ಬ್ರೇಕಿಂಗ್ ನ್ಯೂಸ್
09-11-22 10:16 pm Bangalore Correspondent ಕರ್ನಾಟಕ
ಬೆಂಗಳೂರು, ನ.9: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಜಗತ್ತಿನ ಅತಿ ಎತ್ತರದ ಕಂಚಿನ ಪ್ರತಿಮೆ ಎಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಈ ಕುರಿತ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ "ಪ್ರಗತಿಯ ಪ್ರತಿಮೆ"ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬುದು ನಮಗೆ ಹೆಮ್ಮೆಯ ವಿಷಯ.
108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ. ಪ್ರಗತಿಯ ಪ್ರತಿಮೆ, ಬನ್ನಿನಾಡ ಕಟ್ಟೋಣ ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿಮೆ ವಿಶೇಷತೆಗಳು;
ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗಳಿಕೆಗೆ ಪಡೆದಿದೆ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್ ಕ್ರಿಯೇಷನ್ಸ್ ಅವರೇ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.
ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ. 120 ಟನ್ ಉಕ್ಕನ್ನು ಪ್ರತಿಮೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. 98 ಟನ್ ಕಂಚನ್ನು ಬಳಕೆ ಮಾಡಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ 84 ಕೋಟಿ ರೂ. ಖರ್ಚು ಮಾಡಲಾಗಿದೆ.
ನವೆಂಬರ್ 11ರಂದು ನಡೆಯುವ ಕೆಂಪೇಗೌಡ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ವಿಡಿಯೋಗೆ ನಟ ಯಶ್ ಹಿನ್ನಲೆ ಧ್ವನಿ ನೀಡಿದ್ದಾರೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ "ಪ್ರಗತಿಯ ಪ್ರತಿಮೆ"ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬುದು ನಮಗೆ ಹೆಮ್ಮೆಯ ವಿಷಯ.108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ.#ಪ್ರಗತಿಯಪ್ರತಿಮೆ #ಬನ್ನಿನಾಡಕಟ್ಟೋಣ pic.twitter.com/sFERth0Xwv
— Basavaraj S Bommai (@BSBommai) November 9, 2022
The 108 feet statue of Nadaprabhu Kempegowda, which Prime Minister Narendra Modi will unveil on Friday is the "first and tallest bronze statue of a founder of a city", as per 'World Book of Records'.Called the "Statue of Prosperity", it has been built to commemorate the contribution of Kempegowda, the founder of the city, towards the growth of Bengaluru."A matter of pride for us that the Statue of Prosperity is the first and tallest bronze statue of a founder of a city as per World Book of Records.
02-01-25 02:44 pm
Bangalore Correspondent
ಹಾಸನ ; ಕೆರೆ ಬಳಿ ನ್ಯೂ ಇಯರ್ ಪಾರ್ಟಿ, ಮುಳುಗಿ ಇಬ್ಬ...
01-01-25 11:03 pm
Hassan Drunkards Office: ನಿತ್ಯ ದುಡಿ.. ಸತ್ಯ ನು...
31-12-24 10:06 pm
Honnavara Accident, Mangalore: ಹೊಸ ವರ್ಷಾಚರಣೆಯ...
31-12-24 05:47 pm
Soldier Poonch Accident: ಜಮ್ಮು ಕಾಶ್ಮೀರದಲ್ಲಿ ಸ...
30-12-24 01:13 pm
02-01-25 12:02 pm
HK News Desk
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ ; ಆಫ್ರಿಕಾದಲ್ಲ...
31-12-24 11:57 am
ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್...
30-12-24 11:14 pm
Maha Kumbh Mela 2025: 12 ವರ್ಷಗಳ ಬಳಿಕ ಉತ್ತರ ಪ್...
29-12-24 10:23 pm
02-01-25 03:16 pm
Mangalore Correspondent
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
Veddavyas Kamath, Mangalore: ಡೆತ್ ನೋಟ್ ಬರೆದಿಟ...
01-01-25 10:16 pm
MP Brijesh Chowta, ESI Hospital in Mangalore:...
01-01-25 09:55 pm
Mangalore, Ullal News: ಜ.3ರಂದು ಹರೇಕಳದಲ್ಲಿ ಉಳ್...
01-01-25 07:01 pm
31-12-24 11:32 am
Bangalore Correspondent
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm