'ಸಿದ್ದರಾಮಯ್ಯ ಸಿಎಂ' ಹೇಳಿಕೆಯಿಂದ ಬಿಜೆಪಿಗೆ ಮುಜುಗರ ; ಯಾರಿಗೋ ಹೆದರಿಕೊಂಡು ರಾಜಕೀಯ ಮಾಡಲ್ಲ - ಶ್ರೀರಾಮುಲು ಸ್ಪಷ್ಟನೆ 

18-08-22 12:40 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಬೇಕು ಎನ್ನುವ ಮೂಲಕ ರಾಜ್ಯ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದ ಸಮಾಜ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ರಾಜ್ಯ ಬಿಜೆಪಿ ವಿವರಣೆ ಕೇಳಿದೆ ಎನ್ನಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 18 : ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಬೇಕು ಎನ್ನುವ ಮೂಲಕ ರಾಜ್ಯ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದ ಸಮಾಜ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ರಾಜ್ಯ ಬಿಜೆಪಿ ವಿವರಣೆ ಕೇಳಿದೆ ಎನ್ನಲಾಗುತ್ತಿದೆ.

ಇದರ ನಡುವಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲನ್ನು ಭೇಟಿಯಾದ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತಮ್ಮ ಹೇಳಿಕೆಯ ಬಗ್ಗೆ ರಾಜ್ಯಾಧ್ಯಕ್ಷರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. 

Illegal Money Laundering Case Against DKshi: Judge Postponed To May 31 Dk  Shivakumar Alleged Money Laundering Case Ed Special Court Hearings Case  Postponed To May 31 Au55 IG News - IG News

ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ. ಡಿಕೆಶಿ, ಅವರ ನಡುವಿನ ಜಗಳದ ವಿಚಾರದಲ್ಲಿ ಹಾಗೆ ಹೇಳಿದ್ದೇನೆ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದಾಗಿ ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮುಲು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ರಾಜ್ಯಾಧ್ಯಕ್ಷರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಮೋದಿ ಬಂದಾಗ ವಿರೋಧ ಮಾಡಿದ್ದವರೂ ಬಿಜೆಪಿಗೆ ಬಂದಿದ್ದಾರೆ. ಹಿಂದುಳಿದ ಜಾತಿಗಳು ಒಂದಾಗಬೇಕು. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದ್ರೆ ಕಾಂಗ್ರೆಸ್ ನಲ್ಲಿ ಕಿರಿ ಕಿರಿ ಕಾಣುತ್ತಿದೆ. ಅದನ್ನು ನೋಡಿದರೆ ಮುಂದೊಂದು ದಿನ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ ಅನ್ನುವ ಭಾವನೆಯಿಂದ ಮಾತನಾಡಿದ್ದೆ ಎಂದಿದ್ದಾರೆ.‌

Not A Political Sanyasi, Will Become Chief Minister After Next Assembly  Polls: Former Karnataka CM Siddaramaiah

ಚುನಾವಣೆ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರಕ್ಕೆ ಹೋಗಲು ವಿಳಂಬವಾದ ಕಾರಣಕ್ಕೆ ಸಿದ್ದರಾಮಯ್ಯ ಅಲ್ಲಿ ಅಲ್ಪ ಮತದಲ್ಲಿ ಜಯ ಗಳಿಸಿದ್ದರು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಯಾರಿಗೋ ಹೆದರಿಕೊಂಡು ರಾಜಕೀಯ ಮಾಡುವ ಜಾಯಮಾನ ನನ್ನದಲ್ಲ ಎಂದು ಶ್ರೀರಾಮುಲು ಅವರು, ನೀವು ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಹಾಡಿ ಹೊಗಳಿದ್ದು ಬಿಜೆಪಿ ಒಳಗಡೆಯೇ ಇರಿಸು ಮುರಿಸು ಮಾಡಿತ್ತು.

The state BJP on Wednesday sought an explanation from Social Welfare and Transport Minister B Sriramulu, a day after he embarrassed the party by saying he wants to see Congress leader Siddaramaiah as chief minister again. BJP state president Nalin Kumar Kateel sought a report from Sriramulu for his speech in front of hundreds of people in Ballari on Tuesday.