ಬ್ರೇಕಿಂಗ್ ನ್ಯೂಸ್
12-11-22 10:44 pm Bangalore Correspondent ಕರ್ನಾಟಕ
ಬೆಂಗಳೂರು, ನ.12: ವಿವಾದಕ್ಕೆ ಒಳಗಾಗಿದ್ದ ಕಾಂತಾರಂ ಚಿತ್ರದ ವರಾಹ ರೂಪಂ ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದೆ. ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ತಮ್ಮ ಹಾಡಿನ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಾಡನ್ನ ತೆರವು ಮಾಡಲಾಗಿದೆ.
ಹಾಡು ಜಗತ್ತಿನಾದ್ಯಂತ ವೈರಲ್ ಆಗಿದ್ದ ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ. ನವೆಂಬರ್ 11ರಿಂದ ಹಲವಾರು ಸೋಷಿಯಲ್ ಮೀಡಿಯಾದ ಅಕೌಂಟ್ಗಳಿಂದ ಈ ಹಾಡು ಡಿಲೀಟ್ ಆಗಿದ್ದು ಕೋರ್ಟ್ ಆದೇಶಕ್ಕೆ ಕಾಂತಾರ ತಂಡ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.
ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಇದೇ ರೀತಿ ವರಾಹರೂಪಂ ಹಾಡನ್ನು ಪ್ಲೇ ಮಾಡದಂತೆ ಕೋಜಿಕ್ಕೋಡ್ ಕೋರ್ಟ್ ಆದೇಶ ಮಾಡಿತ್ತು.
ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ 'ಹೊಂಬಾಳೆ ಫಿಲ್ಮ್ಸ್ ತಂಡವು ಯೂಟ್ಯೂಬ್ ಚಾನೆಲ್ಗಳಲ್ಲಿ ವರಾಹ ರೂಪಂ ಸಾಂಗ್ ಅಪ್ಲೋಡ್ ಮಾಡಲಾಗಿತ್ತು. ಈಗ 'ಹೊಂಬಾಳೆ ಫಿಲ್ಮ್ಸ್' ಯೂಟ್ಯೂಬ್ ಚಾನೆಲ್ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್ ಜಿಯೊ ಸಾವನ್ನಲ್ಲಿಯೂ ಈ ಹಾಡು ಕೇಳಲು ಲಭ್ಯವಿಲ್ಲ.
ಟ್ಯೂನ್ ಕದ್ದಿಲ್ಲ ಎಂದಿದ್ದ ಅಜನೀಶ್
ಅಜನೀಶ್ ಅವರು ಹಾಡಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಈ ಹಾಡನ್ನು ಕಾಪಿ ಮಾಡಿಲ್ಲ ಎಂದು ಹೇಳಿದ್ದರು. ಈ ರಾಗಗಳು ಭಿನ್ನವಾಗಿದೆ, ಆದರೆ ಅದರಿಂದ ಪ್ರೇರಣೆ ಪಡೆದಿದ್ದೆವು ಎಂದು ಹೇಳಿದ್ದರು. ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿದ್ದು ಪ್ರಸಿದ್ಧಿ ಪಡೆದಿವೆ. ಇದೇ ತಂಡ ನವರಸಂ ಎನ್ನುವ ಹಾಡನ್ನು ತಯಾರಿಸಿತ್ತು. ಈ ಹಾಡು ವರಾಹ ರೂಪಂ ಸಾಂಗ್ನ ಅದೇ ಟ್ಯೂನ್ ಹೋಲುತ್ತಿದ್ದು ಈ ಕಾರಣದಿಂದ ವಿವಾದ ತಲೆದೋರಿದೆ.
Rishabh Shetty starrer and director 'Kantara', which has created a new atmosphere not only in Karnataka but also in the country and abroad, has now again come to the fore as a matter of plagiarism.Rishabh Shetty starrer and director 'Kantara', which has created a new atmosphere not only in Karnataka but also abroad for the past few days, has now again come to the fore as a matter of plagiarism.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am