ಬ್ರೇಕಿಂಗ್ ನ್ಯೂಸ್
19-12-22 05:25 pm HK News Desk ಕರ್ನಾಟಕ
ಬೆಳಗಾವಿ, ಡಿ.19 : ರಾಜ್ಯ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭಿಸುವುದಕ್ಕೂ ಮುನ್ನ ಬೆಳಗಾವಿಯ ಸುವರ್ಣ ಸೌಧ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಾರೆಂದು ಎಣಿಕೆ ಮಾಡಿದ್ದ ಆಡಳಿತ ಪಕ್ಷದ ನಾಯಕರು ಅಧಿವೇಶನ ಸಭಾಂಗಣದ ನಾಲ್ಕು ಬಾಗಿಲುಗಳನ್ನು ಮುಚ್ಚಿಕೊಂಡು ಸಾವರ್ಕರ್ ಫೋಟೊ ಅನಾವರಣ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವೀರ್ ಸಾವರ್ಕರ್ ಫೋಟೋ ಅನಾವರಣ ಮಾಡಿದರು.
ಅಧಿವೇಶನ ಸಭಾಂಗಣದ ಸುತ್ತಲೂ ಸಾವರ್ಕರ್ ಫೋಟೋ ಅಳವಡಿಕೆಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಆಡಳಿತ ಪಕ್ಷ ಲೆಕ್ಕ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಭಾಂಗಣದ ನಾಲ್ಕು ದಿಕ್ಕಿನ ಬಾಗಿಲುಗಳನ್ನು ಬಂದ್ ಮಾಡುವಂತೆ ಸ್ಪೀಕರ್ ಕಾಗೇರಿ ಸೂಚನೆ ನೀಡಿದರು. ಅದರಂತೆ, ಬಾಗಿಲು ಮುಚ್ಚಿ ಫೋಟೋ ಅನಾವರಣ ಮಾಡಲಾಯಿತು. ಈ ವೇಳೆ ಸಚಿವರಾದ ಜೆ.ಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಬೈರತಿ ಬಸವರಾಜ್, ಪ್ರಭು ಚೌವ್ಹಾಣ್ ಉಪಸ್ಥಿತರಿದ್ದರು.

ಸಾವರ್ಕರ್ ವಿಚಾರವನ್ನು ಕಾಂಗ್ರೆಸ್ ಈವರೆಗೂ ಸೈದ್ಧಾಂತಿಕವಾಗಿ ವಿರೋಧಿಸುತ್ತ ಬಂದಿತ್ತು. ಹೀಗಾಗಿ, ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆಯ ವಿಚಾರದಲ್ಲಿ ದೊಡ್ಡದಾಗಿ ಕಾಂಗ್ರೆಸ್ ನಾಯಕರು ಗಲಾಟೆ ಮಾಡಲಿದ್ದಾರೆ ಎಂದೇ ಬಿಜೆಪಿ ಲೆಕ್ಕ ಹಾಕಿತ್ತು. ಚುನಾವಣೆ ಕಾಲದಲ್ಲಿ ಕಾಂಗ್ರೆಸ್ ಗಲಾಟೆ ಎಬ್ಬಿಸಿದರೆ ಇದನ್ನೆ ಚುನಾವಣೆಗೆ ಬಳಸಿಕೊಳ್ಳುವ ಚಿಂತನೆಯನ್ನು ಬಿಜೆಪಿ ನಾಯಕರು ಮಾಡಿದ್ದರು. ಹಿಂದು ಮತಗಳನ್ನು ಪಡೆಯಲು ಕಾಂಗ್ರೆಸ್ ವಿರೋಧ ಪ್ರಮುಖ ಅಸ್ತ್ರವಾಗಲಿದೆ ಎಂಬ ನಿಲುವು ಬಿಜೆಪಿ ನಾಯಕರದ್ದಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಸಾವರ್ಕರ್ ಫೋಟೋ ಅಳವಡಿಕೆ ವಿರೋಧಿಸಿ ನಾವು ಪ್ರತಿಭಟನೆ ಮಾಡಲ್ಲ. ಅವರ ಫೋಟೋ ಜೊತೆಗೆ ಇನ್ನೂ ಹಲವು ನಾಯಕರ ಫೋಟೋ ಅಳವಡಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಹೇಳಿರುವುದು ಬಿಜೆಪಿ ಲೆಕ್ಕ ಬುಡಮೇಲು ಮಾಡಿದಂತಾಗಿದೆ.
ಅಸೆಂಬ್ಲಿ ಹೊರಗಡೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಕುವೆಂಪು ಸೇರಿದಂತೆ ಸಾಹಿತಿಗಳು, ಸಾಮಾಜಿಕ ಸುಧಾರಕರ ಫೋಟೋಗಳನ್ನು ಮುಂದಿಟ್ಟು ಎಲ್ಲರ ಫೋಟೋಗಳನ್ನೂ ಅಸೆಂಬ್ಲಿ ಹಾಲ್ ನಲ್ಲಿ ಹಾಕುವಂತೆ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವು ಪ್ರತಿಭಟನೆ ನಡೆಸುತ್ತಿಲ್ಲ. ಬದಲಿಗೆ, ಆಗ್ರಹವನ್ನು ಮಾಡುತ್ತಿದ್ದೇವೆ, ಸಾವರ್ಕರ್ ಜೊತೆಗೆ, ಇತರೇ ಮೇಧಾವಿಗಳ ಫೋಟೋಗಳನ್ನೂ ಹಾಕುವಂತೆ ಆಗ್ರಹಿಸುತ್ತೇವೆ. ಸ್ಪೀಕರ್ ಅವರು ಸಾವರ್ಕರ್ ತನಗೆ ತೋಚಿದ ರೀತಿ ಸಾವರ್ಕರ್ ಫೋಟೋ ಮಾತ್ರ ಅಳಡಿಸಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾವು ರಾಜ್ಯ ಸರಕಾರದ ಭ್ರಷ್ಟಾಚಾರ, ಹಗರಣಗಳನ್ನು ಅಸೆಂಬ್ಲಿಯಲ್ಲಿ ಬಯಲು ಮಾಡುತ್ತೇವೆಂದು ಹೆದರಿ ಸಾವರ್ಕರ್ ಫೋಟೋ ವಿಚಾರ ಮುಂದಿಟ್ಟಿದ್ದಾರೆ. ಇವರಿಗೆ ಬೇರೆ ಯಾವುದೇ ವಿಚಾರ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ಇವರಲ್ಲಿ ಬಂಡವಾಳ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಬೇಕು, ಹೊರ ನಡೆಯಬೇಕು ಅನ್ನುವ ಉದ್ದೇಶದಿಂದ ಸಾವರ್ಕರ್ ವಿಚಾರ ತಂದಿಟ್ಟಿದೆ ಎಂದು ಹೀಗಳೆದಿದ್ದಾರೆ. ಕಾಂಗ್ರೆಸ್ ನಾಯಕರು ಕೇವಲ ಆಗ್ರಹ ಮುಂದಿಟ್ಟು ಪ್ರತಿಭಟನೆ ಕೈಬಿಟ್ಟಿದ್ದು, ಬಿಜೆಪಿಯ ತಾವಂದುಕೊಂಡ ಯೋಜನೆ ಕೈಕೊಡುವಂತಾಗಿದೆ.
Karnataka unit of Congress on Monday staged a protest against the state BJP’s decision to install a picture of the controversial freedom fighter Veer Savarkar in the Legislative Assembly at Suvarna Vidhana Soudha here.Condemning the proposed move of installing Savarkar’s picture right behind the Speakers’ Chair, senior Congress MLAs, including the Opposition leader of Siddaramaiah, state party President D.K. Shivakumar staged a protest in the Assembly.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm