ಬ್ರೇಕಿಂಗ್ ನ್ಯೂಸ್
04-01-23 08:35 pm Bangalore Correspondent ಕರ್ನಾಟಕ
ಬೆಂಗಳೂರು, ಜ.4 : ರಸ್ತೆ, ಒಳಚರಂಡಿ ರೀತಿಯ ಸಣ್ಣ ಸಮಸ್ಯೆಗಳ ಬಗ್ಗೆ ಗಮನಹರಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ಲವ್ ಜಿಹಾದ್‌ನಿಂದ ರಕ್ಷಿಸಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಕಾಂಗ್ರೆಸ್ ಇದೇ ವಿಚಾರ ಮುಂದಿಟ್ಟು ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ನಿರುದ್ಯೋಗದ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ. 'ಲವ್ ಜಿಹಾದ್' ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸಿ! ಇದು ಬಿಜೆಪಿಯ ಲಜ್ಜೆಗೇಡಿತನದ ಪರಮಾವಧಿ. ಅಭಿವೃದ್ಧಿ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ರಸ್ತೆ ಗುಂಡಿಯ ಸಾವುಗಳು, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನೇಮಕಾತಿ ಹಗರಣಗಳು, ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳು" ಎಂದು ಲೇವಡಿ ಮಾಡಿದೆ.
ಲವ್ ಜಿಹಾದ್ ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರೇ, "ಡಾಲರ್ & ರೂಪಾಯಿ" ಬಗ್ಗೆ ಮಾತಾಡಲು ಏಕೆ ಹಿಂಜರಿಕೆ ತಮಗೆ? ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
"ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ" ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿಯಾಗಿದೆ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ರಾಜ್ಯ ಬಿಜೆಪಿ, ಈಮೂಲಕ ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ".
ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ “ಮುಖ್ಯಮಂತ್ರಿ ನಗರೋತ್ಥಾನ ಯೋಜನೆ" ಮಾಡುತ್ತೇವೆ ಎಂದಿತ್ತ ಬಿಜೆಪಿ ಸರ್ಕಾರ, ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ. ಇದು ಬಿಜೆಪಿಯ ವೈಫಲ್ಯವಲ್ಲವೇ? ಎಂದು ಕಾಂಗ್ರೆಸ್ ಕೇಳಿದೆ.
ಅಭಿವೃದ್ಧಿ,
— Karnataka Congress (@INCKarnataka) January 4, 2023
ನಿರುದ್ಯೋಗ,
ಆರ್ಥಿಕ ಸಂಕಷ್ಟ,
ಬೆಲೆ ಏರಿಕೆ,
ರಸ್ತೆ ಗುಂಡಿಯ ಸಾವುಗಳು,
ರೈತರ ಆತ್ಮಹತ್ಯೆ,
ಭ್ರಷ್ಟಾಚಾರ,
ನೇಮಕಾತಿ ಹಗರಣಗಳು,
ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳು!
ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ 'ಲವ್ ಜಿಹಾದ್' ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸಿ!
ಇದು ಬಿಜೆಪಿಯ ಲಜ್ಜೆಗೇಡಿತನದ ಪರಮಾವಧಿ. pic.twitter.com/duil4smTNk
ಲವ್ ಜಿಹಾದ್ ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ ಮಾನ್ಯ @nalinkateel ಅವರೇ.
— Karnataka Congress (@INCKarnataka) January 4, 2023
"ಡಾಲರ್ & ರೂಪಾಯಿ" ಬಗ್ಗೆ ಮಾತಾಡಲು ಏಕೆ ಹಿಂಜರಿಕೆ ತಮಗೆ? ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ? pic.twitter.com/4nbdxCAiEx
"ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ"
— Karnataka Congress (@INCKarnataka) January 4, 2023
ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ.
ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ @BJP4Karnataka ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ.
ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ “ಮುಖ್ಯಮಂತ್ರಿ ನಗರೋತ್ಥಾನ ಯೋಜನೆ" ಮಾಡುತ್ತೇವೆ ಎಂದಿತ್ತು @BJP4Karnataka.
— Karnataka Congress (@INCKarnataka) January 4, 2023
ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ.
ಇದು ಬಿಜೆಪಿಯ ವೈಫಲ್ಯವಲ್ಲವೇ?#NimHatraIdyaUttara #SayCM pic.twitter.com/ch5vX2QZua
Love jihad a priority, not small issues like roads, drains, Nalin Kumar Kateel speech sparks fire in Congress. People of Karnataka should prioritise the issue of “love jihad” in this year’s Assembly elections, over concerns such as “road, gutter, drain and other small issues”, BJP state president Nalin Kumar Kateel has said, inviting a retort from Opposition Congress, which stated that “communal strife is used by BJP to hide it’s failures, (and) corruption”.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm