ಬ್ರೇಕಿಂಗ್ ನ್ಯೂಸ್
19-12-22 05:14 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.19 : ಡಿ ಬಾಸ್ ದರ್ಶನ್ ತನ್ನ ಕ್ರಾಂತಿ ಚಿತ್ರದ ಪ್ರಚಾರಕ್ಕೆ ತೆರಳಿದ್ದ ವೇಳೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಘಟನೆ ನಡೆದಿದ್ದು ಡಿ ಬಾಸ್ ಮತ್ತು ಪುನೀತ್ ಫ್ಯಾನ್ಸ್ ನಡುವಿನ ತಾಕಲಾಟ ಇದಕ್ಕೆ ಕಾರಣ ಎನ್ನುವ ಮಾತು ಕೇಳಿಬಂದಿದೆ.
ಕಾರ್ಯಕ್ರಮದ ಆಯೋಜನೆ ಆದಾಗಲೇ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಕಿಡಿ ಹೊತ್ತಿಕೊಂಡಿತ್ತು. ಸಾಂಗ್ ರಿಲೀಸ್ ಆಗಲಿದ್ದ ವಾಲ್ಮೀಕಿ ವೃತ್ತದಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಕಟ್ಟಿದ್ದರು. ಪುನೀತ್ ಕಟೌಟ್ ಹಾಗೂ ಬ್ಯಾನರ್ ಹಿಡಿದು ಸ್ಟೇಜ್ ಏರಿ ಕುಣಿದಿದ್ದರು.
ಭಾನುವಾರ ಹೊಸಪೇಟೆಗೆ ಬಂದ ನಟ ದರ್ಶನ್ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದರು. ಬಳಿಕ ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೊಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮವೂ ಸರಾಗವಾಗಿ ನಡೆದಿತ್ತು. ಇದರ ಬೆನ್ನಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಮೇಲೆ ಚಪ್ಪಲಿ ಬಿಸಾಡಿದ್ದಾನೆ. ಈ ಘಟನೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಚಪ್ಪಲಿ ಎಸೆತ, ಫ್ಯಾನ್ಸ್ ವಾರ್ ಗೆ ಏನು ಕಾರಣ ?
ಈ ಹಿಂದೆ ಪುನೀತ್ ಬಗ್ಗೆ ಆಡಿದ್ದ ಒಂದು ಮಾತು ದರ್ಶನ್ಗೆ ಮುಳುವಾಗಿದೆ ಎಂಬ ಮಾತು ಕೇಳಿಬಂದಿದೆ. ದರ್ಶನ್ ಈ ಹಿಂದೆ ಅಪ್ಪುಗೆ ಅಪಮಾನವಾಗುವ ರೀತಿ ಮಾತನಾಡಿದ್ದರು. ಸತ್ತ ಮೇಲೆ ಅಪ್ಪುವನ್ನು ಅಭಿಮಾನಿಗಳು ಮೆರೆಸ್ತಿದ್ದಾರೆ, ನನ್ನನ್ನು ಜೀವಂತವಾಗಿರುವಾಗಲೇ ಮೆರೆಸ್ತಿದ್ದಾರೆ ಎಂದಿದ್ದರು. ಇದರಿಂದ ಸಿಟ್ಟಾಗಿದ್ದ ಅಪ್ಪು ಅಭಿಮಾನಿಗಳು ವಿಜಯನಗರದಲ್ಲಿ ದರ್ಶನ್ ಸಿನಿಮಾ ರಿಲೀಸ್ ಮಾಡಲು ಬಿಡಲ್ಲ ಎಂದಿದ್ದರು. ನಿನ್ನೆ ದರ್ಶನ್ ಹೊಸಪೇಟೆಗೆ ಬಂದಾಗ ಇದರ ಎಫೆಕ್ಟ್ ಕಂಡುಬಂದಿದೆ.
ದರ್ಶನ್ ಬರುವ ಸುದ್ದಿ ತಿಳಿದು ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವಾಲ್ಮೀಕಿ ಸರ್ಕಲ್ನಲ್ಲಿ ಜಮಾಯಿಸಿ ದರ್ಶನ್ ವಿರುದ್ಧ ಧಿಕ್ಕಾರ ಕೂಗಿದ್ದರು. ಇದೇ ವೇಳೆ, ಕೆಲವರು ದರ್ಶನ್ ಬ್ಯಾನರ್ಗಳನ್ನು ಹರಿದು ಕಿತ್ತೆಸೆದಿದ್ಧಾರೆ. ದರ್ಶನ್ ಬಂದಿದ್ದ ವಾಹನದ ಮೇಲೆ ಕಲ್ಲು ತೂರಿದ್ದಾರೆ. ಜನರು
ಚಪ್ಪಲಿ ಎಸೆದು ವಾಲ್ಮೀಕಿ ಸರ್ಕಲ್ನಿಂದ ದರ್ಶನ್ ಅವರನ್ನು ಓಡಿಸಿದ್ದಾರೆ. ಚಪ್ಪಲಿ ಎಸೆಯುತ್ತಿದ್ದಂತೆ ದರ್ಶನ್ ವಾಲ್ಮೀಕಿ ಸರ್ಕಲ್ನಿಂದ ಕಾಲ್ಕಿತ್ತಿದ್ದಾರೆ.
ತಪ್ಪೇನು ಇಲ್ಲ ಚಿನ್ನ ಪರವಾಗಿಲ್ಲ 💔
— ʜᴇᴍᴀɴᴛʜ #sᴘʀᴇᴀᴅʙᴏssɪsᴍᴷʳᵃⁿᵗⁱ ᴼⁿ ²⁶ᵗʰ ᴶᵃⁿ (@Hemanth61218937) December 18, 2022
ದೇವರು ಆಗಿಬಿಟ್ರಿ ಬಾಸ್ ಇವತ್ತು 🙏
ನಿಮ್ಮ ಜಾಗದಲ್ಲಿ ಬೇರೆ ಅವರು ಇದಿದ್ರೆ ಏನಾದ್ರು ಆಗ್ತಿತ್ತು 🙏@PuneethRajkumar Worst slum fans#DBoss #Kranti @dasadarshan pic.twitter.com/HvHo25yZtx
ಈ ತರಾ ಮಾಡಬಾರದಿತು ಸರಿ ಅಲ್ಲಾ ಕಣ್ರೋ ಒಬ್ಬ ಕಲಾವಿದರಿಗೆ ಈ ತರಾ ಮಾಡಿದ್ರೆ ಯಾರೊ ಕೂಡಾ ಒಪ್ಪಲ್ಲ ನಿಮ್ಮನ್ನ....🥺🙏🏻
— ʙᴀᴀᴅsʜᴀʜᵏⁱᶜᶜʰᵃ👑 (@BaadshahDHF) December 18, 2022
ಬೇಜಾರಾಯ್ತು 🥺#KicchaSudeep #Appu #DBoss #Yash pic.twitter.com/iX86PChFil
Darshan recently had to face the wrath of alleged Punneth Rajkumar fans as one of them attacked the Kranti actor with a slipper. This incident happened while the challenging star was busy promoting for Kranti at Hosapete. After the incident, the actor came up with a calm reply which is now winning interest. The Kannada superstar, who has been busy with one-one-interviews for the publicity of his upcoming film Kranti, was in Hosapete promoting his upcoming Pan India film Kranti.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm