ಬ್ರೇಕಿಂಗ್ ನ್ಯೂಸ್
29-12-22 10:41 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.29 : ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಕುರಿತು ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, 2 ಸಿ ಹಾಗೂ 2 ಡಿ ಪ್ರವರ್ಗ ಸೃಷ್ಟಿಸಿ ಮೀಸಲಾತಿಯ ಮರು ಹಂಚಿಕೆಗೆ ನಿರ್ಧಾರ ಕೈಗೊಂಡಿದೆ.
ಎರಡು ಎ ಹಾಗೂ 2 ಬಿ ಜೊತೆಗೆ ಹೊಸದಾಗಿ 2ಸಿ ಹಾಗೂ 2ಡಿ ಪ್ರವರ್ಗ ಸೃಷ್ಟಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ 3ಎ ಪಟ್ಟಿಯಲ್ಲಿ ಇರುವ ಒಕ್ಕಲಿಗರನ್ನು 2 ಸಿಗೆ ಸೇರ್ಪಡೆ ಹಾಗೂ 3 ಬಿಯಲ್ಲಿ ಇದ್ದ ಲಿಂಗಾಯತರನ್ನು 2 ಡಿ ಗೆ ಸೇರ್ಪಡೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಹಿಂದುಳಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ನಿರ್ಣಯಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. 2 ಎ ವಿಭಾಗದಲ್ಲಿ 15 ಶೇಕಡಾ ಜನಸಂಖ್ಯೆ ಇದ್ದು, ಅವರಿಗೆ ನೀಡಲಾಗಿರುವ ಮೀಸಲಾತಿಯನ್ನು ಬದಲಾವಣೆ ಮಾಡುವುದಿಲ್ಲ. ಅದೇ ರೀತಿ 2 ಬಿ ಪ್ರವರ್ಗದಲ್ಲಿಯೂ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. 3 ಎ ವಿಭಾಗದಲ್ಲಿದ್ದ ಒಕ್ಕಲಿಗರನ್ನು 2 ಸಿಗೆ ತರಲು ಹಾಗೂ 3 ಬಿನಲ್ಲಿದ್ದ ಲಿಂಗಾಯತರನ್ನು 2 ಡಿ ಪ್ರವರ್ಗಕ್ಕೆ ಸೇರ್ಪಡೆ ಮಾಡಲಾಗುವುದು. 2 ಸಿ ಹಾಗೂ 2 ಡಿ ನಲ್ಲಿ 3 ಎ ಹಾಗೂ 3 ಬಿನಲ್ಲಿ ಇದ್ದ ಸವಲತ್ತುಗಳನ್ನು ಹಿಂದೆ ಇದ್ದ ರೀತಿಯಲ್ಲೇ ಮುಂದುವರಿಸಲಾಗುವುದು ಎಂದರು.
ಸದ್ಯಕ್ಕೆ 3A ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು ಇವೆ. 3B ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳು ಇವೆ. ಇದೀಗ ಪ್ರತ್ಯೇಕ 2 ಸಿ ಮತ್ತು 2 ಡಿ ಪ್ರವರ್ಗ ಸೃಷ್ಟಿಸಿ ಮೀಸಲಾತಿ ಮರುಹಂಚಿಕೆ ಮಾಡಲಾಗಿದೆ. 2 ಎಗೆ ಸೇರ್ಪಡೆ ಮಾಡಬೇಕು ಎಂಬುದು ಪಂಚಮಸಾಲಿಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಒಕ್ಕಲಿಗರೂ ತಮ್ಮ ಮೀಸಲಾತಿಯನ್ನು ನಾಲ್ಕು ಶೇಕಡಾದಿಂದ 12 ಶೇ.ಕ್ಕೆ ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು.
The government headed by CM Basavaraj Bommai has finally bowed down to the demands of the powerful communities of the state and has taken an important decision in the cabinet meeting to give reservation to the Panchmasali and Okkaliga communities. The reservation has been increased by creating a separate category for 2 dominant communities, 2D category for Lingayat community and 2C category for Okkaliga community.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:02 pm
Mangalore Correspondent
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm