ಬ್ರೇಕಿಂಗ್ ನ್ಯೂಸ್
04-01-23 06:47 pm Bangalore Correspondent ಕರ್ನಾಟಕ
ಬೆಂಗಳೂರು, ಜ.4: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಡ್ರಮ್ ಪರಿಶೀಲನೆ ಮಾಡಿದಾಗ ಕೊಳೆತ ಸ್ಥಿತಿಯಲ್ಲಿರುವ ಯುವತಿ ದೇಹ ಪತ್ತೆಯಾಗಿದೆ.
ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಗೂಡ್ಸ್ ಪ್ಲಾಟ್ ಫಾರ್ಮ್ ನ ಬಾಕ್ಸ್ ಒಂದರಲ್ಲಿ ಶವ ಪತ್ತೆಯಾಗಿದ್ದು, ಅಂದಾಜು 23 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಸೀಲ್ ಮಾಡಿಟ್ಟಿದ್ದರು. ಇಂದು ವಾಸನೆ ಬಂದಾಗ ನೋಡಿಕೊಂಡಿರುವ ರೈಲ್ವೇ ಪೊಲೀಸರು ತೆಗೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಸದ್ಯ ಯುವತಿಯ ಗುರುತು ಪತ್ತೆ ಹಚ್ಚುತ್ತಿರುವ ಯಶವಂತಪುರ ರೈಲ್ವೇ ಪೊಲೀಸರು, ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕುತ್ತಿಗೆಗೆ ಬಟ್ಟೆಯಿಂದ ಬಿಗಿಯಲಾಗಿದೆ: ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಜಯಮ್ಮ ಪ್ಲಾಸ್ಟಿಕ್ ಡ್ರಮ್ ನಲ್ಲಿ ಶವದ ವಾಸನೆ ಬರುತ್ತಿದ್ದನ್ನ ಕಂಡು ಎಂಬಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಡ್ರಮ್ ಪರಿಶೀಲನೆ ನಡೆಸಿದಾಗ ಶವ ಪತ್ತೆಯಾಗಿದೆ. ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು ಪತ್ತೆಯಾಗಿದೆ. ಸುಮಾರು 23 ವರ್ಷ ವಯಸ್ಸಿನ ಮಹಿಳೆ ಮೃತದೇಹ ಎಂದು ಅಂದಾಜಿಸಲಾಗಿದೆ. ಇನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಲು ಡ್ರಮ್ ನಲ್ಲಿ ಶವ ಹಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಕೊಳೆಯುವಂತೆ ಕೆಮಿಕಲ್ ಡ್ರಮ್ ನಲ್ಲಿ ದುಷ್ಕರ್ಮಿಗಳು ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆತಂಕಗೊಂಡ ಪ್ರಯಾಣಿಕರು: ಇನ್ನು ರೈಲ್ವೆ ನಿಲ್ದಾಣದಲ್ಲಿ ಯುವತಿ ಶವ ಪತ್ತೆಯಾಗುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದಾರೆ. ದಿನದ ೨೪ ಗಂಟೆ ವೇಳೆಯೂ ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಾ ಕುಳಿತುಕೊಳ್ಳುವವರಿಗೆ ಭಯದ ವಾತಾವರಣ ಶುರುವಾಗಿದೆ. ಕೆಲವೊಂದು ರೈಲುಗಳು ಬೆಳಗ್ಗೆ, ಮಧ್ಯರಾತ್ರಿ ಆಗಮಿಸಲಿದ್ದು, ರೈಲುಗಳನ್ನು ಸರಿಯಾದ ಸಮಯಕ್ಕೆ ಹೋಗಿ ಹತ್ತಿಕೊಳಳುವುದು ಹೇಗೆ? ಎಂದು ಚಿಂತಾಕ್ರಾಂತರಾಗಿದ್ದಾರೆ. ಇನ್ನು ಒಬ್ಬಂಟಿ ಮಹಿಳೆಯರಿಗೆ ರೈಲ್ವೆ ನಿಲ್ದಾಣ ಮತ್ತು ರೈಲು ಪ್ರಯಾಣ ಎಷ್ಟು ಸುರಕ್ಷಿತ ಎಂಬ ಅನುಮಾನ ಮೂಡಿದೆ.
The cleaning staff at Bengaluru's Yeshwantpur railway station found a decomposed body inside a box on Wednesday, which was kept on platform no. 1 of the station. A team of forensic experts team has reached the railway station.
17-12-24 05:39 pm
HK News
Pavithra Gowda Release, Actor Darshan; ಪರಪ್ಪನ...
17-12-24 11:53 am
Madhusdhan, Waqf, Congress; ಅತಿ ಹೆಚ್ಚು ವಕ್ಫ್...
17-12-24 11:30 am
Tulsi Gowda passes away: ಪರಿಸರ ಪ್ರೇಮಿ, ವೃಕ್ಷ...
16-12-24 10:13 pm
Sexually harrasment, Hubballi police Inspecto...
16-12-24 09:58 pm
17-12-24 05:31 pm
HK News
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿ...
14-12-24 12:40 pm
ಯಮನಂತೆ ಬಂದ ಸಿಮೆಂಟ್ ಲಾರಿ ; ಬಸ್ಸಿಗಾಗಿ ಕಾಯುತ್ತಿದ...
13-12-24 09:06 pm
17-12-24 11:13 pm
Mangalore Correspondent
Puttur, Soumya Pernaje; "ಹವ್ಯಕ ಕೃಷಿ ರತ್ನ" ಪ್ರ...
17-12-24 08:10 pm
Anupam Agrawal IPS, Mangalore Protest: ಪ್ರತಿಭ...
17-12-24 01:55 pm
Himanshu Thapliyal, NITK, UPSC, Mangalore: ಯು...
16-12-24 09:01 pm
Mangalore child marriage, Court: ಉಳ್ಳಾಲದಲ್ಲಿ...
16-12-24 06:25 pm
17-12-24 07:51 pm
Mangaluru Correspondent
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm
Udupi, Manipal, Fraud News: ಸ್ಟಾರ್ ಹೊಟೇಲುಗಳಲ್...
11-12-24 10:39 pm
Mangalore crime cyber fraud: ಪಾರ್ಟ್ ಟೈಮ್ ಜಾಬ್...
11-12-24 03:57 pm