ ಚರ್ಚೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ತಮ್ಮ ಡಿಪಿಗೆ ಹಾಕ್ಕೊಂಡಿದ್ದಲ್ಲದೆ, ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಕಿ ಸಂಭ್ರಮಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್, ಇಂಡಿಯಾ ಮುರ್ದಾಬಾದ್ ಎಂಬ ಟ್ಯಾಗ್ ಲೈನನ್ನೂ ಹಾಕ್ಕೊಂಡಿದ್ದರು. ಕನ್ನಡದಲ್ಲೇ ಮಾತನಾಡುತ್ತಿದ್ದ ಯುವಕರು ಪಾಕಿಸ್ಥಾನದ ಧ್ವಜವುಳ್ಳ ಡಿಪಿಗಳನ್ನು ಹಾಕ್ಕೊಳ್ಳುವಂತೆ ಗ್ರೂಪಿನಲ್ಲಿದ್ದವರಿಗೆ ಪ್ರಚೋದಿಸುತ್ತಿದ್ದರು. ಕನ್ನಡದಲ್ಲಿಯೇ ಅಶ್ಲೀಲವಾಗಿ ಮಾತನಾಡಿಕೊಂಡು ಕೆಲವರು ವಿಕೃತಿ ಮೆರೆದಿದ್ದಾರೆ.


ಆಗಸ್ಟ್ 14ರ ಮಧ್ಯರಾತ್ರಿ ಕ್ಲಬ್ ಹೌಸ್ ಚರ್ಚೆ ನಡೆದಿದ್ದು, ಗ್ರೂಪಿನಲ್ಲಿದ್ದ ಹತ್ತಕ್ಕೂ ಹೆಚ್ಚು ಸದಸ್ಯರು ಪಾಕಿಸ್ತಾನದ ಬಾವುಟವನ್ನು ತಮ್ಮ ಡಿಪಿಯನ್ನಾಗಿ ಹಾಕ್ಕೊಂಡಿದ್ದರು. ರಿಕಿ, ಸೌರವ್, ರೊಲೆಕ್ಸ್, ಸೂರಜ್, ಸ್ನೂಪ್ ಎಂದು ಕೆಲವರ ಖಾತೆಯಲ್ಲಿ ಹೆಸರುಗಳಿದ್ದವು. ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಪಾಕಿಸ್ತಾನದ ಪರವಾಗಿ ಜಯಕಾರ ಹಾಕಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಟೆಕ್ಕಿಯಾಗಿರುವ ಸೌರಭ್ ಎಂಬಾತ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಆರೋಪ ಕೇಳಿಬಂದಿದೆ. ಇದನ್ನು ಗಮನಿಸಿದ ಯುವತಿಯೊಬ್ಬಳು ಕ್ಲಬ್ ಹೌಸ್ ಚರ್ಚೆಯ ಸ್ಕ್ರೀನ್ ಶಾಟ್ ತೆಗೆದು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
Pro Pakistan slogans heard from techies during independence day on Club house in Bangalore. Manayata Tech Park techie Sowrabh has shouted pro pak slogans later a girl in the group shared it on social media.
23-09-26 11:05 am
HK News Staffer
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 09:32 am
HK News Staffer
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm