ಅಮಿತ್ ಷಾ ಸಿಡಿ ಎಕ್ಸ್‌ಪರ್ಟ್‌ ಇದ್ದಾರೆ, ಗುಜರಾತ್ ಉಸ್ತುವಾರಿಯದ್ದೇ ಸಿಡಿ ಆಗಿತ್ತು, ಹೀಗಾಗಿ ರಮೇಶ್‌ ಜಾರಕಿಹೊಳಿ ಅಲ್ಲಿಗೆ ಹೋಗಿದ್ದಾರೆ..! 

04-02-23 05:51 pm       Bangalore Correspondent   ಕರ್ನಾಟಕ

ಕೇಂದ್ರ ಗೃಹ ಸಚಿವ ಅಮಿತ್ ಷಾ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಇದ್ದಾರೆ‌. ಗುಜರಾತಿನಲ್ಲೂ ಸಿಡಿ ಪ್ರಯೋಗ ಮಾಡಿದ್ದರು. ಅದಕ್ಕಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಮಿತ್ ಷಾ ಭೇಟಿಗೆ ದೆಹಲಿಗೆ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. 

ಬೆಂಗಳೂರು, ಫೆ.4 : ಕೇಂದ್ರ ಗೃಹ ಸಚಿವ ಅಮಿತ್ ಷಾ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಇದ್ದಾರೆ‌. ಗುಜರಾತಿನಲ್ಲೂ ಸಿಡಿ ಪ್ರಯೋಗ ಮಾಡಿದ್ದರು. ಅದಕ್ಕಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಮಿತ್ ಷಾ ಭೇಟಿಗೆ ದೆಹಲಿಗೆ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಮಿತ್ ಶಾ ಸಿಡಿ ಎಕ್ಸ್‌ಪರ್ಟ್, ಗುಜರಾತ್ ಉಸ್ತುವಾರಿ ಆಗಿದ್ದ ಸಂಜಯ್ ಜೋಶಿಯವರ ಸಿಡಿ ಮಾಡಿಸಿದ್ದರು. ಹಾಗಾಗಿ ರಮೇಶ್ ಜಾರಕಿಹೊಳಿ ಬಳಿ ಸಲಹೆ ಕೇಳಲು ಅಲ್ಲಿಗೆ ಹೋಗಿರಬೇಕು ಎಂದು ರಮೇಶ್ ಜಾರಕಿಹೊಳಿ ಹಾಗೂ ಅಮಿತ್ ಶಾ ಭೇಟಿ ಬಗ್ಗೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ. 

Sleaze CD case: Ramesh Jarkiholi meets Amit Shah, holds late-night  discussion | udayavani

BJP conspiring to fix DK Shivakumar: Karnataka Congress | Bengaluru News -  Times of India

ಇದೇ ವಿಚಾರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿಡಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಸಾಕ್ಷಿ ಕೊಡಲಿ. ಆರೋಪ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಸಿಬಿಐ ತನಿಖೆ ಮಾಡುತ್ತದೆ. ಅದರ ಬದಲಾಗಿ ಜಾರಕಿಹೊಳಿ ಅಮಿತ್ ಶಾ ಅವರ ಬಳಿ ಏಕೆ ಹೋಗಿದ್ದಾರೆ? ಎಂದು ಪ್ರಶ್ನಿಸಿದರು.

ಸ್ಯಾಂಕಿ ಟ್ಯಾಂಕ್ ರಸ್ತೆ ಫ್ಲೈಓವರ್ ನಿರ್ಮಾಣಕ್ಕೆ ವಿರೋಧ 

ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ‌. ಮೂಲಭೂತ ಸೌಕರ್ಯಗಳ ವಿಚಾರವಾಗಿ
ಬಿಜೆಪಿ ಸರ್ಕಾರಕ್ಕೆ ನಗರದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬೆಂಗಳೂರು ನಗರದ 12 ಕ್ಷೇತ್ರಗಳಲ್ಲಿ ಪ್ಲ್ಯಾನಿಂಗ್ ಪ್ರಕಾರ ಮೂಲಭೂತ ಸೌಕರ್ಯಗಳನ್ನು ಮಾಡ್ತಿಲ್ಲ. ಸ್ಯಾಂಕಿ ರಸ್ತೆಯಲ್ಲಿ ಪ್ಲೈಓವರ್ ಮಾಡುವ ಮೊದಲು ಕೆರೆ ಉಳಿಸುವ ಕೆಲಸ ಮಾಡಲಿ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಪ್ಲೈಓವರ್ ಬಗ್ಗೆ ಮುಂದಾಲೋಚನೆ ಸರ್ಕಾರಕ್ಕೆ ಇಲ್ಲ. ಮರಗಳನ್ನು ಕಡಿದು ಫ್ಲೈಓವರ್ ಮಾಡೋದು ಬೇಡ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೊಟ್ಟಿರುವ ಸಲಹೆಯನ್ನಾದರೂ ಸರ್ಕಾರ ಪರಿಗಣಿಸಬೇಕು ಎಂದು
ಬಿಕೆ ಹರಿಪ್ರಸಾದ್ ಒತ್ತಾಯಿಸಿದರು.

Congress MLA Priyank Kharge gets 3rd notice in Karnataka ​PSI scam, says  hes not obligated to depose- The New Indian Express

ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬಿಜೆಪಿ ಸರ್ಕಾರ ವೈಜ್ಞಾನಿಕ ಕಾಮಗಾರಿ ಮಾಡ್ತಿಲ್ಲ. ಬೆಳಗ್ಗೆ ಫ್ಲೈಓವರ್ ಓಪನ್ ಮಾಡ್ತಾರೆ, ಸಂಜೆ ಬಂದ್ ಮಾಡುತ್ತಾರೆ. ಶಿವಾನಂದ ಸರ್ಕಲ್ ಬಳಿ ಆಗಿದ್ದು ಇದೇ. ಶೇ.40ರಷ್ಟು ಕಮಿಷನ್ ಹೊಡೆಯುವ ಜಾತ್ರೆ ಇದು. ಎಲೆಕ್ಷನ್ ರೋಡ್ ಮಾತ್ರ ಆಗ್ತಾ ಇದೆ. ಅವೈಜ್ಞಾನಿಕ ಯೋಜನೆ ಮಾಡಲು ಹೊರಟಿದ್ದಾರೆ. ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ಮಾಡಲು ಬಹಳ ಜನರ ವಿರೋಧ ಇದೆ.‌ 22 ಸಾವಿರ ನಿವಾಸಿಗಳು ವಿರೋಧ ಮಾಡಿದ್ದಾರೆ. 2 ಸಾವಿರ ಮಕ್ಕಳು ಯೋಜನೆ ವಿರೋಧಿಸಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.

Former Minister and BJP MLA Ramesh Jarkiholi met Union Home Minister Amit Shah here on Thursday night and requested him to transfer the sex CD case against him to the CBI.