ಬ್ರೇಕಿಂಗ್ ನ್ಯೂಸ್
06-11-22 07:31 pm HK News Desk ಕರ್ನಾಟಕ
ಗದಗ, ನ.6: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ತಮ್ಮ ಕೈಯನ್ನು ಶುದ್ಧವಾಗಿ ಕೈ ಇಟ್ಟುಕೊಂಡಿರುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ, ವಿಚಾರವಾದಿ ಬಿ.ಟಿ.ಲಲಿತಾ ನಾಯಕ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು. ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇದರಿಂದ ನದಿಯಲ್ಲಿ ಹೆಣಗಳು ತೇಲಿ ಬರುತ್ತವೆ. ಇಂತಹ ಜಲವನ್ನು ಗಂಗಾಜಲವೆಂದು ಯಾಕೆ ಕುಡಿಯಬೇಕು ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ.
ಕಾಣದ ದೇವರಿಗೆ ಪೂಜೆ ಮಾಡುವಾಗ ಹೂವು, ಬಟ್ಟೆ ಯಾಕೆ ಹಾಕಬೇಕು. ದೇವಸ್ಥಾನದಲ್ಲಿ ಯಾರೋ ಹೇಳಿದರೆಂದು ದುಡ್ಡು ಹಾಕುತ್ತಾರೆ. ಜನರು ಅನಗತ್ಯವಾಗಿ ಹಣ ಪೋಲು ಮಾಡಬಾರದು. ಆದರೆ ಈಗ ಜನರಿಗೂ ತಿಳುವಳಿಕೆ ಬಂದಿದೆ. ಜನರು ದೇವಸ್ಥಾನದಲ್ಲಿ ದುಡ್ಡು ಹಾಕುತ್ತಿಲ್ಲ ಎಂದು ಹೇಳಿದರು.
ಪೂಜೆ ಎಂದರೆ ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಎಂದರ್ಥ. ಇದನ್ನು ಸರ್ಕಾರಗಳು, ಸಂಘ- ಸಂಸ್ಥೆಗಳು ಜನರಿಗೆ ಮನವರಿಕೆ ಮಾಡಬೇಕಾಗಿದೆ. ವೈಜ್ಞಾನಿಕ ಸತ್ಯ ಏನಿವೆಯೋ ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರ ಸಿನಿಮಾ ಮತ್ತು ದೈವ ನರ್ತಕರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದ ಲಲಿತಾ ನಾಯಕ್ ಭಾರೀ ಟೀಕೆಗೆ ಒಳಗಾಗಿದ್ದರು.
Theertham in the temple will cause many diseases another controversy by activist Lalitha Naik
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm