ಬ್ರೇಕಿಂಗ್ ನ್ಯೂಸ್
22-08-22 12:00 pm HK News Desk ಕರ್ನಾಟಕ
ವಿಜಯಪುರ, ಆಗಸ್ಟ್ 22 : ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲಾ.. ಅವರ ತಪಸ್ಸಿನ ಬಗ್ಗೆ ಮಾತನಾಡುತ್ತೀರಾ ಎಂದು ಬಸವರಾಜ ಯತ್ನಾಳ ಟಾಂಗ್ ನೀಡಿದ್ದಾರೆ.
ವಿಜಯಪುರದ ವೀರ ಸಾವರ್ಕರ ವೇದಿಕೆಯಲ್ಲಿ ಶ್ರೀ ಗಜಾನನ ಮಹಾಮಂಡಳದ ನೇತೃತ್ವದಲ್ಲಿ ನಡೆದ ವಿವಿಧ ಗಣೇಶೋತ್ಸವ ಮಂಡಳಿಗಳ ಸಭೆಯಲ್ಲಿ ಯತ್ನಾಳ ಮಾತನಾಡಿದ್ದಾರೆ. ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ. ದೇಶದಲ್ಲಿನ ಸಾವರ್ಕರ್ ವಿರೋಧಿಗಳಿಗೆ ಒಂದು ಸವಾಲು ಹಾಕುತ್ತೀನಿ. ಇವರೆಲ್ಲ ತಾಕತ್ತಿದ್ದರೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಅವರನ್ನು ಇಡಲಾಗಿದ್ದ ಜೈಲಿನಲ್ಲಿ ಒಂದು ವಾರ ಇದ್ದು ಬರಬೇಕು. ಕಾಲಪಾನಿ ಶಿಕ್ಷೆಗೆ ಒಳಗಾಗಿ ಸಾವರ್ಕರ್ ಇದ್ದ ರೂಂ ನಲ್ಲಿ ಒಂದು ವಾರ ಇದ್ದುಬರಲಿ. ಅಪ್ಪನಿಗೆ ಹುಟ್ಟಿದ್ದರೆ ಒಂದು ವಾರ ಅಲ್ಲಿರಬೇಕೆಂದು ಯತ್ನಾಳ ಸವಾಲು ಹಾಕಿದ್ದಾರೆ.
ಎತ್ತಿನ ಬದಲಾಗಿ ಸಾವರ್ಕರ ಅವರನ್ನು ಕಟ್ಟಿ ಗಾಣ ತೆಗೆಯುತ್ತಿದ್ದರು. ಹಿಂದೆ ಚಾಬೂಕ್ ನಿಂದ ಹೊಡೆಯುತ್ತಿದ್ದರು, ಇಂಥದ್ದನ್ನು ಯಾರು ತಾಳಿಕೊಳ್ಳುತ್ತಾರೆ. ಆದರೂ 25 ವರ್ಷವನ್ನು ಜೈಲಿನಲ್ಲಿ ಕಳೆದಿದ್ದಾರೆ. ಭಾಷಣ ಮಾಡಲು ಬರುತ್ತದೆ ಎಂದು ಬಾಯಿಗೆ ಬಂದಂಗೆ ಮಾತಾಡ್ತೀರಲ್ಲಾ ಎಂದು ಸಾವರ್ಕರ್ ವಿರೋಧಿಗಳ ಹೆಸರೆತ್ತದೆ ಸಿದ್ದರಾಮಯ್ಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ಕುಳಿತು ಸಾವರ್ಕರ್ ನೂರಾರು ಪುಸ್ತಕ ಬರೆದರು. ಅಂಥಹ ಮಹಾನ್ ವ್ಯಕ್ತಿ ಬಗ್ಗೆ ಮಾತನಾಡುತ್ತೀರಿ. ಮುಂದಿನ ದಿನಗಳಲ್ಲಿ ಕೃಷ್ಣನ ಬಗ್ಗೆಯೂ ನೀವು ಮಾತನಾಡುತ್ತೀರಿ ಎಂದು ಟೀಕಿಸಿದ್ದಾರೆ.
