ಬ್ರೇಕಿಂಗ್ ನ್ಯೂಸ್
01-01-23 09:51 pm HK News Desk ಕರ್ನಾಟಕ
ಮಂಡ್ಯ, ಜ.1 : ಮಂಡ್ಯದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ತಯಾರಿಸಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥವನ್ನು ಗುಂಡಿಗೆ ಎಸೆದು ಮುಚ್ಚಿರುವುದು ಪತ್ತೆಯಾಗಿದೆ.
15 ಬೃಹತ್ ಸ್ಟೀಲ್ ಬಕೆಟ್ಗಳಲ್ಲಿ 250 ಕೇಜಿ ತರಕಾರಿ ಬಾತ್, ಏಳು ಬಕೆಟ್ ಮೊಸರನ್ನ, 50,000 ಸಿಹಿತಿಂಡಿ ಪ್ಯಾಕೆಟ್ ಗಳನ್ನು ಗುಂಡಿಗೆ ಎಸೆದು ಮಣ್ಣಿನಿಂದ ಮುಚ್ಚಲಾಗಿದೆ. ಮಂಡ್ಯದ ಬಾಲಕರ ಕಾಲೇಜು ಬಳಿಯ ತೆರೆದ ಮೈದಾನದಲ್ಲಿ ಸಂಘಟಕರು ಅಗೆಯುವ ಯಂತ್ರ ಬಳಸಿ ಗುಂಡಿ ತೋಡಿದ್ದಾರೆ. ಬಳಿಕ ಮಣ್ಣು ಹಾಕಿ ಮುಚ್ಚಿದ್ದಾರೆ.
ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆಗೆ ಶುಕ್ರವಾರ ಬಿಜೆಪಿ ಮುಖಂಡರು ಮಂಡ್ಯ ಮತ್ತು ನೆರೆಯ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಜನರನ್ನು ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳಲ್ಲಿ ಸ್ಥಳಕ್ಕೆ ಕರೆತಂದಿದ್ದರು. ಸಂಘಟಕರು 1.5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೇರಿದ್ದ ಜನರಿಗೆ ಊಟ ಬಡಿಸಲು ಆರಂಭಿಸಿದ್ದರು. ಕೆಲವೇ ನಿಮಿಷಗಳಲ್ಲಿ ಆಹಾರದ ಕೌಂಟರ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ಸೇರಿದ್ದರು. ಆದರೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಿಂದ ಡೇರಿ ಉದ್ಘಾಟನೆ ಮುಗಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಅಮಿತ್ ಶಾ ವೇದಿಕೆಯತ್ತ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಊಟ ಬಡಿಸುವುದನ್ನು ನಿಲ್ಲಿಸಿ ಜನರನ್ನು ಕುರ್ಚಿಗೆ ಮರಳುವಂತೆ ಸೂಚಿಸಿದರು. ಹೀಗಾಗಿ ಸರತಿ ಸಾಲು ನಿಂತಿದ್ದವರೆಲ್ಲ ಮರಳಿ ಕುರ್ಚಿಗೆ ಬಂದು ಕುಳಿತರು.
ಸಂಜೆ ಕಾರ್ಯಕ್ರಮದ ನಂತರ, ಹೆಚ್ಚಿನ ಜನರು ತಮ್ಮ ಹಳ್ಳಿಗಳಿಗೆ ಹಿಂತಿರುಗಲು ತಮ್ಮ ಬಸ್ ಗಳತ್ತ ಧಾವಿಸಿದರು. ಇದರಿಂದಾಗಿ ಲಕ್ಷ ಜನರಿಗೆ ಮಾಡಿಟ್ಟಿದ್ದ ಊಟ, ಮೊಸರು ಎಲ್ಲ ಉಳಿದಿದ್ದು ಹಾಳಾಗಿತ್ತು. ಇದನ್ನು ರಾತ್ರಿ ವೇಳೆ ಅಲ್ಲಿಯೇ ಮೈದಾನದ ಬಳಿ ಗುಂಡಿ ತೋಡಿ ಮುಚ್ಚಿದ್ದಾಗಿ ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ.
A huge quantity of food prepared for the people who attended Union Home Minister Amit Shah’s event in Mandya was found dumped in a pit. According to local villagers, 15 huge steel buckets, each containing 250 kg of vegetable bath, seven buckets of curd rice an 50,000 pieces of sweets were dumped in the pit and covered with mud. The pit was dug by using an excavator at the open ground near Mandya Boys College by the organisers.
07-02-25 08:09 pm
Bangalore Correspondent
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 08:24 pm
Mangalore Correspondent
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm