ಬ್ರೇಕಿಂಗ್ ನ್ಯೂಸ್
18-11-22 03:23 pm Bangalore Correspondent ಕರ್ನಾಟಕ
ಬೆಂಗಳೂರು, ನ.18: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಹಾಯಕನಾಗಿದ್ದ ಹರೀಶ್ ಎಂಬವರನ್ನು ವಿಧಾನಸೌಧದಲ್ಲಿ ಕೆಲಸಕ್ಕಿರುವ ಮಹಿಳೆಯೇ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಲ್ಲದೆ, ಆತನಿಂದ ರಾಜ್ಯ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ.
ವಿಧಾನ ಪರಿಷತ್ ವಿಭಾಗದಲ್ಲಿ ಡಿ ದರ್ಜೆ ನೌಕರಳಾಗಿರುವ ಯುವತಿಯೊಬ್ಬಳು ಸಿಎಂ ಬೊಮ್ಮಾಯಿ ಅವರ ಪಿಎ ಆಗಿರುವ ಹರೀಶ್ ಅವರನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ 15 ದಿನಗಳ ಹಿಂದೆಯೇ ಸುದ್ದಿ ಹರಿದಾಡಿತ್ತು. ಆನಂತರ, ಹರೀಶ್ ಅವರನ್ನು ಆ ಹುದ್ದೆಯಿಂದ ತೆಗೆದು ಹಾಕಲಾಗಿತ್ತು ಎನ್ನಲಾಗುತ್ತಿದೆ. ಇದೀಗ ಯುವತಿ, ಮುಖ್ಯಮಂತ್ರಿ ಪಿಎಯನ್ನು ಬ್ಲಾಕ್ಮೇಲ್ ಮಾಡಿ ಹಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾಳೆ ಎನ್ನುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.
ಯುವತಿ ಬ್ಲಾಕ್ಮೇಲ್ ಮಾಡಿ ಹಣ ವಸೂಲಿಯನ್ನೂ ಮಾಡಿದ್ದಾಳೆ. ಅಲ್ಲದೆ, ಮಹತ್ವದ ಕಡತ, ಇನ್ನಿತರ ದಾಖಲೆಗಳನ್ನು ವಿಪಕ್ಷ ನಾಯಕರಿಗೆ ಯುವತಿ ನೀಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜನ್ಮಭೂಮಿ ಫೌಂಡೇಶನ್ ಹೆಸರಲ್ಲಿ ವಕೀಲ ನಟರಾಜ್ ಶರ್ಮಾ ಎಂಬವರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ, ಹರೀಶ್ ನನ್ನು 15 ದಿನಗಳಿಂದ ಮನೆಗೆ ಕಳಿಸಿದ್ದು ಮತ್ತು ಈ ಪ್ರಕರಣವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ರವಿಕುಮಾರ್ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿದ್ದಾರೆ ಎನ್ನುವ ವಿಚಾರವನ್ನೂ ದೂರಿನಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ ಯುವತಿ ಮುಖ್ಯಮಂತ್ರಿ ಪಿಎ ಹರೀಶ್ ಜೊತೆ ಸಲುಗೆ ಬೆಳೆಸಿ ಟ್ರ್ಯಾಪ್ ಮಾಡಿದ್ದಾಳೆ. ಬಳಿಕ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ 15 ದಿನಗಳ ಹಿಂದೆ ವಿಷಯ ಹೊರ ಬರುತ್ತಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆನಂತರ, ಎಂಎಲ್ಸಿಯೂ ಆಗಿರುವ ರವಿ ಕುಮಾರ್, ಹನಿಟ್ರ್ಯಾಪ್ ಪ್ರಕರಣ ಪಕ್ಷ ಮತ್ತು ಸರಕಾರಕ್ಕೆ ಮುಜುಗರ ತಂದಿಡುತ್ತೆ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ಯುವತಿ ಜೊತೆಗೆ ಮಾತುಕತೆ ಮಾಡಿ ಪ್ರಕರಣ ಇತ್ಯರ್ಥಗೊಳಿಸಲು ಯತ್ನಿಸಿದ್ದರು. ಆದರೆ, ಈ ಬಗ್ಗೆ ಸೂಕ್ತವಾಗಿ ತನಿಖೆ ನಡೆಸದೇ ಮುಚ್ಚಿ ಹಾಕಿದ ಕಾರಣ ನಟರಾಜ್ ಶರ್ಮ ಎಂಬವರು ಈಗ ಪೊಲೀಸ್ ದೂರು ನೀಡಿ, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಈ ರೀತಿ ಮುಖ್ಯಮಂತ್ರಿ ಜೊತೆಗಿರುವ ಪ್ರಮುಖರನ್ನು ಹನಿಟ್ರ್ಯಾಪ್ ನಡೆಸುವುದು, ಬ್ಲಾಕ್ಮೇಲ್ ಮಾಡಿ ಮಹತ್ವದ ಕಡತಗಳನ್ನು ಪಡೆದುಕೊಳ್ಳುತ್ತಿರುವ ಪ್ರಕರಣ ಇದು ಮೊದಲೇನಲ್ಲ. ಈ ಹಿಂದಿನ ಸರಕಾರದಲ್ಲಿಯೂ ಇಂತಹದ್ದೇ ಘಟನೆಗಳು ನಡೆದಿವೆ. ವಿಧಾನಸೌಧದಲ್ಲಿ ಯುವತಿಯರನ್ನೇ ಮುಂದಿಟ್ಟು ಪ್ರತಿಪಕ್ಷಗಳು ಆಡಳಿತ ಪಕ್ಷದವರನ್ನು ಬ್ಲಾಕ್ಮೇಲ್ ನಡೆಸುವ ಕೆಲಸ ಮಾಡುತ್ತಾರೆ. ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಬೇಕಾಗಿದೆ. ಅದಕ್ಕಾಗಿ ದೂರು ಕೊಟ್ಚಿದ್ದೇನೆ ಎಂದು ನಟರಾಜ್ ಶರ್ಮ ಹೇಳಿದ್ದಾರೆ.
Karnataka CM Bommai PA Harish Honey trapped by woman at Vidhana Soudha, blackmailed and most importantly important documents have been snatched. It is alleged that it was done by the opposition party congress.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am