ಬ್ರೇಕಿಂಗ್ ನ್ಯೂಸ್
07-01-23 10:38 pm Bangalore Correspondent ಕರ್ನಾಟಕ
ಬೆಂಗಳೂರು, ಜ.7: ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸತೀಶ್, ಭಾರತದಲ್ಲಿ ಅಪರೂಪದ ತಳಿಯಾದ ನಾಯಿಯನ್ನು ಹೈದರಾಬಾದ್ ನ ಬ್ರೀಡರ್ ಒಬ್ಬರಿಂದ ಖರೀದಿಸಿದ್ದು ಆ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂ.
ಕಕೇಶಿಯನ್ ಶೆಫರ್ಡ್ ಜಾತಿಗೆ ಸೇರಿದ ಈ ನಾಯಿಗೆ 'ಕ್ಯಾಡಬೊಮ್ ಹೇಡರ್' ಎಂದು ಹೆಸರಿಡಲಾಗಿದೆ. 1.5 ವರ್ಷ ವಯಸ್ಸಿನ ಹೇಡರ್, ಇತ್ತೀಚೆಗೆ ತಿರುವನಂತಪುರಂ ಕೆನೆಲ್ ಕ್ಲಬ್ ಈವೆಂಟ್ ಮತ್ತು ಮತ್ತೊಂದು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ, ಅತ್ಯುತ್ತಮ ನಾಯಿ ತಳಿಗಾಗಿ 32 ಪದಕಗಳನ್ನು ಗೆದ್ದಿದೆ.
ಹೇಡರ್ ಗಾತ್ರದಲ್ಲಿ ತುಂಬಾ ದೊಡ್ಡವನು ಮತ್ತು ಅತ್ಯಂತ ಸ್ನೇಹಪರನಾಗಿದ್ದಾನೆ. ಪ್ರಸ್ತುತ, ಅವರು ಹವಾನಿಯಂತ್ರಿತವಾಗಿರುವ ನನ್ನ ಮನೆಯಲ್ಲಿ ವಾಸಿಸುತ್ತಿದ್ದಾನೆ' ಎಂದು ಸತೀಶ್, ತಮ್ಮ ಮನೆಯ ಹೊಸ ಸದಸ್ಯನ ಬಗ್ಗೆ ಮಾಹಿತಿ ನೀಡಿದರು.
ಇವರು ದುಬಾರಿ ತಳಿಯ ನಾಯಿಗಳನ್ನು ಖರೀದಿಸಲು ಹೆಸರುವಾಸಿಯಾಗಿದ್ದಾರೆ. 2016 ರಲ್ಲಿ ಸತೀಶ್, ಎರಡು ಕೊರಿಯನ್ ಮ್ಯಾಸ್ಟಿಫ್ ಗಳನ್ನು ಹೊಂದಿರುವ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರಿಗೆ ತಲಾ 1 ಕೋಟಿ ರೂ. ಬಿಲ್ ನೀಡಿತ್ತು. ಅವರು ನಾಯಿಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದ್ದು ಅವರು ವಿಮಾನ ನಿಲ್ದಾಣದಿಂದ ತಮ್ಮ ನಾಯಿಯನ್ನು ರೋಲ್ಸ್ ರಾಯ್ಸ್ ಮತ್ತು ರೇಂಜ್ ರೋವರ್ ನಲ್ಲಿ ಕರೆದೊಯ್ದಿದ್ದರು.
ಕಕೇಶಿಯನ್ ಶೆಫರ್ಡ್ ಜಾತಿಯ ನಾಯಿಯನ್ನು ನಿರ್ಭೀತ, ಧೈರ್ಯಶಾಲಿ ಮತ್ತು ದಯಾಪರ ಎಂದು ವರ್ಣಿಸಲಾಗಿದ್ದು, ಜಾರ್ಜಿಯಾ, ಅರ್ಮೇನಿಯಾ ಅಜೆರ್ಬೈಜಾನ್, ಒಸೆಟಿಯಾ, ಡಾಗೆಸ್ತಾನ್ ಮತ್ತು ರಷ್ಯಾದ ಕೆಲವು ಭಾಗಗಳಿಗೆ ಸ್ಥಳೀಯವಾಗಿರುವ ಒಂದು ರಕ್ಷಕ ತಳಿಯಾಗಿದೆ. ಅಮೇರಿಕನ್ ಕೆನೆಲ್ ಕ್ಲಬ್ ಪ್ರಕಾರ, ಶತಮಾನಗಳಿಂದ, ಈ ತಳಿಯನ್ನು ಅತಿಕ್ರಮಣಕಾರರಿಂದ ಆಸ್ತಿಗಳನ್ನು ರಕ್ಷಿಸಲು, ತೋಳಗಳಂತಹ ದೊಡ್ಡ ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಿಸಲು ಮತ್ತು ಇತರ ಅನೇಕ ಕರ್ತವ್ಯಗಳಿಗಾಗಿ ಬಳಸಲಾಗುತ್ತಿತ್ತು. ಸಂಪೂರ್ಣವಾಗಿ ಬೆಳೆದ ಕಾಕೇಸಿಯನ್ ಶೆಫರ್ಡ್ ಸುಮಾರು 44 ರಿಂದ 77 ಕಿಲೋಗ್ರಾಂಗಳಷ್ಟು ತೂಕವನ್ನು ಪಡೆಯುತ್ತದೆ. ಇದು 23 ರಿಂದ 30 ಇಂಚುಗಳಷ್ಟು ಎತ್ತರವನ್ನು ಹೊಂದುತ್ತದೆ. ಇದರ ಜೀವಿತಾವಧಿ 10 ರಿಂದ 12 ವರ್ಷಗಳು ಎನ್ನಲಾಗಿದೆ.
ಸತೀಶ್ ಅವರು 1 ಕೋಟಿ ರೂ.ಗೆ ಖರೀದಿಸಿದ ಕೊರಿಯನ್ ಡೋಸಾ ಮ್ಯಾಸ್ಟಿಫ್ಸ್, ರೂ. 10 ಕೋಟಿ ಮೌಲ್ಯದ ಟಿಬೆಟಿಯನ್ ಮಾಸ್ಟಿಫ್ ಮತ್ತು ರೂ. 8 ಕೋಟಿಗೆ ಅಲಾಸ್ಕನ್ ಮಲಾಮುಟ್ ಸೇರಿದಂತೆ ಹಲವಾರು ಇತರ ಪ್ರೀಮಿಯಂ ತಳಿ ನಾಯಿಗಳನ್ನು ಸಹ ಸಾಕಿದ್ದಾರೆ. ಕಡಬೊಮ್ ಹೇಡರ್ ಅವರನ್ನು ನಗರಕ್ಕೆ ಪರಿಚಯಿಸಲು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ "ಮೆಗಾ ಈವೆಂಟ್" ನಡೆಸಲು ಸತೀಶ್ ಯೋಜಿಸಿದ್ದಾರೆ.
A breeder in Bengaluru recently bought a Caucasian Shepherd dog for a whopping Rs. 20 crore, Bangalore Mirror reported. The man, Satish, is the president of Indian Dog Breeders' Association and owns a kennel in Bengaluru. He bought the dog, a rare breed in India, from a breeder in Hyderabad.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm