ಬ್ರೇಕಿಂಗ್ ನ್ಯೂಸ್
09-11-22 11:00 pm HK News Desk ಕರ್ನಾಟಕ
ಧಾರವಾಡ, ನ.9 : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ ನಗರ ಪಾಲಿಕೆ ಅನುಮತಿ ನೀಡಿದ್ದು ಖಟ್ಟರ್ ಹಿಂದುತ್ವವಾದಿಗಳ ಕಣ್ಣು ಕೆಂಪಗಾಗಿಸಿದೆ. ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು, ಹುಬ್ಬಳ್ಳಿ ಚನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡಲು ಅವಕಾಶ ಕೊಟ್ಟಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ತಪ್ಪು ಮಾಡಿದ್ದೀರಾ, ಬಿಜೆಪಿ ಆಡಳಿತದಲ್ಲಿ ಇರುವ ಪಾಲಿಕೆ ದ್ರೋಹ ಮಾಡಿದೆ. ಅತ್ಯಂತ ನೀಚ ಕೆಲಸ ಮಾಡಿದ್ದಾರೆ ಎಂದು ನಾನು ಹೇಳ್ತೇನೆ. ಇದೇ ಬಿಜೆಪಿಯವರು ಟಿಪ್ಪು ಜಯಂತಿ ಬ್ಯಾನ್ ಮಾಡಿದ್ರು, ಬ್ಯಾನ್ ಮಾಡಿದವರೇ ಅನುಮತಿ ಕೊಡ್ತಾರೆ ಎಂದರೆ ಇವರ ನಿಲುವು ಹೇಗಿದೆ. ಇವರಿಗೆ ತತ್ವ ಬೇಕಾಗಿಲ್ಲ, ಅಧಿಕಾರ ಬೇಕು, ಓಲೈಕೆ ಬೇಕು.
ಇವರ ನಿಲುವು ಬಟಾಬಯಲಾಗಿದೆ, ಎಂಐಎಂ ದೇಶದ್ರೋಹಿ ಪಕ್ಷ. ಇಂತಹ ಪಕ್ಷಕ್ಕೆ ಮನ್ನಣೆ ಕೊಡ್ತೀರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದೀರಿ, ಮತಾಂಧ, ದೇವಸ್ಥಾನ ಧ್ವಂಸ ಮಾಡಿದ ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ. ನಿಮಗೆ ಕ್ಷಮೆ ಮಾಡಲು ಸಾಧ್ಯವಿಲ್ಲ. ನೀವು ಅನುಮತಿ ಕೊಟ್ಟು ತಪ್ಪು ಮಾಡಿದ್ದೀರಿ, ಕನ್ನಡಿಗರು ತಮಗೆ ಎಂದೂ ಕ್ಷಮೆ ಮಾಡಲ್ಲ.
ಹಿಂದೂಗಳಿಗೆ ದ್ರೋಹ ಮಾಡಿದ್ದೀರಿ, ಇದನ್ನ ರದ್ದು ಮಾಡಿ ವಾಪಸ್ ತಗೋಬೇಕು. ಇದು ಸರಿಯಲ್ಲ, ಇದನ್ನ ನಾನು ಖಂಡಿಸುತ್ತೇನೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಆಡಳಿತ ಇರುವ ಹುಬ್ಬಳ್ಳಿ ಮಹಾನಗರ ಪಾಲಿಕೆಯು ಟಿಪ್ಪು ಜಯಂತಿ ಎಲ್ಲ ರೀತಿಯ ಜಯಂತಿ, ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡುವುದಾಗಿ ಹೇಳಿತ್ತು. ಪಾಲಿಕೆಯ ವಿಪಕ್ಷ ನಾಯಕರು ವಿರೋಧ ಮಾಡಿದರೂ, ಈ ರೀತಿ ನಿರ್ಣಯ ಮಾಡಿದ್ದು ಬಿಜೆಪಿ ಮತ್ತು ಹಿಂದು ಸಂಘಟನೆ ನಾಯಕರ ವಿರೋಧಕ್ಕೆ ಕಾರಣವಾಗಿದೆ.
Hubli civic body grants permission to celebrate Tipu Jayanti at Idgah Maidan, Muthalik slams BJP. The Hubli-Dharwad Municipal Corporation today granted permission to celebrate Tipu Jayanti as well as Kanakadasa Jayanti at Idgah Maidan in Hubli on November 10 and 11. Those celebrating will have to pay Rs 10,000 to the corporation for the celebration of such events.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm