ಸಿದ್ದರಾಮಯ್ಯ ಪಿಎಫ್ಐ ನಿಷೇಧಿಸಿದ್ದನ್ನು ವಿರೋಧಿಸಿದ್ರೆ ಜನ ಒದೀತಾರೆ ; ಸಚಿವ ಪ್ರಹ್ಲಾದ ಜೋಷಿ 

29-09-22 10:51 pm       HK News Desk   ಕರ್ನಾಟಕ

ಸಿದ್ದರಾಮಯ್ಯನವರು ಪಿಎಫ್ಐ ಬ್ಯಾನ್ ಮಾಡಿದ್ದನ್ನ ವಿರೋಧ ಮಾಡಿದ್ರೆ ಜನ ಒದೀತಾರೆ. ಹೀಗೆಂದು ಹುಬ್ಬಳ್ಳಿಯಲ್ಲಿ ಕಿಡಿಕಾರಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. 

ಹುಬ್ಬಳ್ಳಿ, ಸೆ.29: ಸಿದ್ದರಾಮಯ್ಯನವರು ಪಿಎಫ್ಐ ಬ್ಯಾನ್ ಮಾಡಿದ್ದನ್ನ ವಿರೋಧ ಮಾಡಿದ್ರೆ ಜನ ಒದೀತಾರೆ. ಹೀಗೆಂದು ಹುಬ್ಬಳ್ಳಿಯಲ್ಲಿ ಕಿಡಿಕಾರಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. 

ಪಿಎಫ್ಐ ಬ್ಯಾನ್ ಜೊತೆಗೆ ಆರ್.ಎಸ್.ಎಸ್ ಬ್ಯಾನ್ ಮಾಡಬೇಕೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಷಿ, ಸಿದ್ಧರಾಮಯ್ಯ ಮತ್ತು ಅವರ ಪಕ್ಷಕ್ಕೆ ಪಿಎಫ್‌ಐ ಬ್ಯಾನ್ ಮಾಡಿದ್ದರಿಂದ ಕುದಿಯುತ್ತಿದೆ. ಪಿಎಫ್ಐ ಬ್ಯಾನ್ ಆಗಿದ್ದನ್ನ ಅವರಿಂದ ವಿರೋಧ ಮಾಡಲಿಕ್ಕೆ ಆಗುತ್ತಿಲ್ಲ. ಅದಕ್ಕೆ ಅದನ್ನ ಆರ್‌ಎಸ್‌ಎಸ್ ಜೊತೆ ಲಿಂಕ್ ಮಾಡುತ್ತಿದ್ದಾರೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ. ‌

Explained | What does the ban on PFI, affiliate organisations mean? |  Popular Front of India Ban | Explainer

Rashtriya Swayamsevak Sangh: RSS changes base of some key office-bearers -  The Economic Times

ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂದ್ರೆ ನಾವೇ ಆರ್‌ಎಸ್‌ಎಸ್, ದೇಶದ ಪ್ರಧಾನಿ ಮೋದಿ ಕೂಡ ಆರ್‌ಎಸ್‌ಎಸ್‌ನಿಂದ ಬಂದವರು ಇದು ಸತ್ಯ. ನಮ್ಮ ನಿಲುವನ್ನ ಕಾಂಗ್ರೆಸ್‌ಗೆ ವಿರೋಧ ಮಾಡಲಿಕ್ಕೆ ಆಗುತ್ತಿಲ್ಲ, ಯಾಕಂದ್ರೆ ಅದಕ್ಕೆ ಸಾಕ್ಷಿಗಳಿವೆ. ಇದರಿಂದ ಅವರಿಗೆ ಸಪೋರ್ಟ್ ಮಾಡುವ ರೀತಿಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆನ್ನುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಪಿಎಫ್ಐ ಮೇಲೆ ಪ್ರೀತಿ ಇದೆ, ಅವರು ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ.‌ ಈ ದೇಶದ ಯಾವುದೇ ಜನಾಂಗವನ್ನ ಮತಗಳ ಬ್ಯಾಂಕ್ ಎಂದು ಬಿಜೆಪಿ ನೋಡಿಲ್ಲ.‌ ನಾವು ಎಂದೂ ಈ ದೇಶದಲ್ಲಿರುವ ಎಲ್ಲಾ ಅಲ್ಪಸಂಖ್ಯಾತರು ಕೆಟ್ಟವರೆಂದು ಹೇಳಿಲ್ಲ. ಯಾರು ಉಗ್ರವಾದಿ ಚುಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೋ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ.‌

Siddaramaiah birthday bash: Congress worried over possible increase  infighting | Deccan Herald

ಸಿದ್ದರಾಮಯ್ಯನವರು ಮತಗಳ ಬ್ಯಾಂಕ್ ಪಾಲಿಟಿಕ್ಸ್ ಭಯದಿಂದಾಗಿ ಆರ್‌ಎಸ್‌ಎಸ್ ವಿರೋಧ ಮಾಡಬೇಕೆನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ಪಿಎಫ್ಐ ಬ್ಯಾನ್ ಮಾಡಿದ್ದನ್ನ ವಿರೋಧ ಮಾಡಿದ್ರೆ ಜನ ಒದೆಯುತ್ತಾರೆ ಅಷ್ಟೇ ಎಂದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

If Siddaramaiah opposes ban of PFI he will be kicked by people in state maks says Minister of Parliamentary Affairs, Coal and Mines of India, Pralhad Joshi. Congress is already burning unable to tolerate the ban of PFI in India he added.