ಬ್ರೇಕಿಂಗ್ ನ್ಯೂಸ್
29-08-22 08:38 pm HK News Desk ಕರ್ನಾಟಕ
ಧರ್ಮಸ್ಥಳ, ಆಗಸ್ಟ್ 29: ಬಿಜೆಪಿ ನಾಯಕರು ತನ್ನನ್ನು ರಾಗಿ ಕಳ್ಳ ಎಂದು ಅವಹೇಳನ ಮಾಡಿದ್ದಕ್ಕೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಕರೆದಿದ್ದೆ. ಅವರು ಯಾರೂ ಬಂದಿಲ್ಲ. ನಾನು ಒಂದು ಕೆಜಿಯೂ ರಾಗಿ ಕದ್ದಿಲ್ಲ ಎಂದು ದೇವರ ಮುಂದೆ ಹೇಳಿದ್ದೇನೆ ಎಂಬುದಾಗಿ ಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಹೇಳಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಲಿಂಗೇ ಗೌಡರು, ನಾನು ಒಂದು ಕೆ.ಜಿ. ಯೂ ರಾಗಿ ಕದ್ದಿಲ್ಲ. ಮಾರಾಟ ಮಾಡಿಲ್ಲ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ನನ್ನನ್ನು ಸಾರ್ವಜನಿಕ ವೇದಿಕೆಯಲ್ಲಿ ರಾಗಿ ಕಳ್ಳ ಎಂದಿದ್ದರು, ಈ ವಿಚಾರವಾಗಿ ಅವರನ್ನು ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಮುಂದೆ ಆಣೆ ಪ್ರಮಾಣಕ್ಕೆ ಕರೆದಿದ್ದೆ. ಆದರೆ ಅವರು ಬಂದಿಲ್ಲ. ಅದಕ್ಕೋಸ್ಕರ ಮಂಜುನಾಥ ಸ್ವಾಮಿಯ ಮುಂದೆ ನನ್ನ ಮಾತನ್ನು ಹೇಳಿದ್ದೇನೆ ಎಂದರು.
ರಾಜಕೀಯ ಕಾರಣಕ್ಕೆ ಈ ರೀತಿಯ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ನಾನು ಎಲ್ಲಾ ರೀತಿಯ ಹೋರಾಟಕ್ಕೂ, ಚರ್ಚೆಗೂ ಸಿದ್ಧನಿದ್ದೇನೆ. ಆಣೆ ಪ್ರಮಾಣಕ್ಕೆ ಮೊದಲು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿದ್ದೇನೆ. ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಶಾಲು ಹೊದಿಸಿ ಗೌರವಿಸಿದ್ದೇನೆ. ಹಾಸನ ಜಿಲ್ಲೆಯ ಕೃಷಿ ವಿಚಾರವಾಗಿ ಅವರು ನನ್ನ ಬಳಿ ಚರ್ಚೆ ನಡೆಸಿದ್ದಾರೆ. ಆಣೆ ಪ್ರಮಾಣದ ವಿಷಯವನ್ನು ಅವರ ಜೊತೆ ಮಾತನಾಡಿಲ್ಲ. ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಈಗ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕುತ್ತೇನೆ. ಸಾರ್ವಜನಿಕವಾಗಿ ಹೆಸರು ಕೆಡಿಸುವ ಇಂಥವರ ವಿರುದ್ಧ ಕಾನೂನು ಹೋರಾಟವನ್ನೂ ಮಾಡುತ್ತೇನೆ ಎಂದಿದ್ದಾರೆ.
Bjp general secretary Ravi Kumar had called me a ragi thief on a public platform and I had called him for an oath in front of Dharmasthala Manjunatheshwara Swamy on this issue. But they haven't come. That is why I have said my word in front of Manjunatha Swamy.
08-01-25 09:26 pm
Bangalore Correspondent
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
08-01-25 09:51 pm
Mangalore Correspondent
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
09-01-25 11:27 am
Mangaluru Correspondent
Fraud, Mangalore, QR Scan; ಪೆಟ್ರೋಲ್ ಪಂಪ್ ನಲ್ಲ...
08-01-25 10:57 pm
Ullal Crime, Mangalore: ಉಳ್ಳಾಲದಲ್ಲಿ ವಲಸೆ ಕಾರ್...
08-01-25 05:58 pm
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm
Mangalore crime, Court: ಸ್ನಾನ ಮಾಡುತ್ತಿದ್ದ ಅಪ್...
07-01-25 03:50 pm