ಬ್ರೇಕಿಂಗ್ ನ್ಯೂಸ್
15-09-22 03:23 pm Bengalore Correspondnet ಕರ್ನಾಟಕ
ಬೆಂಗಳೂರು, ಸೆ.15: ಖ್ಯಾತ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ತಾಯಿ ಡಾ.ಸ್ವರ್ಣಲತಾ ರಾಜಕಾರಣಿಗಳ ಜೊತೆ ಸೇರಿ ಆನೇಕಲ್ ಬಳಿಯ ಅಲಯನ್ಸ್ ವಿವಿಯನ್ನು ಮಾರಾಟಕ್ಕೆ ಯತ್ನಿಸಿ, ನೂರಾರು ಕೋಟಿ ಡೀಲ್ ಕುದುರಿಸಲು ಹೋಗಿ ತಗ್ಲಾಕ್ಕೊಂಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಉದ್ಯಮಿ ಮಧುಕರ್ ಅಂಗೂರ್ ಜೊತೆಗೆ ವಿವಿಯ ಆವರಣಕ್ಕೆ ಬಂದಿದ್ದ ಸ್ವರ್ಣಲತಾ, ಗುಂಪು ಕಟ್ಟಿಕೊಂಡು ರಂಪಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ವಿವಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಗಲಾಟೆ, ರಂಪಾಟ ಮಾಡಿದ್ದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಇದರಿಂದ ನಟಿ ಶ್ರೀಲೀಲಾ ಅವರ ತಾಯಿಗೆ ಬಂಧನದ ಭೀತಿ ಎದುರಾಗಿದೆ.
ಹಿಂದೆ ಸುಧೀರ್ ಅಂಗೂರ್ ಮತ್ತು ಮಧುಕರ್ ಅಂಗೂರ್ ಜೊತೆಯಾಗಿಯೇ ಖಾಸಗಿ ಅಲಯನ್ಸ್ ವಿವಿ ನಡೆಸುತ್ತಿದ್ದರು. ಆನಂತರ, ಕೋರ್ಟ್ ಜಟಾಪಟಿ ಬಳಿಕ ಮಧುಕರ್ ಅಂಗೂರ್ ಅವರನ್ನು ವಿವಿಯಿಂದ ಹೊರಕ್ಕೆ ಹಾಕಲಾಗಿತ್ತು. ಇದೀಗ ಸ್ವರ್ಣಲತಾ ಮತ್ತು ತಂಡ ಮಧುಕರ್ ಅಂಗೂರ್ ಜೊತೆಗೆ ವಿವಿಯ ಆವರಣಕ್ಕೆ ನುಗ್ಗಿದ್ದು ರಂಪ ಮಾಡಿದ್ದಾರೆ. ಗನ್ ಹಿಡಿದು ವಿವಿಯ ಸಿಬಂದಿಯನ್ನು ಹೆದರಿಸಿದ್ದಾರೆ.
ನಾನೇ ಚಾನ್ಸಲರ್ ಆಗ್ಬೇಕು ಎಂದು ಪಟ್ಟು
ಸ್ಥಳಕ್ಕೆ ಪೊಲೀಸರು ಬಂದರೂ, ತಾನೇ ಯೂನಿವರ್ಸಿಟಿ ಚಾನ್ಸಲರ್ ಎಂದು ಪಟ್ಟು ಹಿಡಿದಿದ್ದ ಸ್ವರ್ಣಲತಾ ಅವರ ರಂಪಾಟ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೊನೆಗೆ ಹರಸಾಹಸಪಟ್ಟು ಅವರನ್ನು ಅಲ್ಲಿಂದ ಪೊಲೀಸರು ಹೊರ ಹಾಕಿದ್ದರು. 50ಕ್ಕೂ ಹೆಚ್ಚು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿವಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಆನೇಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪದ್ಮನಾಭ್, ಮೋಹನ್, ಪೂಣಚ್ಚ ಸೇರಿ 50 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ. ಮಧುಕರ್ ಅಂಗೂರ್ ಸೇರಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡುತ್ತಿದ್ದಾರೆ. ಸ್ವರ್ಣಲತಾ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಸೆ.10 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
An FIR has been registered against Sandalwood star actress Srileela's mother Swarnalatha for allegedly trying to sell the disputed property of Alliance University to a prominent politician and creating a ruckus in the university. Swarnalatha, who went on to do business worth hundreds of crores of rupees, is now stuck in a police case. Swarnalatha offered to sell Alliance VV to a famous politician.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm