www.40percentsarkara.com.
">ಬ್ರೇಕಿಂಗ್ ನ್ಯೂಸ್
21-09-22 04:33 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.21: ರಾಜ್ಯ ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಸದನದಲ್ಲಿ ಹೋರಾಟ ನಡೆಸುತ್ತಿರುವಂತೆಯೇ ಕಾಂಗ್ರೆಸ್ ಬೆಂಗಳೂರು ನಗರದಲ್ಲಿ ನಲ್ವತ್ತು ಪರ್ಸೆಂಟ್ ಹೆಸರಲ್ಲಿ ಸಿಎಂ ಪೋಸ್ಟರ್ ಅಂಟಿಸಿ ಬಿಜೆಪಿಯನ್ನು ಅಣಕಿಸುವ ಕೆಲಸ ಮಾಡಿದೆ. ಬೆಂಗಳೂರು ನಗರದಾದ್ಯಂತ ಬಸ್ ನಿಲ್ದಾಣ, ಸಾರ್ವಜನಿಕ ಪ್ರದೇಶದಲ್ಲಿ ಪೇ ಸಿಎಂ ಹೆಸರಲ್ಲಿ ಬೊಮ್ಮಾಯಿ ಅವರ ನೆಗೆಟಿವ್ ಚಿತ್ರ ಬಳಸಿ ಪೋಸ್ಟರ್ ಚಿತ್ರಿಸಿದೆ.
ಪೇಟಿಎಂ ರೀತಿಯಲ್ಲೇ ಕ್ಯುಆರ್ ಕೋಡನ್ನು ಪೋಸ್ಟರಲ್ಲಿ ನೀಡಲಾಗಿದ್ದು, ಅದನ್ನು ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ನೇರವಾಗಿ ಕಾಂಗ್ರೆಸ್ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ 40 ಪರ್ಸೆಂಟ್ ಕಮಿಷನ್ ಬಗ್ಗೆ ದೂರು ನೀಡಲು ವೆಬ್ ಸೈಟ್ ಆರಂಭಿಸಿತ್ತು. ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಕಮಿಷನ್ ದಂಧೆ ಯಾವ ರೀತಿ ಇದೆ, ಅದರಿಂದ ಜನಸಾಮಾನ್ಯರು ಯಾವ ರೀತಿ ತೊಂದರೆ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ದೂರು ನೀಡಲು ಈ ವೆಬ್ ಸೈಟ್ ಆರಂಭಿಸಿತ್ತು. ಆದರೆ ಆ ವೆಬ್ ಸೈಟ್ ಅಷ್ಟು ಪ್ರಚಾರ ಗಿಟ್ಟಿಸಿಕೊಂಡಿರಲಿಲ್ಲ.
ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಫೋಟೋ ಇರುವಂತೆ ಪೇಟಿಎಂ ಅಪ್ಲಿಕೇಶನ್ ಮಾದರಿಯಲ್ಲಿ ಕ್ಯುಆರ್ ಕೋಡ್ ಚಿತ್ರಿಸಿ ಪೋಸ್ಟರ್ ಮಾಡಲಾಗಿದ್ದು, ಅದನ್ನು ಸಾರ್ವಜನಿಕ ಜಾಗದಲ್ಲಿ ರಾತ್ರೋರಾತ್ರಿ ಅಂಟಿಸಲಾಗಿದೆ. ಬೆಂಗಳೂರು ನಗರದಾದ್ಯಂತ PAY CM ಎನ್ನುವ ಹೆಸರಿನ ಪೋಸ್ಟರನ್ನು ಬಸ್ ನಿಲ್ದಾಣ, ರಸ್ತೆ ಬದಿಯ ಗೋಡೆಗಳಲ್ಲಿ ಅಂಟಿಸಲಾಗಿದೆ. ಆಮೂಲಕ ನಲ್ವತ್ತು ಪರ್ಸೆಂಟ್ ಸರಕಾರ ಎನ್ನುವ ಬಗ್ಗೆ ಬಿಜೆಪಿ ಸರಕಾರವನ್ನು ತೀವ್ರವಾಗಿ ಅಣಕಿಸಲಾಗಿದೆ. ಈ ರೀತಿಯ ಪೋಸ್ಟರ್ ನಿಂದ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ಕಳೆದ ವಾರ ಹೈದರಾಬಾದ್ ನಲ್ಲಿ ಇದೇ ರೀತಿ 40 ಪರ್ಸೆಂಟ್ ಸಿಎಂ ಎನ್ನುವ ದೊಡ್ಡ ಪೋಸ್ಟರನ್ನು ಹಾಕಲಾಗಿತ್ತು. ಅಲ್ಲಿ ಆಡಳಿತ ನಡೆಸುತ್ತಿರುವ ಟಿಆರ್ ಎಸ್ ಪಕ್ಷದ ಕಾರ್ಯಕರ್ತರು ಆ ರೀತಿ ಪೋಸ್ಟರ್ ಹಾಕಿದ್ದರು. ಹೈದರಾಬಾದಲ್ಲಿ ಬಿಜೆಪಿ ಕಾರ್ಯಕಾರಿಣಿ ಇದ್ದುದರಿಂದ ಮತ್ತು ಅದಕ್ಕೆ ಕರ್ನಾಟಕದ ಮುಖ್ಯಮಂತ್ರಿ ತೆರಳುತ್ತಾರೆ ಎಂಬ ಹಿನ್ನೆಲೆಯಲ್ಲಿ ಅಣಕಿಸುವ ಪೋಸ್ಟರ್ ಹಾಕಲಾಗಿತ್ತು. ಆದರೆ ಬಿಜೆಪಿ ಕಾರ್ಯಕಾರಿಣಿಯನ್ನು ಆನಂತರ ಮುಂದಕ್ಕೆ ಹಾಕಲಾಗಿತ್ತು.
Sharpening its attack on the Bommai government in Karnataka, the state Congress unit put up posters of the Chief Minister along with QR codes across Bengaluru on Wednesday. The ‘PayCM’ posters have an image of Chief Minister Basavraj Bommai and also a QR code attached on it, that will reportedly take users to www.40percentsarkara.com.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm