Bangalore Police, Inspector Suspend, Crime, Drugs: ಡ್ರಗ್ ಪೆಡ್ಲರ್ ಗಳಿಂದ ತಿಂಗಳಿಗೆ ಎರಡು ಲಕ್ಷ ಲಂಚ ; ಬೆಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಸೇರಿ 11 ಪೊಲೀಸರ ಅಮಾನತು

15-09-25 10:47 pm       Bangalore Correspondent   ಕ್ರೈಂ

ಡ್ರಗ್ ಪೆಡ್ಲರ್ ಗಳಿಂದ ಪ್ರತಿ ತಿಂಗಳು ಮಾಮೂಲಿ ಪಡೆಯುತ್ತಿದ್ದ ಬೆಂಗಳೂರು ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಜೆಜೆ ನಗರ್ ಪೊಲೀಸ್ ಠಾಣೆಯ 11 ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು, ಸೆ.15 : ಡ್ರಗ್ ಪೆಡ್ಲರ್ ಗಳಿಂದ ಪ್ರತಿ ತಿಂಗಳು ಮಾಮೂಲಿ ಪಡೆಯುತ್ತಿದ್ದ ಬೆಂಗಳೂರು ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಜೆಜೆ ನಗರ್ ಪೊಲೀಸ್ ಠಾಣೆಯ 11 ಪೊಲೀಸರನ್ನು ಅಮಾನತು ಮಾಡಲಾಗಿದೆ.

ಆಗಸ್ಟ್ 22ರಂದು ಆರ್.ಆರ್ ನಗರ ಠಾಣೆಯ ಪೊಲೀಸರು ಆರು ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಬಳಿಕ ಪೊಲೀಸರ ಶಾಮೀಲಾತಿ ಬಗ್ಗೆ ಮಾಹಿತಿ ಸಿಕ್ಕಿತ್ತು. ಆನಂತರ, ಪೊಲೀಸರು ಮತ್ತು ಡ್ರಗ್ ಪೆಡ್ಲರ್ ಗಳ ಮೊಬೈಲ್ ನೇರ ಸಂಪರ್ಕ ಇರುವುದು ಪತ್ತೆಯಾಗಿದ್ದರಿಂದ ತನಿಖೆ ನಡೆಸಿ ಚಾಮರಾಜಪೇಟೆ ಠಾಣೆಯ ಇನ್ಸ್ ಪೆಕ್ಟರ್ ಟಿ.ಮಂಜಣ್ಣ, ಹೆಡ್ ಕಾನ್ಸ್ ಟೇಬಲ್ ರಮೇಶ್, ಶಿವರಾಜ್, ಕಾನ್ಸ್ ಟೇಬಲ್ ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಹಾಗೂ ಜೆಜೆ ನಗರ ಠಾಣೆಯ ಎಎಸ್ಐ ಕುಮಾರ್ ಮತ್ತು ಮೂವರು ಕಾನ್ಸ್ ಟೇಬಲ್ ಗಳನ್ನು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತು ಮಾಡಿದ್ದಾರೆ.

ಆರ್.ಆರ್ ನಗರ ಪೊಲೀಸರು ಸಲ್ಮಾನ್, ನಯಾಜುಲ್ಲಾ ಖಾನ್, ನಯಾಜ್ ಖಾನ್, ತಾಹೀರ್ ಪಟೇಲ್ ಎಂಬ ಐವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. Tydol ಟ್ಯಾಬ್ಲೆಟ್ ಹೆಸರಿನ ಡ್ರಗ್ ಅನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದರು. ಇವರಿಂದ ಒಂದು ಸಾವಿರ ಟ್ಯಾಬ್ಲೆಟ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಸಲ್ಮಾನ್ ತಮ್ಮ ಅಕ್ರಮ ಚಟುವಟಿಕೆಗೆ ಪೊಲೀಸರ ರಕ್ಷಣೆ ಇತ್ತೆಂದು ಹೇಳಿದ್ದಾನೆ.

ಆರಂಭದಲ್ಲಿ ಆತ ನಮ್ಮನ್ನು ಮಿಸ್ ಲೀಡ್ ಮಾಡುತ್ತಿದ್ದಾನೆ ಎಂದುಕೊಂಡಿದ್ದೆವು. ಆದರೆ ಪೊಲೀಸರು ಮತ್ತು ಡ್ರಗ್ ಪೆಡ್ಲರ್ ಗಳ ಮೊಬೈಲ್ ಚೆಕ್ ಮಾಡಿದಾಗ ನೇರ ಸಂಪರ್ಕ ಇರುವುದು ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಡ್ರಗ್ ಗ್ಯಾಂಗ್ ಬಗ್ಗೆ, ಡ್ರಗ್ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಇದಲ್ಲದೆ, ಪೊಲೀಸರು ದಾಳಿ ಮಾಡದಂತೆ ನೋಡಿಕೊಳ್ಳಲು ಪ್ರತಿ ತಿಂಗಳು ಎರಡು ಲಕ್ಷ ರೂ.ನಷ್ಟು ಲಂಚ ನೀಡುತ್ತಿದ್ದರು. ಕೆಲವು ಪೊಲೀಸ್ ಅಧಿಕಾರಿಗಳು ಡ್ರಗ್ ಪೆಡ್ಲರ್ ಗಳ ಜೊತೆಗೇ ಪಾರ್ಟಿ ಮಾಡುತ್ತಿದ್ದರು ಎಂಬ ಮಾಹಿತಿಯೂ ತಿಳಿದುಬಂದಿತ್ತು.

ಕೆಂಗೇರಿ ವಿಭಾಗದ ಎಸಿಪಿ ಭರತ್ ರೆಡ್ಡಿ ಪೊಲೀಸರು ಮತ್ತು ಡ್ರಗ್ ಪೆಡ್ಲರ್ ಗಳ ನಡುವಿನ ನಂಟಿನ ಬಗ್ಗೆ ವರದಿಯನ್ನು ಡಿಸಿಪಿ ಎಸ್.ಗಿರೀಶ್ ಅವರಿಗೆ ಸಲ್ಲಿಸಿದ್ದರು. ಆನಂತರ ವಿಜಯನಗರ ಎಸಿಪಿ ಚಂದನ್ ಕುಮಾರ್ ಗೆ ಸಮಗ್ರ ತನಿಖೆ ನಡೆಸುವಂತೆ ಪ್ರಕರಣ ವರ್ಗಾಯಿಸಲಾಗಿತ್ತು. ಆರೋಪಿ ಸಲ್ಮಾನ್ ಪ್ರಕಾರ, ಪ್ರತಿ ತಿಂಗಳು ಇನ್ಸ್ ಪೆಕ್ಟರ್ ಮಂಜಣ್ಣನಿಗೆ ಒಂದು ಲಕ್ಷ, ಎಎಸ್ಐಗಳಿಗೆ 25 ಸಾವಿರ, ಕಾನ್ಸ್ ಟೇಬಲ್ ಗಳಿಗೆ ತಲಾ 20 ಸಾವಿರ ರೂ. ಲಂಚ ನೀಡುತ್ತಿದ್ದರು. ಡ್ರಗ್ ಗ್ಯಾಂಗ್ ನವರು ತಿಂಗಳಲ್ಲಿ ಹತ್ತು ಲಕ್ಷದಷ್ಟು ಕಮಾಯಿ ಮಾಡುತ್ತಿದ್ದರು. ಇದರಿಂದಾಗಿ ಎರಡು ಲಕ್ಷದಷ್ಟು ಪೊಲೀಸರಿಗೆ ನೀಡುವುದು ದೊಡ್ಡ ತೊಂದರೆ ಆಗಿರಲಿಲ್ಲ. ಕಳೆದ 3-4 ವರ್ಷಗಳಲ್ಲಿ ಈ ರೀತಿ ಪೊಲೀಸರಿಗೆ ಲಂಚ ಪಾವತಿ ಆಗುತ್ತಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.

In a major crackdown on police corruption, 11 police personnel, including an Inspector from Bengaluru’s West Division, have been suspended for allegedly accepting monthly bribes of up to ₹2 lakh from drug peddlers. The suspended officials are from Chamarajpet and JJ Nagar police stations, and the action was taken following an internal inquiry ordered by Bengaluru Police Commissioner B. Dayananda (as per earlier known designation), now led by Commissioner Seemanth Kumar Singh.