ಬ್ರೇಕಿಂಗ್ ನ್ಯೂಸ್
09-09-22 03:07 pm HK News Desk ಕರ್ನಾಟಕ
ರಾಯಚೂರು, ಸೆ.9 : ಶಾಲೆಯ ಸಮವಸ್ತ್ರದಲ್ಲಿ ಮಲ ವಿಸರ್ಜನೆ ಮಾಡಿದ್ದಕ್ಕಾಗಿ ಎರಡನೇ ತರಗತಿ ಓದುತ್ತಿದ್ದ ಬಾಲಕನಿಗೆ ಶಿಕ್ಷಕ ಬಿಸಿ ನೀರು ಎರಚಿ ವಿಕೃತಿ ಮೆರೆದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಶಾಲೆಯಲ್ಲಿ ಸೆಪ್ಟೆಂಬರ್ 2 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀಘನ ಮಠೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಶಿಕ್ಷಕನ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ವಿದ್ಯಾರ್ಥಿ ತರಗತಿಯಲ್ಲೇ ಮಲ ವಿಸರ್ಜನೆ ಮಾಡಿದ್ದು ಬಾಲಕನ ವರ್ತನೆ ಸಹಿಸಲಾಗದೆ ಶಿಕ್ಷಕ ಬಿಸಿನೀರು ಎರಚಿದ್ದಾನೆ ಎನ್ನಲಾಗಿದೆ.
ಮಿಟ್ಟೆಕೆಲ್ಲೂರು ಗ್ರಾಮದ ವೆಂಕಟೇಶ್ ಮತ್ತು ಸುನೀತಾ ದಂಪತಿಯ ಪುತ್ರ ಅಖಿಲ್(8) ಗಾಯಾಳು ಬಾಲಕನಾಗಿದ್ದು ಹೊಟ್ಟೆ, ಬೆನ್ನಿನ ಭಾಗದಲ್ಲಿ ಚರ್ಮ ಸುಟ್ಟು ಹೋಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಿಸಿ ನೀರಿನ ತಾಪಕ್ಕೆ ವಿದ್ಯಾರ್ಥಿಯ ದೇಹ ಶೇ. 40 ರಷ್ಟು ಸುಟ್ಟು ಹೋಗಿದೆ.
ಶಿಕ್ಷಕ ಹುಲಿಗೆಪ್ಪ ಅನ್ನೋ ವ್ಯಕ್ತಿ ಕೃತ್ಯ ಎಸಗಿದ್ದು ಘಟನೆ ಬಳಿಕ ಶಾಲೆಗೆ ಬರದೆ ಗೈರಾಗಿದ್ದಾನೆ. ಘಟನೆ ನಡೆದು ವಾರವಾದ್ರೂ ಪೊಲೀಸ್ ಪ್ರಕರಣ ದಾಖಲಾಗಿಲ್ಲ. ದೂರು ದಾಖಲಿಸದಂತೆ ಪ್ರಭಾವಿಗಳು ಸೇರಿ ಬಾಲಕನ ಪೋಷಕರಿಗೆ ಒತ್ತಡ ಹಾಕಿದ್ದಾರೆ ಎನ್ನುವ ಆರೋಪಗಳಿವೆ. ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದೇ ಶಿಕ್ಷಕ, ಈ ಹಿಂದೆ ಶಾಸಕರೊಬ್ಬರನ್ನ ಕೊಲ್ಲಲು ಯತ್ನಿಸಿದ್ದ ಆರೋಪಕ್ಕೂ ಒಳಗಾಗಿದ್ದ.
An incident took place in Muski taluk of Raichur where a teacher, who was angry because the boy had defecated in his school uniform, poured hot water on the 8-year-old boy and mutilated him.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm