ಬ್ರೇಕಿಂಗ್ ನ್ಯೂಸ್
23-02-23 09:10 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.23: ರಾಜ್ಯದಲ್ಲಿ ಕ್ಷತ್ರಿಯ ಸಮಾಜದ ಮತದಾರರು ಒಂದೂವರೆ ಕೋಟಿಯಷ್ಟಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟುಗಳನ್ನು ತಮ್ಮ ಸಮಾಜಕ್ಕೆ ಕೊಡಬೇಕೆಂದು ರಾಜಕೀಯ ಪಕ್ಷಗಳಿಗೆ ಕ್ಷತ್ರಿಯ ಸಮಾಜ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಆಗ್ರಹ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ತಮ್ಮ ಸಮುದಾಯವನ್ನು ಕಡೆಗಣಿಸುತ್ತಾರೆ. ನಮ್ಮ ಕ್ಷತ್ರಿಯ ಸಮಾಜದ ಮತದಾರರು ರಾಜ್ಯದಲ್ಲಿ ಐದನೇ ಒಂದು ಭಾಗದಷ್ಟು ಇದ್ದಾರೆ. ಕರಾವಳಿ ಜಿಲ್ಲೆಗಳು, ಬೆಳಗಾವಿ, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು, ಮೈಸೂರು ಹೀಗೆ ರಾಜ್ಯದ ಎಲ್ಲ ಕಡೆಯೂ ಹರಡಿದ್ದಾರೆ. ರಾಮ ಕ್ಷತ್ರಿಯ, ಕೋಟ ಕ್ಷತ್ರಿಯ, ಮರಾಠ ಕ್ಷತ್ರಿಯ ಹೀಗೆ ರಾಜ್ಯದಲ್ಲಿ 38 ವಿವಿಧ ಕ್ಷತ್ರಿಯ ಸಮಾಜದ ಜಾತಿಗಳಿದ್ದು, ಎಲ್ಲ ಸೇರಿ ಸುಮಾರು ಒಂದೂವರೆ ಕೋಟಿ ಜನರಿದ್ದಾರೆ. ನಮ್ಮ ಸಮಾಜ ಹರಿದು ಹಂಚಿ ಹೋದಂತಿದ್ದು, ಇತ್ತೀಚೆಗೆ ಎಲ್ಲ ಜಾತಿಗಳನ್ನು ಒಟ್ಟು ಸೇರಿಸಿ ಒಕ್ಕೂಟ ಮಾಡಿದ್ದೇವೆ ಎಂದರು.
ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಾವು ಹೋರಾಟ ರೂಪಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಆಗಲೀ ನಮ್ಮ ಸಮಾಜದ ಪ್ರತಿನಿಧಿಗಳಿಗೆ ಟಿಕೆಟ್ ಕೊಟ್ಟಲ್ಲಿ ಅವರನ್ನು ಗೆಲ್ಲಿಸುವ ಕೆಲಸವನ್ನು ಕ್ಷತ್ರಿಯ ಸಮಾಜದ ಒಕ್ಕೂಟ ಮಾಡಲಿದೆ ಎಂದು ಹೇಳಿದರು. ಸಚಿವ ಆನಂದ್ ಸಿಂಗ್ ಕೂಡ ನಮ್ಮ ಸಮಾಜದವರಾಗಿದ್ದು ಸಮುದಾಯದ ಪ್ರಮುಖ ಮುಖಂಡರಿದ್ದಾರೆ. ಅವರನ್ನು ಮುಂದಿಟ್ಟು ನಾವು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ನಮ್ಮ ಸಮಾಜದ ಜನರು ಎಲ್ಲ ವಿಭಾಗದಲ್ಲೂ ಅತ್ಯಂತ ಹಿಂದುಳಿದಿದ್ದು, ಪ್ರತಿ ಬಾರಿ ಜೀವ ಕೊಡುವುದರಲ್ಲಿ ಮಾತ್ರ ಮುಂದಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ, ಮಂಗಳೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಕೊಲೆಯಾಗಿದ್ದ ದೀಪಕ್ ರಾವ್ ನಮ್ಮ ಸಮಾಜದ ಕಾರ್ಯಕರ್ತರು. ಅವರ ಜೀವ ಮುಂದಿಟ್ಟು ಕೆಲವರು ರಾಜಕೀಯ ಹಾದಿ ಕಂಡುಕೊಂಡಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾವು ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ತಾರಾ ಸಿಂಗ್, ಬೈಂದೂರು ಶಾಸಕ ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಜಿಲ್ಲೆಗಳ ಮುಖಂಡರು ಉಪಸ್ಥಿತರಿದ್ದರು.
Kshatriya Samaj Federation president Uday Singh has urged political parties to give at least 50 seats to their community in the next assembly elections as the number of kshatriya samaj voters in the state is one-and-a-half crore.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:35 am
HK News Staffer
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm