ಬ್ರೇಕಿಂಗ್ ನ್ಯೂಸ್
12-12-22 07:11 pm HK News Desk ಕರ್ನಾಟಕ
ಮೈಸೂರು, ಡಿ.12 : ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಿಜೆಪಿಯಲ್ಲಿ ನಾನು ಸಕ್ರಿಯವಾಗಿಲ್ಲ. ಅಕ್ರಮವಾಗಿದ್ದೇನೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿಯವರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಚುನಾವಣೆ ವೇಳೆಗೆ ಬಿಜೆಪಿಯಿಂದ 10ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಂಬರ್ ವನ್ ಆಗಿದ್ದಾರೆ. ನನಗೆ ಬಿಜೆಪಿ ಸಹವಾಸ ಸಾಕಾಗಿದೆ. ಹೆಚ್. ವಿಶ್ವನಾಥ್ ಅವರಿಗೆ ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪನವರಿಗೂ ಅನ್ಯಾಯ ಮಾಡಿದ್ದಾರೆ. ವಿಜಯೇಂದ್ರನನ್ನು ವರುಣಾ ಕ್ಷೇತ್ರಕ್ಕೆ ಕರೆತಂದು ಅವರನ್ನೂ ಮುಗಿಸಲು ಹೊರಟಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯಕ್ಕಾಗಿ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ನಾನು ಜೆಡಿಎಸ್ ನಿಂದ ವಿಧಾನ ಪರಿಷತ್ ಸದಸ್ಯನಾಗಿದ್ದರೂ ಬಿಜೆಪಿ ಸರಕಾರ ಬರಲು ಸಹಾಯ ಮಾಡಿದೆ. ಆದರೆ ನನಗೆ ಬಿಜೆಪಿಯವರು ಅಧಿಕಾರಕ್ಕೆ ಬಂದು ಅನ್ಯಾಯ ಮಾಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ. ಯಡಿಯೂರಪ್ಪನವರಿಗೆ ಅನ್ಯಾಯ ಮಾಡಿದ ಬಿಜೆಪಿಯವರಿಗೆ 40 ಸ್ಥಾನ ನಷ್ಟವಾಗಲಿದೆ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಸೇರುವ ಕುರಿತಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಜೊತೆ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
As the preparations for the assembly elections have started, defection activities have also intensified. Another wicket fell for the BJP in Mysore, with Vidhan Parishad member Sandesh Nagaraj all set to join the Congress. He has also stated that more than 10 MLAs from BJP will join Congress.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm