ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಲು ಸಿದ್ಧತೆ ; ಚಿತ್ರದುರ್ಗದಲ್ಲಿ ಬಿಜೆಪಿಗೆ ಶಾಕ್ 

18-03-23 05:27 pm       HK News Desk   ಕರ್ನಾಟಕ

ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೈರಾಗಿದ್ದು ಬಿಜೆಪಿಗೆ ಕೈಕೊಟ್ಟು ಈ ಬಾರಿ ಕಾಂಗ್ರೆಸ್ ಕೈಹಿಡೀತಾರಾ ಎಂಬ ಶಂಕೆ ಮೂಡಿದೆ. 

ಚಿತ್ರದುರ್ಗ, ಮಾ.18 : ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೈರಾಗಿದ್ದು ಬಿಜೆಪಿಗೆ ಕೈಕೊಟ್ಟು ಈ ಬಾರಿ ಕಾಂಗ್ರೆಸ್ ಕೈಹಿಡೀತಾರಾ ಎಂಬ ಶಂಕೆ ಮೂಡಿದೆ. 

ಶಾಸಕಿ ಪೂರ್ಣಿಮಾ ಅವರನ್ನು ವಿಜಯ ಸಂಕಲ್ಪ ಯಾತ್ರೆಯ ಉಸ್ತುವಾರಿ ಸಮಿತಿ ಸದಸ್ಯರನ್ನಾಗಿ ಮಾಡಲಾಗಿತ್ತು. ಇದಲ್ಲದೆ, ಖುದ್ದು ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿ, ರ್ಯಾಲಿ ನಡೆಸಿದ್ದಾರೆ. ‌ಹಾಗಿದ್ದರೂ ಪೂರ್ಣಿಮಾ ಬಿಜೆಪಿ ಸಮಾವೇಶಕ್ಕೆ ಗೈರಾಗಿದ್ದು ಈ ರೀತಿ ನಡೆಯ ಬಗ್ಗೆ ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಗುಸು ಗುಸು ಚರ್ಚೆ ನಡೆದಿದೆ. ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಡಿಕೆಶಿ  &  ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ. ತೆರೆಮರೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಶಾಸಕಿ ಪೂರ್ಣಿಮಾ ಇಟ್ಟುಕೊಂಡಿದ್ದು ಹಿರಿಯೂರು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯಲು ಹರಸಾಹಸ ನಡೆಸಿದ್ದಾರೆ. 

ಯಾದವ ಸಮುದಾಯದ ಪ್ರಭಾವಿ ಶಾಸಕಿಯಾಗಿರುವ ಪೂರ್ಣಿಮಾ ಅವರನ್ನು ಕಾಂಗ್ರೆಸ್ ಕರೆತರಲು ತೆರೆಮರೆಯ ಯತ್ನ ನಡೆದಿದೆ. ಪೂರ್ಣಿಮಾ ಮೂಲಕ ಶಿರಾ, ಹಿರಿಯೂರು, ಚಳ್ಳಕೆರೆ ಸೇರಿದಂತೆ ಹಲವೆಡೆ ಯಾದವ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಂತ್ರ ನಡೆಸಿದೆ. ಹೀಗಾಗಿ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಬಹುತೇಕ ಫೀಕ್ಸ್  ಎನ್ನಲಾಗುತ್ತಿದೆ. ಇದೇ ವೇಳೆ, ಮಾಜಿ ಸಚಿವ ಡಿ.ಸುಧಾಕರ್ ಗೆ ಅಲ್ಪಸಂಖ್ಯಾತರ ಕೋಟಾದಡಿ ಚಿತ್ರದುರ್ಗದಲ್ಲಿ ಟಿಕೆಟ್ ನೀಡುವ ಸಾಧ್ಯತೆಯಿದೆ.

BJP MLA Poornima srinivas all set to join Congress.