ಬ್ರೇಕಿಂಗ್ ನ್ಯೂಸ್
25-10-22 12:39 pm Bangalore Correspondent ಕರ್ನಾಟಕ
ಬೆಂಗಳೂರು, ಅ.25 : ದೇಶ-ವಿದೇಶಗಳಲ್ಲಿ ಹವಾ ಸೃಷ್ಟಿಸಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ ಹಾಡಿನ ಮೇಲೆ ಕೃತಿಚೌರ್ಯ ಆರೋಪ ಕೇಳಿಬಂದಿದೆ. ಈ ಕುರಿತು ಮಲಯಾಳಂ ಭಾಷೆಯಲ್ಲಿ ಹಿಟ್ ಆಗಿದ್ದ ನವರಸಂ ಆಲ್ಬಂ ಸಾಂಗ್ ಮಾಡಿದ್ದ ತೈಕ್ಕುಡಂ ಬ್ರಿಡ್ಜ್ ತಂಡದವರು ಕೇಸ್ ದಾಖಲಿಸುವ ಬಗ್ಗೆ ಹೇಳಿಕೊಂಡಿದ್ದಾರೆ.
ಕಾಂತಾರ ಚಿತ್ರ ಬಿಡುಗಡೆಯಾದಗಿನಿಂದಲೇ ವರಾಹ ರೂಪಂ ಹಾಡಿಗೂ ನವರಸಂ ಆಲ್ಬಂ ಸಾಂಗಿಗೂ ರಾಗದಲ್ಲಿ ಸಾಮ್ಯತೆ ಇರುವ ಬಗ್ಗೆ ಕೆಲವರು ಹೇಳಿಕೊಂಡಿದ್ದರು. ಆದರೆ ಆರೋಪ ನಿರಾಕರಿಸಿದ್ದ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ರಾಗ ಧಾಟಿಯ ಕಾರಣಕ್ಕೆ ಸಾಮ್ಯತೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದರು.
ಆದರೆ ಈಗ ಬಹಿರಂಗ ವೇದಿಕೆಯಲ್ಲಿ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಮಾತನಾಡಿರುವ ಆಲ್ಬಂ ತಂಡವು, ಕೃತಿ ಚೌರ್ಯದ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ. ಆ ಹಾಡಿನ ರಚನೆಗೆ ಕಾರಣರಾದ ಕ್ರಿಯೇಟಿವ್ ತಂಡದ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ. ಹಾಡಿನಲ್ಲಿ ನಿರಾಕರಿಸಲಾಗದ ಸಾಮ್ಯತೆ ಇರುವುದನ್ನು ಗುರುತಿಸಿದ್ದೇವೆ ಎಂದು ತೈಕ್ಕುಡಂ ಬ್ರಿಡ್ಜ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.
ಸೇಮ್ ಟು ಸೇಮ್ ಅಲ್ಲ, ಶೈಲಿಯಷ್ಟೇ ಬಳಸಿದ್ದೇನೆ !
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಾವು ಯಾವುದೇ ಟ್ಯೂನ್ ಅನ್ನು ಕದ್ದಿಲ್ಲ. ಒಂದೇ ರೀತಿಯ ರಾಗಗಳನ್ನು ಮತ್ತು ಅಲ್ಲಿನ ಶೈಲಿಯನ್ನು ನಾವಿಲ್ಲಿ ಬಳಸಿಕೊಂಡಿದ್ದೇವೆ. ಆದರೆ, ಕಂಪೋಸಿಂಗ್ ಬೇರೆಯದೇ ಇದೆ. ಹಾಗಾಗಿ ಈ ಎರಡೂ ಹಾಡುಗಳು ಬೇರೆ ಬೇರೆ. ರೆಫರೆನ್ಸ್‌ಗೆ ಎಂದು ಒಮ್ಮೊಮ್ಮೆ ಹಾಡುಗಳನ್ನು ರಫ್ ಆಗಿ ಬಳಸಿರುತ್ತೇವೆ. ಆದರೆ ನಾನು ಕಾಪಿ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ರಾಕ್ ಮ್ಯೂಸಿಕ್ ಸ್ಟೈಲ್, ಟೆಂಪೋ, ರಾಗವನ್ನು ಬಳಸಲು ಆ ಹಾಡು ಸ್ಫೂರ್ತಿ ನೀಡಿದೆ. ಈ ಹಿಂದೆಯೂ "ನವರಸಂ" ಹಾಡನ್ನು ಕೇಳಿದ್ದೇನೆ. ಆ ಹಾಡು ನನಗೆ ಸ್ಫೂರ್ತಿ ನೀಡಿತ್ತು. ಎರಡು ಒಂದೇ ಥರ ಇದೆ ಎನಿಸಿದರೆ, ಅದಕ್ಕೆ ಕಾರಣ ಅದರ ರಾಗ. ತೋಡಿ, ವರಾಳಿ, ಮುಖಾರಿ ರಾಗಗಳನ್ನು ಮಿಕ್ಸ್ ಮಾಡಿ ಈ "ವರಾಹ ರೂಪಂ" ಹಾಡನ್ನು ಮಾಡಿದ್ದೇನೆ. ಸಂಗೀತ ಬಲ್ಲವರಿಗೆ ಇದನ್ನು ಕೇಳಿಸಿದರೆ ಆ ಹಾಡೇ ಬೇರೆ ಈ ಹಾಡೇ ಬೇರೆ ಎಂದು ಹೇಳುತ್ತಾರೆ ಎಂದು ಅಜನೀಶ್ ಹೇಳಿದ್ದಾರೆ.
Ever since the music for Varaha roopam daiva dropped, music fans have been elated, mesmerised and angry in equal measure. The song is from one of the highest-grossing Kannada films this year, the Rishab Shetty-directed Kantara (forest). Released earlier this month, the ecological thriller has gripped the audience's imagination and is now in the grips of a controversy.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm