ಬ್ರೇಕಿಂಗ್ ನ್ಯೂಸ್
01-01-23 10:53 am Bangalore Correspondent ಕರ್ನಾಟಕ
ಬೆಂಗಳೂರು, ಜ.1 : ತುಳು ಚಿತ್ರರಂಗದ ಪ್ರತಿಭಾನ್ವಿತ ನಟ ಗಿರ್ಗಿಟ್ ಖ್ಯಾತಿಯ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಫೈನಲ್ ಸ್ಪರ್ಧೆಯಲ್ಲಿ ನಟ ಸುದೀಪ್, ರೂಪೇಶ್ ಶೆಟ್ಟಿ ಗೆಲುವನ್ನು ಘೋಷಿಸಿದ್ದಾರೆ.
ಒಟಿಟಿ ವೇದಿಕೆಯ ಮೂಲಕ ಬಿಗ್ ಬಾಸ್ ಕಾಲಿಟ್ಟಿದ್ದ ರೂಪೇಶ್ ಶೆಟ್ಟಿ ಅದರಲ್ಲೂ ಟಾಪರ್ ಎನಿಸಿದ್ದರು. ಬಳಿಕ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರಲ್ಲೂ ವಿನ್ನರ್ ಆಗಿದ್ದು ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ.
ಫಿನಾಲೆಯಲ್ಲಿ ರಾಕೇಶ್ ಅಡಿಗ ಟಫ್ ಫೈಟ್ ಕೊಟ್ಟಿದ್ದರು. ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ವಿನ್ನರ್ ಆಗುವುದು ಖಚಿತ ಎಂಬ ನೆಲೆಯಲ್ಲಿ ಪೈಪೋಟಿ ಮೂಡಿಸಿದ್ದರು. ಇಬ್ಬರು ಸ್ಪರ್ಧಿಗಳ ಬೆಂಬಲಿಗರು, ಸ್ನೇಹಿತರು ಇವರಿಗೆ ವೋಟ್ ಮಾಡುವಂತೆ ಭಾರೀ ಪ್ರಚಾರ ನಡೆಸಿದ್ದರು. ತುಳು ಚಿತ್ರದಲ್ಲಿ ಖ್ಯಾತಿ ಗಳಿಸಿದ್ದ ರೂಪೇಶ್ ಶೆಟ್ಟಿಗೆ ಕರಾವಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊನೆ ಕ್ಷಣದ ವರೆಗೂ ಅಭಿಮಾನಿಗಳಿಗೆ ಕಾತುರಗಳಿದ್ದವು. ರೂಪೇಶ್ ಶೆಟ್ಟಿ ಗೆಲುವು ಘೋಷಣೆ ಆಗುತ್ತಿದ್ದಂತೆ ರಾಕೇಶ್ ಅಡಿಗ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಬಿಗ್ ಬಾಸ್ ಫಿನಾಲೆ ವೀಕ್ನಲ್ಲಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಇದ್ದರು. ಶುಕ್ರವಾರ (ಡಿಸೆಂಬರ್ 30) ದಿವ್ಯಾ ಎಲಿಮಿನೇಟ್ ಆದರೆ, ಶನಿವಾರ (ಡಿಸೆಂಬರ್ 31) ರೂಪೇಶ್ ರಾಜಣ್ಣ ಮೊದಲು ಔಟ್ ಆದರೆ, ದೀಪಿಕಾ ದಾಸ್ ಬಳಿಕ ಹೊರಹೋದರು. ಸುದೀಪ್ ಅಕ್ಕಪಕ್ಕದಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಉಳಿದಿದ್ದರು. ಕೊನೆಗೆ, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದಾಗಲೇ ರೂಪೇಶ್ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು.
ಈ ಬಾರಿ ‘ಬಿಗ್ ಬಾಸ್ ಕನ್ನಡ’ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ತೆರಿಗೆ ರೂಪದಲ್ಲಿ ಕಟ್ ಆಗಲಿದೆ. ಆ ಪ್ರಕಾರ, ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ.
The wait is over. Actor-RJ Roopesh Shetty has won the title of Bigg Boss Kannada 9. In an exciting Grand Finale, full of entertainment, the Mangaluru boy was declared the winner. Roopesh Shetty received the trophy and prize money of Rs. 50 lacs. Not just the winner of Bigg Boss Kannada season 9, Roopesh had earlier emerged as the topper of the premiere season of Bigg Boss Kannada OTT.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm