ಘಾಟಿ ರಸ್ತೆಯಲ್ಲಿ ಲಾರಿಯಿಂದ ಹೊರಕ್ಕುರುಳಿದ ಮರದ ದಿಮ್ಮಿ ; ಜೀಪು ಅಪ್ಪಚ್ಚಿ, ಚಾಲಕ ಪಾರು

29-01-23 05:41 pm       HK News Desk   ಕರ್ನಾಟಕ

ಬೃಹತ್ ಲಾರಿಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಸಾಗುತ್ತಿದ್ದಾಗ ಹಗ್ಗ ತುಂಡಾಗಿ ಮರದ ದಿಮ್ಮಿಯೊಂದು ಹಿಂದಿನಿಂದ ಬರುತ್ತಿದ್ದ ಜೀಪಿನೊಳಕ್ಕೆ ತೂರಿದ ಘಟನೆ ನಡೆದಿದ್ದು, ಪವಾಡ ಸದೃಶ ಜೀಪು ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಮಡಿಕೇರಿ, ಜ.29: ಬೃಹತ್ ಲಾರಿಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಸಾಗುತ್ತಿದ್ದಾಗ ಹಗ್ಗ ತುಂಡಾಗಿ ಮರದ ದಿಮ್ಮಿಯೊಂದು ಹಿಂದಿನಿಂದ ಬರುತ್ತಿದ್ದ ಜೀಪಿನೊಳಕ್ಕೆ ತೂರಿದ ಘಟನೆ ನಡೆದಿದ್ದು, ಪವಾಡ ಸದೃಶ ಜೀಪು ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಶನಿವಾರ ರಾತ್ರಿ 14 ಚಕ್ರದ ಬೃಹತ್ ಲಾರಿಯಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರಿಗೆ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ಜೋಡುಪಾಲ ಘಾಟಿ ರಸ್ತೆಯಲ್ಲಿ ಲಾರಿ ಸಾಗುತ್ತಿದ್ದಾಗ, ದಿಮ್ಮಿಗಳನ್ನು ಕಟ್ಟಿದ್ದ ಹಗ್ಗ ತುಂಡಾಗಿದ್ದು, ದಿಮ್ಮಿಗಳು ಎರ್ರಾಬಿರ್ರಿ ರಸ್ತೆಗೆ ಉರುಳಿ ಬಿದ್ದಿವೆ. ಈ ವೇಳೆ, ಒಂದು ದಿಮ್ಮಿ ಹಿಂದಿನಿಂದ ಬರುತ್ತಿದ್ದ ಜೀಪಿನ ಮುಂದಿನ ಗ್ಲಾಸನ್ನು ಒಡೆದು ಒಳಗೆ ತೂರಿದೆ.

ಮರದ ದಿಮ್ಮಿ ಜೀಪು ಮೇಲೆ ಬಿದ್ದಿರುವುದರಿಂದ ಜೀಪಿನ ಒಂದು ಭಾಗ ಜಖಂಗೊಂಡಿದೆ. ಜೀಪು ಚಾಲಕ ಮರದ ದಿಮ್ಮಿ ಬೀಳುತ್ತಲೇ ಜೀಪನ್ನು ನಿಲ್ಲಿಸಿ ಹೊರಗೆ ಹಾರಿದ್ದಾನೆ. ಜೀಪು ಜೋಡುಪಾಲದಿಂದ ಮದೆನಾಡಿಗೆ ತೆರಳುತ್ತಿತ್ತು. ಅವಘಡದಿಂದಾಗಿ ಕೆಲಕಾಲ ಮಂಗಳೂರು- ಮಡಿಕೇರಿ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಗಿತ್ತು. ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The driver of a jeep had a providential escape as a huge wooden log slipped, fell from a truck, pierced through the windshield and entered inside the cabin of the jeep at Jodupala near Sampaje. On the night of Friday, a 14-wheeler truck was transporting huge wooden logs to Mangaluru. As the rope that was tied around the logs broke near Jodupala, the wooden logs rolled onto the road.