ಬ್ರೇಕಿಂಗ್ ನ್ಯೂಸ್
18-09-22 07:51 pm HK News Desk ಕರ್ನಾಟಕ
ಕೋಲಾರ, ಸೆ.18 : ಕೋಲಾರ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು ಚರ್ಚ್ ಪಾದ್ರಿಯೊಬ್ಬರು ಸೇರಿದಂತೆ ಅವರ ಕುಮ್ಮಕ್ಕಿನಿಂದ ದೂರು ನೀಡಿದ್ದ ವಿದ್ಯಾರ್ಥಿನಿಯರೇ ಬಂಧನಕ್ಕೊಳಗಾಗಿದ್ದಾರೆ.
ಘಟನೆ ಸಂಬಂಧಿಸಿ ಆರೋಪಕ್ಕೊಳಗಾಗಿದ್ದ ಜಾನ್ಸನ್ ಕುಂದರ್ ಪತ್ನಿ ಸವಿತಾ ಜಾನ್ ಪೊಲೀಸರಿಗೆ ಪ್ರತಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ವಿದ್ಯಾರ್ಥಿನಿಯರಾದ ಜೆನಿಫರ್ ಹಾಗೂ ಮಂಜು, ಹಾಸ್ಟೆಲ್ ವಾರ್ಡನ್ ಶೀಲಾ, ಕುಮ್ಮಕ್ಕು ನೀಡಿದ್ದ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರೆಂಡ್ ಶಾಂತಕುಮಾರ್ ಅವರನ್ನು ಬಂಧಿಸಿದ್ದಾರೆ.
ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ ಕುಂದರ್ ಜೊತೆ ವೈರತ್ವ ಹೊಂದಿದ್ದ ಪಾದ್ರಿ ಶಾಂತ ಕುಮಾರ್ ನಕಲಿ ವಿದ್ಯಾರ್ಥಿನಿಯರ ಮೂಲಕ ದೂರು ಕೊಡಿಸಿದ್ದ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿದ್ದರಿಂದ ಜಾನ್ಸನ್ ಕುಂದರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಜಾನ್ ಕುಂದರ್ ಪತ್ನಿಯೂ ಪ್ರತಿ ದೂರು ನೀಡಿದ್ದರು.
ಮೊದಲಿಗೆ, ಕೋಲಾರ ಮಹಿಳಾ ಠಾಣೆಯಲ್ಲಿ ಆಗಸ್ಟ್ 30 ರಂದು ಜಾನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ದೂರು ನೀಡಿದ್ದ ವಿದ್ಯಾರ್ಥಿನಿಯರ ಹೇಳಿಕೆಯನ್ನು ದಾಖಲು ಮಾಡಿಸಲಾಗಿತ್ತು. ಇದೇ ವೇಳೆ, ಸವಿತಾ ಜಾನ್ ಎಸ್ಪಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ದೂರು ನೀಡಿದವರನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಸುಳ್ಳು ದೂರೆಂದು ಸಾಬೀತಾಗಿದೆ. ಅಲ್ಲದೆ, ಕುಮ್ಮಕ್ಕು ನೀಡಿದವರ ಬಗ್ಗೆಯೂ ಮಾಹಿತಿ ಲಭಿಸಿದೆ. ಅದರಂತೆ, ಪಾದ್ರಿ ಶಾಂತಕುಮಾರ್, ವಾರ್ಡನ್ ಶೀಲಾ ಸೇರಿ ನಾಲ್ವರನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
The city police have arrested four people, including Methodist Church pastor Reverend Shanthakumar, in connection with the case of sexual harassment by the accountant of ETCM Hospital, which has a history of 100 years.Shanthakumar and three women involved in the fake case have been arrested after a false case was filed against ETCM Hospital ex-accountant Johnson by a fake student.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 09:34 pm
Mangalore Correspondent
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm