ಬ್ರೇಕಿಂಗ್ ನ್ಯೂಸ್
09-09-22 09:03 pm HK News Desk ಕರ್ನಾಟಕ
ಶಿವಮೊಗ್ಗ, ಸೆ.9: ಹಿಂದು ಮಹಾಸಭಾ ವತಿಯಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಸಾವರ್ಕರ್, ನಾಥುರಾಮ್ ಗೋಡ್ಸೆ, ತಿಲಕ್, ಅಂಬೇಡ್ಕರ್, ಸುಭಾಶ್ಚಂದ್ರ ಬೋಸರಿಂದ ಹಿಡಿದು ಇತ್ತೀಚೆಗೆ ಕೊಲೆಯಾದ ಹರ್ಷ, ಪ್ರವೀಣ್ ನೆಟ್ಟಾರು ಫೋಟೋಗಳು ರಾರಾಜಿಸಿದವು.
ಕೇಸರಿ ಶಾಲು, ಪೇಟ ತೊಟ್ಟಿದ್ದ ಕಾರ್ಯಕರ್ತರು ಸ್ವಾತಂತ್ರ್ಯ ಯೋಧರ ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂತು. ಮೆರವಣಿಗೆ ಸಾಗುವ ಬೀದಿಯನ್ನೆಲ್ಲ ಕೇಸರಿ ಬಾವುಟ, ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ಪುರಂದರ ದಾಸರು, ವಿವೇಕಾನಂದ, ಸರ್ದಾರ್ ಪಟೇಲ್, ಝಾನ್ಸಿ ರಾಣಿ, ರಾಣಾ ಪ್ರತಾಪ್ ಸಿಂಹ ಮುಂತಾದ ಮಹನೀಯರ ಫೋಟೋಗಳನ್ನೂ ಬೀದಿಯಲ್ಲಿ ಕಟೌಟ್ ರೂಪದಲ್ಲಿ ಹಾಕಲಾಗಿತ್ತು. ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾದ ಹರ್ಷ ಮತ್ತು ಸುಳ್ಯದಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಫೋಟೋಗಳನ್ನು ಯುವಕರು ಹಿಡಿದಿದ್ದರು. ಕೆಲವು ಪುನೀತ್ ರಾಜಕುಮಾರ್ ಫೋಟೋವನ್ನೂ ಹಿಡಿದುಕೊಂಡಿದ್ದರು.
ಗಣಪತಿ ವಿಗ್ರಹ ಮೆರವಣಿಗೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಾವರ್ಕರ್ ವಿವಾದಕ್ಕೆ ಕಾರಣವಾಗಿದ್ದ ಅಮೀರ್ ಅಹ್ಮದ್ ವೃತ್ತದಲ್ಲಿ ಬೃಹತ್ ವೀರ ಸಾವರ್ಕರ್ ಮಹಾದ್ವಾರ ನಿರ್ಮಿಸಲಾಗಿತ್ತು. ಇತ್ತೀಚೆಗೆ ಸ್ವಾತಂತ್ರ್ಯ ದಿನದಂದೇ ಇದೇ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಆನಂತರ, ಒಬ್ಬನ ಕೊಲೆಯತ್ನವೂ ನಡೆದಿತ್ತು. ಮೆರವಣಿಗೆಯಲ್ಲಿ ಸಾಗಿಬಂದ ಗಣಪತಿ ವಿಗ್ರಹದ ಹಿಂಭಾಗದಲ್ಲಿ ಸಾವರ್ಕರ್ ಫೋಟೋ ಅಳವಡಿಸಲಾಗಿತ್ತು. ಅಮೀರ್ ಅಹ್ಮದ್ ವೃತ್ತ ಹಾಗೂ ಬಸ್ ನಿಲ್ದಾಣದ ಬಳಿ ಕೇಸರಿ ಧ್ವಜಗಳು ಹಾರಾಡಿದವು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಯುವಕರು ಹಿಂದು ರಾಷ್ಟ್ರದ ಪರ ಘೋಷಣೆಗಳನ್ನೂ ಹಾಕಿದರು.
ಗಾಂಧಿ ಬಜಾರ್ ನಲ್ಲಿ ಪೊಲೀಸರ ಸರ್ಪಗಾವಲಿನ ಮಧ್ಯೆಯೂ ಡೋಲು ವಾದನಕ್ಕೆ ಯುವಕ- ಯುವತಿಯರು ಡ್ಯಾನ್ಸ್ ಮಾಡಿದರು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ- ಯುವತಿಯರ ನೃತ್ತ ಆಕರ್ಷಕವಾಗಿತ್ತು. ಗಾಂಧಿ ಬಜಾರಿನ ಸುನ್ನಿ ಜಾಮಿಯಾ ಮಸೀದಿ ಮತ್ತು ಇತ್ತೀಚೆಗೆ ಗಲಾಟೆಗೆ ಕಾರಣವಾಗಿದ್ದ ಅಮೀರ್ ಅಹ್ಮದ್ ವೃತ್ತದಲ್ಲಿ ಆರ್ ಎಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಉಳಿದಂತೆ ಮೆರವಣಿಗೆ ಸಾಗುವ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಮೆರವಣಿಗೆಯಲ್ಲಿ ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ನಾಯಕರು ಪಾಲ್ಗೊಂಡಿದ್ದಾರೆ.
Members of a right wing group were seen carrying portrait of Nathuram Godse, the assassin of Mahatma Gandhi Shivamogga district. The activists were seen carrying the poster during a Ganesh Visarjan procession.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm