ಬ್ರೇಕಿಂಗ್ ನ್ಯೂಸ್
23-09-22 08:07 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.23: ಸಮುದಾಯಗಳ ನಡುವೆ ದ್ವೇಷ ಬಿತ್ತುವುದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಧರ್ಮಗಳ ಆಧಾರದಲ್ಲಿ ಗುಂಪುಗಳನ್ನು ಎತ್ತಿ ಕಟ್ಟಿ ಗಲಭೆ ಎಬ್ಬಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಪಿಎಫ್ಐ ನಾಯಕರ ವಿರುದ್ಧ ಬೆಂಗಳೂರಿನ ಕೆಜೆ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೆ.21ರಂದು ಏಂಟಿ ಟೆರರಿಸ್ಟ್ ಸ್ಕ್ವಾಡ್ ತಂಡದ ಅಧಿಕಾರಿಯೊಬ್ಬರು ಕೆಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ 19 ಮಂದಿ ಪಿಎಫ್ಐ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆ ಪೈಕಿ 15 ಮಂದಿಯನ್ನು ಗುರುವಾರ ಎನ್ಐಎ ಅಧಿಕಾರಿಗಳ ಜೊತೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ.
ಎಫ್ಐಆರ್ ನಲ್ಲಿ ಬೆಂಗಳೂರಿನ ನಾಸಿರ್ ಪಾಷಾ, ಮನ್ಸೂರ್ ಅಹ್ಮದ್, ಕಲಬುರ್ಗಿಯ ಶೇಖ್ ಇಜಾಜ್ ಆಲಿ, ಮೈಸೂರಿನ ಮಹಮ್ಮದ್ ಕಲೀಮುಲ್ಲಾ, ಮಂಗಳೂರಿನ ಮಹಮ್ಮದ್ ಅಶ್ರಫ್ ಅಂಕಜಾಲು, ಮೊಹಮ್ಮದ್ ಶರೀಫ್ ಬಜ್ಪೆ, ಅಬ್ದುಲ್ ಖಾದರ್ ಪುತ್ತೂರು, ಬಂಟ್ವಾಳ ಕರಿಂಗಾನದ ಮಹಮ್ಮದ್ ತಪ್ಸೀರ್, ಮೊಹಿಯುದ್ದೀನ್ ಹಳೆಯಂಗಡಿ, ನವಾಜ್ ಕಾವೂರು, ಮೊಹಮ್ಮದ್ ಅಶ್ರಫ್ ಜೋಕಟ್ಟೆ, ಅಬ್ದುಲ್ ರಜಾಕ್ ಕೆಮ್ಮಾರ, ಅಯೂಬ್ ಕೆ. ಅಗ್ನಾಡಿ, ಶಿವಮೊಗ್ಗ ಜಿಲ್ಲೆಯ ಶಾಹೀದ್ ಖಾನ್, ದಾವಣಗೆರೆ ಜಿಲ್ಲೆ ಅಬು ತಾಹಿರ್, ಇಮಾಮುದ್ದೀನ್, ಉತ್ತರ ಕನ್ನಡ ಶಿರಸಿಯ ಅಬ್ದುಲ್ ಅಜೀಜ್ ಅಬ್ದುಲ್, ಮೌಸೀನ್ ಅಬ್ದುಲ್ ಶುಕೂರ್, ಕೊಪ್ಪಳ ಜಿಲ್ಲೆಯ ಮೊಹಮ್ಮದ್ ಫಯಾಜ್ ಎಂಬ 19 ಮಂದಿಯನ್ನು ಆರೋಪಿಗಳೆಂದು ತೋರಿಸಲಾಗಿದೆ.
15 ಮಂದಿಯನ್ನು ಬಂಧಿಸಿದ್ದು ಮೊಹಮ್ಮದ್ ಶರೀಫ್, ಮೊಹಮ್ಮದ್ ಅಶ್ರಫ್, ಅಯೂಬ್ ಅಗ್ನಾಡಿ, ಅಬ್ದುಲ್ ರಜಾಕ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬೆಂಗಳೂರಿನ ಕೆಜಿ ಹಳ್ಳಿ ಉಪವಿಭಾಗದ ಕಾಡುಗೊಂಡನ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, 153 ಎ, 121 ಎ, 120 ಬಿ, 121 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಧರ್ಮದ ಹೆಸರಲ್ಲಿ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವುದು, ಜನಸಾಮಾನ್ಯರನ್ನು ಎತ್ತಿ ಕಟ್ಟುವುದು, ಕೋಮು ಗಲಭೆಗೆ ಕಾರಣವಾಗುವುದು, ಸರಕಾರದ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿ ಯುವಕರನ್ನು ಪ್ರಚೋದಿಸುವುದು, ಪಿಎಫ್ಐ ಕಾರ್ಯಕರ್ತರಿಗೆ ಶಸ್ತ್ರ ಸಹಿತ ತರಬೇತಿ ನೀಡುವುದು, ಯುವಕರಲ್ಲಿ ತೀವ್ರವಾದದ ಬಗ್ಗೆ ಆಸಕ್ತಿ ಮೂಡಿಸುವುದು, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸುವುದಕ್ಕೆ ಪ್ರೇರಣೆ ನೀಡುವುದು, ಸಮಾಜದಲ್ಲಿ ಭೀತಿಯ ವಾತಾವರಣ ಮೂಡಿಸುವುದು, ದೇಶದಲ್ಲಿ ಅಭದ್ರತೆ ಮೂಡಿಸಿ, ಸರಕಾರಕ್ಕೆ ಸವಾಲಾಗುವ ಸ್ಥಿತಿ ತಂದೊಡ್ಡುವುದು, ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವುದು ಇತ್ಯಾದಿ ಗುರುತರ ಆರೋಪಗಳನ್ನು ಪಿಎಫ್ಐ ನಾಯಕರ ಮೇಲೆ ಹೊರಿಸಲಾಗಿದ್ದು, ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಡಿ ಎಫ್ಐಆರ್ ದಾಖಲಿಸುತ್ತಿರುವುದಾಗಿ ಉಲ್ಲೇಖ ಮಾಡಲಾಗಿದೆ.
In the wake of nationwide raids by the National Investigation Agency (NIA) against the Popular Front of India (PFI) and its office bearers, the Bengaluru police Thursday registered separate cases of allegedly attempting to wage war and provocation at religious places, and arrested 14 men, including two from Bengaluru, officials said. And the other four from Mangalore are said to be missing.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm