ಬ್ರೇಕಿಂಗ್ ನ್ಯೂಸ್
11-09-22 10:45 pm HK News Desk ಕರ್ನಾಟಕ
ಬೆಂಗಳೂರು, ಸೆ.11: ಅರಣ್ಯ ರಕ್ಷಣೆಯಲ್ಲಿ ತೊಡಗಿಕೊಂಡವರು ಕರ್ತವ್ಯ ಸಂದರ್ಭ ಮೃತಪಟ್ಟರೆ ಕುಟುಂಬಸ್ಥರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು 30ರಿಂದ 50 ಲಕ್ಷಕ್ಕೆ ಏರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹುತಾತ್ಮರ ಸಲುವಾಗಿ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು 20ರಿಂದ 30 ಲಕ್ಷಕ್ಕೆ ಏರಿಸಿದ್ದರು. ನಮ್ಮ ಸರಕಾರ ಅದನ್ನು ಏರಿಸುತ್ತಿದ್ದು, 50 ಲಕ್ಷಕ್ಕೆ ಏರಿಸುವ ನಿರ್ಧಾರ ಕೈಗೊಂಡಿದ್ದೇವೆ. ಅಲ್ಲದೆ, ಕುಟುಂಬದ ಒಬ್ಬರಿಗೆ ಇಲಾಖೆಯಲ್ಲಿ ಉದ್ಯೋಗವನ್ನೂ ಕೊಡಿಸಲಾಗುವುದು. ನೀವು ಅರಣ್ಯವನ್ನು ಸಂರಕ್ಷಿಸುತ್ತೀರಿ. ನಿಮ್ಮನ್ನು ಸರಕಾರ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಬರಡು ಭೂಮಿಯಿದೆ. ಖಾಲಿ ಗುಡ್ಡ ಪ್ರದೇಶಗಳಿವೆ. ಅರಣ್ಯ ಹೊರತುಪಡಿಸಿ ಸರಕಾರಿ ಜಾಗದಲ್ಲೂ ಅರಣ್ಯ ಬೆಳೆಸಲು ಅಧಿಕಾರಿಗಳು ಮುಂದಾಗಬೇಕು. ಅರಣ್ಯ ಇಲಾಖೆಯವರು ಮನಸ್ಸು ಮಾಡಿದರೆ, ಬೋಳು ಗುಡ್ಡದಲ್ಲಿ ಅರಣ್ಯ ಬೆಳೆಸುವುದು ಕಷ್ಟದ ಮಾತಲ್ಲ. ಜಮ್ಶೆಡ್ ಪುರದಲ್ಲಿ ಟಾಟಾ ಕಂಪನಿ ನಡೆಸುತ್ತಿದ್ದ ಕಬ್ಬಿಣ ಅದಿರು ಗಣಿಗಳಲ್ಲಿ ಅರಣ್ಯ ಬೆಳೆಸಲಾಗಿದೆ ಅಂದ್ರೆ, ಖಾಲಿ ಗುಡ್ಡದಲ್ಲಿ ನಮಗೆ ಸಸ್ಯ ಬೆಳೆಸಲಾಗದೇ, ವಿಲ್ ಪವರ್ ಇದ್ದಲ್ಲಿ ಯಾವುದನ್ನೂ ಸಾಧನೆ ಮಾಡಬಹುದು. ಅರಣ್ಯ ಹೆಚ್ಚಿಸಿದರೆ, ನಾವು ಮುಂದಿನ ಜನಾಂಗಕ್ಕೆ ಕೊಡುವ ಅತಿ ದೊಡ್ಡ ಗಿಫ್ಟ್ ಅದಾಗುತ್ತದೆ ಎಂದು ಹೇಳಿದರು.
ಒಂದು ಭಾಗದಲ್ಲಿ ಅರಣ್ಯ ಕಡಿದು ಪರಿಸರಕ್ಕೆ ಹಾನಿಯಾದಲ್ಲಿ ಅದೇ ವರ್ಷದಲ್ಲಿ ಪರ್ಯಾಯವಾಗಿ ಅರಣ್ಯ ಬೆಳೆಸುವ ಕಾರ್ಯ ಆಗಬೇಕು. ಇದಕ್ಕಾಗಿ ನಮ್ಮ ಸರಕಾರ ಮೊದಲ ಬಾರಿಗೆ ಪರಿಸರ ಕೇಂದ್ರಿತ ಬಜೆಟ್ ಘೋಷಣೆ ಮಾಡಿತ್ತು. ಅರಣ್ಯ ಬೆಳೆಸುವುದಕ್ಕಾಗಿಯೇ ಬಜೆಟ್ ನಲ್ಲಿ 100 ಕೋಟಿ ಮೀಸಲಿಟ್ಟಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
The solatium amount granted to members of the deceased families of Forest Department Martyrs will be increased from the present Rs 30 lakh to Rs 50 lakh, Chief Minister Basavaraj Bommai announced in Bengaluru on Sunday.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm