ಬ್ರೇಕಿಂಗ್ ನ್ಯೂಸ್
17-09-22 08:28 pm HK News Desk ಕರ್ನಾಟಕ
ಮಂಡ್ಯ, ಸೆ.17 : ರಾಜ್ಯದಲ್ಲಿ ಕಳೆದ ಬಾರಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಕೃಷ್ಣಾ ನದಿಯ ನೀರಿಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಬಗ್ಗೆ ಡಿಕೆಶಿ ಮಂಡ್ಯದಲ್ಲಿ ಸುಳಿವು ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಅಣತಿಯಂತೆ ಮೇಕೆದಾಟು ಪಾದಯಾತ್ರೆ ನಡೆದಿತ್ತು. ಕೃಷ್ಣಾ ನೀರಾವರಿ ಯೋಜನೆ ಬಗ್ಗೆ ಪಾದಯಾತ್ರೆಗೆ ಸಿದ್ಧತೆ ನಡೆಸಲು ಆ ಭಾಗದ ನಾಯಕರಿಗೆ ಹೇಳಿದ್ದೆ. ಇನ್ನೂ ಅದರ ತಯಾರಿ ಆರಂಭವಾಗಿಲ್ಲ. ಭಾರತ್ ಜೋಡೊ ಯಾತ್ರೆ ಮುಗಿದ ಬೆನ್ನಲ್ಲೇ ನಾನೇ ನೇತೃತ್ವ ತೆಗೆದುಕೊಳ್ತೀನಿ. ಕೃಷ್ಣಾ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡ್ತೇವೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ.
ಆಯಮ್ಮ ಮಾತಾಡ್ವಾಗ ಖಾಲಿ ಚೇರ್ ಅಷ್ಟೇ ಇದ್ದುವಂತೆ !
ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಡಿಕೆಶಿ ವ್ಯಂಗ್ಯವಾಡಿದರು. ಅದ್ಯಾರೋ ಸ್ಮೃತಿ ಇರಾನಿಯಂತೆ. ಆಯಮ್ಮ ಮಾತನಾಡುವಾಗ ಜನಾನೇ ಇರ್ಲಿಲ್ಲ. ಎಲ್ಲಾ ಬರಿ ಖಾಲಿ ಖಾಲಿ ಚೇರ್ ಗಳಂತೆ. ಏನ್ ಜನಸ್ಪಂದನ ಮಾಡ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ವ್ಯಂಗವಾಡಿದರು.
ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಲಾಗಿತ್ತು. ನಮ್ಮ ರಾಜ್ಯದಲ್ಲಿ 22 ದಿನ ಭಾರತ್ ಜೋಡೋ ಯಾತ್ರೆ ಇದೆ. ಯಾತ್ರೆಗೆ ಯಾವ ಕಾರ್ಯಕರ್ತನೂ ಹೂವಿನ ಹಾರ ತರಬೇಡಿ. ಯಾರು ಹೂವಿನ ಹಾರ ಹಾಕಲು ಅವಕಾಶ ಇಲ್ಲ. ಹೂವಿನ ಹಾರ ಹಾಕಿಸಿಕೊಳ್ಳಲು ಪೊಲೀಸ್ ಹಾಗೂ ಸೆಕ್ಯೂರಿಟಿ ಬಿಡಲ್ಲ. ನಿಮ್ಮ ಅಭಿಮಾನ ಪ್ರೀತಿ ಜನ ಸಂಘಟನೆಯಲ್ಲಿ ಇರಲಿ ಅಷ್ಟೇ ಎಂದು ಹೇಳಿದರು.
ಇದೇ ವೇಳೆ, ಪಕ್ಷದ ಕಾರ್ಯಕರ್ತರ ಬಗ್ಗೆ ಅವಹೇಳನ ಮಾತನಾಡಿದ ಶಾಸಕ ಕೆಜಿಎಫ್ ಬಾಬು ಬಗ್ಗೆ ಡಿಕೆಶಿ ಕೆಂಡಮಂಡಲ ಆಗಿದ್ದಾರೆ. ಅವನ್ನಾ ಸಸ್ಪೆಂಡ್ ಮಾಡಿ ಬಿಡ್ತೀನಿ. ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಬೈದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಕಿಡಿಕಾರಿದ್ದಾರೆ.
The simmering tension within the Karnataka unit of Congress has come to the fore as the party gears up to welcome Rahul Gandhi-led ‘Bharat Jodo Yatra’ into the state on September 30.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm