ಬ್ರೇಕಿಂಗ್ ನ್ಯೂಸ್
09-01-23 04:10 pm HK News Desk ಕರ್ನಾಟಕ
ಕೋಲಾರ, ಜ.9 : ಕೋಲಾರದಲ್ಲಿಯೇ ಚುನಾವಣೆ ಸ್ಪರ್ಧಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಒತ್ತಾಸೆಯಂತೆ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ಕೆಎಚ್ ಮುನಿಯಪ್ಪ ಬೆಂಬಲಿಗರ ಸಮ್ಮುಖದಲ್ಲಿಯೇ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ವರಿಷ್ಟರು ನೀಡುವ ಷರತ್ತುಗಳಿಗೆ ನನ್ನ ಸ್ಪರ್ಧೆ ಅವಲಂಬಿಸಿದೆ. ಪಕ್ಷದ ಸಹಜ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೇ ಅಧಿಕೃತ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡರ ಒತ್ತಾಯವಿದೆ. ರಾಜಕೀಯದಲ್ಲಿ ಉಳಿಯಲು ಜನರ ಆಶೀರ್ವಾದ ಮುಖ್ಯವಾಗಿದೆ. ಈವರೆಗೆ ಚಾಮುಂಡೇಶ್ವರಿ, ವರುಣಾ ಮತ್ತು ಬದಾಮಿ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. ಈ ಬಾರಿ ಹಲವಾರು ಕಡೆ ನನ್ನ ಸ್ಪರ್ಧೆ ಬಗ್ಗೆ ಒತ್ತಾಯಗಳಿವೆ. ಹೀಗಾಗಿ ನಾನು ಕ್ಷೇತ್ರದ ಹುಡುಕಾಟದಲ್ಲಿ ಇದ್ದೇನೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ.
ಬದಾಮಿ ದೂರವಾಗುತ್ತದೆ ಎಂದಿದ್ದಕ್ಕೆ ಹೆಲಿಕಾಪ್ಟರ್ ಕೊಡಿಸುವುದಾಗಿ ಅಲ್ಲಿನ ಜನ ಹೇಳ್ತಾರೆ. ನಾನು ಸ್ಪರ್ಧಿಸುವಂತೆ ಕೋಲಾರ ಕ್ಷೇತ್ರದ ಜನ, ಇಲ್ಲಿನ ಜೆಡಿಎಸ್ ಶಾಸಕರ ಒತ್ತಾಯವಿದೆ. ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣ ಹಾವು ಮುಂಗುಸಿಯಂತೆ ಇದೆ. ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯ ಬಗ್ಗೆ ರಮೇಶ್ ಕುಮಾರ್ ಬಣ ಬಹಿರಂಗ ಒತ್ತಾಯ ಮಾಡುತ್ತಿದ್ದರೆ, ಮುನಿಯಪ್ಪ ಬೆಂಬಲಿಗರು ವಿರೋಧ ತೋರುತ್ತಿದ್ದರು. ಇಂದು ಬೆಳಗ್ಗೆ ಸಿದ್ದರಾಮಯ್ಯ ಕೋಲಾರಕ್ಕೆ ತೆರಳುವ ಮೊದಲೇ ಮುನಿಯಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದರು. ಭಿನ್ನಾಭಿಪ್ರಾಯ ಬಗೆಹರಿಸಲು ಮಾತುಕತೆ ನಡೆಸಿದ್ದರು. ರಮೇಶ್ ಕುಮಾರ್ ಮತ್ತು ಮುನಿಯಪ್ಪ ನಡುವಿನ ಮುನಿಸಿನ ಬಗ್ಗೆ ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಮಾತುಕತೆ ನಡೆಸುವುದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರು. ಅದರಂತೆ, ಸಿದ್ದರಾಮಯ್ಯ ಜೊತೆಯಲ್ಲೇ ಮುನಿಯಪ್ಪ ಕೋಲಾರಕ್ಕೆ ಬಂದಿದ್ದರು.
Former Karnataka Chief Minister Siddaramaiah is likely to announce his candidacy for the state Assembly elections from Kolar on Monday. Kolar MLA K Srinivas Gowda, who was expelled from the JD(S) for cross-voting in the Rajya Sabha election, is expected to vacate his seat to make way for Siddaramaiah. Kolar Assembly constituency has a high population of Dalits, Kurubas, and Muslim voters, and the BJP, the ruling party, is considered weak in the region.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm