ಬ್ರೇಕಿಂಗ್ ನ್ಯೂಸ್
06-11-22 12:38 pm HK News Desk ಕರ್ನಾಟಕ
ಚಿಕ್ಕಮಗಳೂರು, ನ.6: ಮಂಗಳೂರಿನಲ್ಲಿ ನಾವು ಬಿಜೆಪಿಯನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಬಿಜೆಪಿ ಜಾತಿ, ಧರ್ಮಕ್ಕೆ ದ್ರೋಹ ಮಾಡಿದ್ದು, ಆಜಾನ್ ನೆಪದಲ್ಲಿ ಕೂಗೆಬ್ಬಿಸಲು ಹೋಗಿ 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ. ಈಗ ರಾತ್ರಿ ವೇಳೆ ಗಣೇಶ ಹಬ್ಬ ಮಾಡೋಕ್ಕಾಗುತ್ತಾ ಎಂದು ಮಧು ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ವಿ.ಎಚ್.ಪಿಯವರೇ ಮುಖ್ಯ ಪಾತ್ರಧಾರಿಗಳು. ಅಲ್ಲಿ ಪ್ರತಿ ಬಾರಿ ಬೆಂಕಿ ಹಚ್ಚುವವರು ಅವರೇ. ಆಜಾನ್ ಹೆಸರಲ್ಲಿ ಮುಸ್ಲಿಮರಿಗೆ ಮೋಸ ಮಾಡಿದ್ದು ಬಿಜೆಪಿಯವರು. ಆಜಾನ್ ಕೂಗಿನಿಂದ ಯಾರೂ ಹೃದಯಾಘಾತವಾಗಿ ಸತ್ತಿಲ್ಲ. ಯಾವತ್ತೋ ಕೋರ್ಟ್ ಆದೇಶ ಮಾಡಿತ್ತು. ಅದು ಜಾರಿಗೆ ಬಂದಿರಲಿಲ್ಲ. ಅದನ್ನು ಜಾರಿ ಮಾಡಲು ಹೋಗಿ ಹಿಂದುಗಳಿಗೂ ಮೋಸ ಮಾಡಿದ್ದಾರೆ ಎಂದರು.

ಹಿಂದೂಗಳಿಗೆ ಏಕೆ ಬಿಜೆಪಿ ಮೇಲೆ ಸಿಟ್ಟು, ದ್ವೇಷ ಅಂದರೆ, ಅವರದ್ದು ಆಫ್ ಮಾಡಿಸಲು ಹೋಗಿ ಹಿಂದೂಗಳ ಮೈಕ್ ಆಫ್ ಮಾಡಿಸಿದ್ದಾರೆ. ಜಾತಿ, ಧರ್ಮಕ್ಕೆ ದ್ರೋಹ ಮಾಡಿದವರು ಬಿಜೆಪಿಯವರು. ನಾನು ಹೇಳುವುದು ಇಷ್ಟೆ. ಮಂಗಳೂರಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸೀಟು. ಆದರೆ, ಈ ಬಾರಿ ಮಂಗಳೂರಿನಲ್ಲಿ ಬಿಜೆಪಿಯವರನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ. ನಾನು ಈಗ ಹೇಳಕ್ಕೋಗುವುದಿಲ್ಲ. ಚುನಾವಣೆ ಬಂದಾಗ ಗೊತ್ತಾಗುತ್ತದೆ ಎಂದು ಮಧು ಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಏನಾಗಿತ್ತು. ಅಲ್ಲಿ ನಳಿನ್ ಕುಮಾರ್ ಕಾರಿನ ಟೈರ್ ಪಂಚರ್ ಮಾಡಿದ್ದು ಯಾರು? ಅಲ್ಲಿ ಕಾರನ್ನು ಅಲ್ಲಾಡಿಸಿದ್ದು ಯಾರು? ಇದೇ ಬಜರಂಗದಳ, ವಿಎಚ್ ಪಿಯವರು. ಬೇರೆ ಯಾರೂ ಅಲ್ಲ. ಇವರು ಅಧಿಕಾರಕ್ಕೆ ಬಂದು ಕೊಲೆ ರಾಜಕೀಯ ಮಾಡುತ್ತಿದ್ದಾರೆ ಅಂತ ಅವರಿಗೆ ಅರ್ಥ ಆಗಿದೆ. ಅದಕ್ಕಾಗಿ ಗೋ ಬ್ಯಾಕ್ ಸುನಿಲ್, ನಳಿನ್ ಅಂತ ಘೋಷಣೆ ಕೂಗಿದ್ದಾರೆ. ಆರೆಸ್ಸೆಸ್ ಮಂದಿಯೇ ಈ ಘೋಷಣೆ ಕೂಗಿದ್ದಾರೆ. ಇವರು ಅಧಿಕಾರಕ್ಕೆ ಬಂದು ಕೊಲೆ ರಾಜಕೀಯವನ್ನೇ ಮಾಡಿದ್ದು ಬೇರೇನೂ ಮಾಡಿಲ್ಲ. ಜನ ಪಾಠ ಕಲಿಸಲು ತಯಾರಾಗಿದ್ದಾರೆ ಎಂದರು.
See what will be the position of BJP in Mangalore in coming election challenges Madhu Bangarappa
23-09-26 05:14 pm
HK News Staffer
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 08:12 pm
HK News Staffer
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm
ರೌಡಿಶೀಟರ್ ಜೊತೆಗೆ ಹುಟ್ಟುಹಬ್ಬ ಪಾರ್ಟಿಯಲ್ಲಿ ಕುಡಿದ...
23-09-26 05:10 pm
ಸೈಬರ್ ಕ್ರೈಮ್ ಪೊಲೀಸರೆಂದು ಹೇಳಿ ವೈದ್ಯರಿಂದಲೇ 1.19...
23-09-26 09:32 am
Inspector Balakrishna Arrest, Police: ಮೇಲಧಿಕಾ...
22-09-26 09:00 pm