ವಿಜಯಪುರ ನಗರ ಹಾಗೂ ಜಿಲ್ಲೆಯಲ್ಲಿ ಇಡೋ ಸಾರ್ವಜನಿಕ ಗಣೇಶನ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋವನ್ನೂ ಇಡಬೇಕು. ಸಾವರ್ಕರ ಫೋಟೋಗಳನ್ನು ನಾವು ನೀಡುತ್ತೇವೆ ಎಂದು ಯತ್ನಾಳ್, ವಿವಿಧ ಗಣೇಶೋತ್ಸವ ಮಂಡಳಿಗಳ ಸದಸ್ಯರು ಹಾಗೂ ಆಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಕರೆ ನೀಡಿದ್ದಾರೆ.
ಮಸೀದಿ ಮೈಕ್ ತೆಗೆದಲ್ಲಿ ಮಾತ್ರ ಡಿಜೆ ಬಂದ್
ಒಬ್ಬ ದೇಶಕ್ಕಾಗಿ ದುಡಿದಂತಹ, ತಪಸ್ಸು ಮಾಡಿದಂತ, ತನ್ನ ಜೀವನವನ್ನೇ ಭಾರತ ಮಾತೆಗೆ ಅರ್ಪಿಸಿದಂತ ಸಾವರ್ಕರ್ ಅವರನ್ನು ನಾವು ನೆನಪಿಸಿಕೊಳ್ಳಬೇಕು. ನಾವು ಸ್ವತಂತ್ರರಾಗಿದ್ದೇವೆಂದರೆ ಸಾವರ್ಕರ್ ಹಾಗೂ ಇತರ ಸಾವಿರಾರು ಜನರು ದುಡಿದಿದ್ದರ ಫಲವಾಗಿದೆ ಎಂದು ಯತ್ನಾಳ ಹೇಳಿದರು. ಗಣೇಶೋತ್ಸವದಲ್ಲಿ ಡಿಜೆ ಬಳಕೆ ನಿಷೇಧ ಬಗ್ಗೆ ಪ್ರಶ್ನೆಗೆ, ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣೇಶೋತ್ಸವಕ್ಕೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ. ನಾನೇನಾದರೂ ಸಿಎಂ ಆಗಿದ್ದರೆ ನೋ ಪರ್ಮಿಷನ್ ಇನ್ ಕರ್ನಾಟಕ. ಅಧಿಕಾರಿಗಳೇ ಸ್ಥಳಕ್ಕೆ ಬಂದು ಗಣೇಶೋತ್ಸವಕ್ಕೆ ಪರವಾನಿಗೆ ನೀಡುವಂತೆ ಆದೇಶ ಮಾಡುತ್ತಿದ್ದೆ. ನಾನು ಸಿಎಂ ಇದ್ದರೆ ಹಾಗೇ ಮಾಡುತ್ತಿದ್ದೆ, ಆದರೆ ನನ್ನ ಮಾಡಿಸಿಕೊಡಲ್ಲಾ ಯಾರು. ಇಂವಾ ಬಂದರೆ ಉತ್ತರ ಪ್ರದೇಶದ ಸ್ಟೈಲ್ ಹೊಡೆಯುತ್ತಾನೆ ಎಂದು ಅಂಜುತ್ತಾರೆ ಎಂದು ಶಾಸಕ ಯತ್ನಾಳ ಮೂಗು ಮುರಿದರು.
Savarkar in Vijayapur BJP MLA Basan Gowda Patil Yatnal said. Under the leadership of Basanagowda Patil Yatna, a Mahamandal meeting of Shri Gajan was held at Veera Savarkar podium. Various Ganeshotsav Boards and officials participated in the meeting.Did he talk about Savarkar’s penance when he spoke? Instead of an ox, Savarkar was tied up and taken away. Sitting in such a place, Savarkar wrote hundreds of books. He lashed out that he was talking about such a great person.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am