ಬ್ರೇಕಿಂಗ್ ನ್ಯೂಸ್
04-10-22 08:53 pm HK News Desk ಕರ್ನಾಟಕ
ಚಿಕ್ಕಮಗಳೂರು, ಅ.4 : ಪಿಎಫ್ಐ ನೆಪಕ್ಕೆ ಮಾತ್ರ ಆರೆಸ್ಸೆಸ್ ಅನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅವರ ಉದ್ದೇಶ ಇರೋದು ಭಾರತೀಯರು, ಭಾರತೀಯತೆ ಮೇಲೆ. ಅವರ ಯುದ್ಧದ ಉದ್ದೇಶ ಇಸ್ಲಾಮಿಕ್ ರಾಜ್ಯವನ್ನ ಸ್ಥಾಪನೆ ಮಾಡೋದು. ಅವರ ಮೂಲನಂಬಿಕೆಗಳಲ್ಲೇ ಅಸಹಿಷ್ಣತೆ, ದೋಷವಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಬರಹಕ್ಕೆ ಪ್ರತಿಕ್ರಿಯಿಸಿದ ಅವರು, ಅವರಲ್ಲಿ ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆ ಇದೆ. ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು. ನಿಮ್ಮ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು. ಈಗ ಅಂತಹ ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ಹೇಳಿದರು.
ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಪರೇಶ್ ಮೇಸ್ತಾ ಕುಟುಂಬದ ಪರ ನಿಲ್ಲುತ್ತೇವೆ. ಮೇಲ್ಮನವಿ, ಮರು ತನಿಖೆಗೆ ಕುಟುಂಬ ಬಯಸಿದ್ರೆ ಅವರ ಜೊತೆ ನಿಲ್ಲುತ್ತೇವೆ ಎಂದರು.
ಪೊಲೀಸ್ ಅಧಿಕಾರಿ ಗಣಪತಿ ಲೈವ್ ಸ್ಟೇಟ್ಮೆಂಟ್ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ರು. ಲೈವ್ ಸ್ಪೇಟ್ಮೆಂಟ್ನ ಡೆತ್ ಸ್ಟೇಟ್ಮೆಂಟ್ ಎಂದು ಪರಿಗಣನೆ ಮಾಡ್ತಾರೆ. ಆದರೆ ಆ ಸ್ಟೇಟ್ಮೆಂಟಿಗೂ ಸಿಬಿಐ ಬಿ ರಿಪೋರ್ಟ್ ಕೊಟ್ಟಿದೆ. 55-60 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಪಕ್ಷದ ಬೇರು-ಬಾಹು ಎಲ್ಲೆಲ್ಲಿ ಇದೆಯೋ..? ಕಾಂಗ್ರೆಸ್ನ ಪ್ರಭಾ ವಲಯ ಎಲ್ಲೆಲ್ಲಿದೆಯೋ ಹೇಳಕ್ಕಾಗಲ್ಲ, ಅಷ್ಟನ್ನ ಹೇಳ್ತೀನಿ. ಎಷ್ಟೋ ಪ್ರಕರಣಗಳು ರೀ ಓಪನ್ ಆಗಿ ಹತ್ತಾರು ವರ್ಷಗಳ ಬಳಿಕ ಶಿಕ್ಷೆಯಾಗಿದೆ. ಸಿದ್ದರಾಮಯ್ಯ ವಕೀಲರು, ಇದೆಲ್ಲಾ ಅವರಿಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯ ತನ್ನೆಲ್ಲಾ ಪಾಪದಿಂದ ಮುಕ್ತನಾಗಿದ್ದೇನೆ ಎಂದು ಭಾವಿಸುವುದು ಬೇಡ. ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವವರಿಗೆ ಸುಳ್ಳಿನ ತಲೆ ಮೇಲೆ ಹೊಡೆದಂಗೆ ಹೇಳೋಕೆ ಬರುತ್ತೆ ಎಂದು ಕುಟುಕಿದರು.
Rss is just a target of PFI, but their main goal is to make India an Islamic state says CT Ravi in Chikkamagalur.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 01:34 pm
Mangalore Correspondent
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
17-09-25 02:46 pm
Udupi Correspondent
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm