ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ; ತನಿಖೆ ವರ್ಗಾಯಿಸಿ ಗೃಹ ಸಚಿವರ ಆದೇಶ 

16-01-23 01:53 pm       Bangalore Correspondent   ಕರ್ನಾಟಕ

ಹತ್ತು ದಿನಗಳ ಕಳ್ಳಾಟದ ಬಳಿಕ ಬಂಧನಕ್ಕೀಡಾದ ಸ್ಯಾಂಟ್ರೋ ರವಿ ಮತ್ತು ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. 

ಬೆಂಗಳೂರು, ಜ.16 : ಹತ್ತು ದಿನಗಳ ಕಳ್ಳಾಟದ ಬಳಿಕ ಬಂಧನಕ್ಕೀಡಾದ ಸ್ಯಾಂಟ್ರೋ ರವಿ ಮತ್ತು ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. 

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ನೀಡಿದ್ದು, ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆಗೆ ನಿರ್ದೇಶಿಸಲಾಗಿದೆ. ಅಲ್ಲಿಯೇ ಈ ಕುರಿತು ದಾಖಲಾದ ಎಲ್ಲ ದೂರುಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Coward home minister': Karnataka home minister Araga Jnanendra faces heat  from ABVP members | Deccan Herald

ಸದ್ಯ ಸ್ಯಾಂಟ್ರೋ ರವಿ ಪ್ರಕರಣದ ತನಿಖೆಯನ್ನು ಮೈಸೂರು ನಗರ ಪೊಲೀಸರು ನಡೆಸುತ್ತಿದ್ದಾರೆ. ಇದೇ ವೇಳೆ, ಆರೋಪಿಯನ್ನು ಜನವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ, ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಇದು ಸರ್ಕಾರದ ಕೆಲಸವಾಗಿದೆ. ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ಗೃಹ ಸಚಿವರು ಸಿಐಡಿಗೆ ಪ್ರಕರಣವನ್ನು ವರ್ಗಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

The probe into allegations against notorious sex trafficker ‘Santro’ Ravi was transferred to the Criminal Investigation Department (CID) on Monday, January 16. Home Minister Araga Jnanendra said that the government directed CID to investigate the case against ‘Santro’ Ravi.