ಬ್ರೇಕಿಂಗ್ ನ್ಯೂಸ್
20-04-23 01:30 pm Bangaluru Correspondent ಕರ್ನಾಟಕ
ಬೆಂಗಳೂರು, ಎ.20: ವಿಧಾನಸಭಾ ಚುನಾವಣಾ ಸಿದ್ಧತೆಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬುಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯ ಪತಿಯಾಗಿರುವ ಕೆಜಿಎಫ್ ಬಾಬು ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ವಸಂತನಗರದ ಕಾವೇರಿಯಪ್ಪ ಲೇಔಟ್‌ನಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸ ರುಕ್ಸಾನಾ ಪ್ಯಾಲೇಸ್‌ಗೆ ನಸುಕಿನಲ್ಲೇ ದಾಂಗುಡಿಯಿಟ್ಟ ಐಟಿ ಅಧಿಕಾರಿಗಳು ಸಂಜೆವರೆಗೂ ಶೋಧ ನಡೆಸಿದರು. ಮನೆಯ ಇಂಚಿಂಚೂ ಜಾಲಾಡಿದ ಅಧಿಕಾರಿಗಳು, ಬಾಬು ಅವರ ಹಣಕಾಸು ವ್ಯವಹಾರ ಮತ್ತು ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.

ಈ ವೇಳೆ ಕೆಜಿಎಫ್ ಬಾಬು ಅವರ ಮನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿಡಿ) ಹಾಗೂ 5 ಸಾವಿರ ರೇಷ್ಮೆ ಸೀರೆಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಉಮ್ರಾ ಫೌಂಡೇಷನ್ ಹೆಸರಿನಲ್ಲಿದ್ದ ತಲಾ 1,105 ರೂ. ಮೌಲ್ಯದ ಡಿಡಿಗಳು ಮತ್ತು ತಲಾ ಸುಮಾರು 5 ಸಾವಿರ ರೂ. ಬೆಲೆಯ ರೇಷ್ಮೆ ಸೀರೆಗಳನ್ನು ಚುನಾವಣಾ ಪ್ರಚಾರ ಸಾಮಗ್ರಿ ಜತೆ ಇರಿಸಲಾಗಿತ್ತು. ಡಿಡಿಗಳಲ್ಲಿ ಚಿಕ್ಕಪೇಟೆ ಕ್ಷೇತ್ರದ ಮತದಾರರ ಹೆಸರು ನಮೂದಿಸಲಾಗಿತ್ತು. ಸೀರೆಗಳ ಪ್ಯಾಕ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶಕ್ಕೆ ಸೀರೆ ಮತ್ತು ಡಿಡಿ ಸಂಗ್ರಹಿಸಿರುವ ಶಂಕೆಯಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.


ಚಿಕ್ಕಪೇಟೆ ಕ್ಷೇತ್ರದಲ್ಲಿಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಅವರು ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂದು ಖಾತ್ರಿಯಾದ ನಂತರ ಪಕ್ಷದಿಂದ ದೂರವಾಗಿ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿ ಭರ್ಜರಿ ಪ್ರಚಾರ ನಡೆಸಿದ್ದರು. ಶಾಝಿಯಾ ತರನ್ನುಮ್ ಅವರು ತಮ್ಮ ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ 1,538 ಕೋಟಿ ರೂ. ಸ್ಥಿರಾಸ್ತಿ ಮತ್ತು 83.56 ಕೋಟಿ ರೂ.ಗಳ ಚರಾಸ್ತಿ ಇದೆ. ಜತೆಗೆ, 2.67 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುಗಳು, ಸುಮಾರು ಒಂದೂವರೆ ಕೆ.ಜಿ. ಚಿನ್ನ ಮತ್ತು ವಜ್ರದ ಆಭರಣಗಳಿವೆ ಎಂದು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು.

ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಮ್ಮ ಜತೆ ಇರುವವರ ಮನೆಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ. ಕಾಂಗ್ರೆಸ್‌ನವರನ್ನು ಹೆದರಿಸೋಕೆ ಬಿಜೆಪಿ ಏನು ಬೇಕಾದರೂ ಮಾಡಲಿ. ಅವರು ಏನೇ ಮಾಡಿದರೂ ನಾವು ರಾಜ್ಯದಲ್ಲಿ ಬದಲಾವಣೆ ತರುತ್ತೇವೆ ಎಂದು ಗುಡುಗಿದರು.
The officials of the Income Tax Department today raided the residence of KGF Babu, a Congress ticket aspirant of Bengaluru’s Chickpet Assembly Constituency. At this time, more than 2,000 demand draft (DD) and 5,000 silk sarees (Saree) have been seized. DDs worth ₹1,105 each were collected in the name of Umrah Foundation, DDs were allegedly made in the name of Chikkapet voters. It was found that KGF Babu’s photo was on the packaging of election materials which had saree, DD. IT officials have seized all the items.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 01:48 pm
Mangaluru Staffer
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
Mangalore Accident, Kalladka: ಶಿವರಾತ್ರಿ ಉತ್ಸವ...
15-02-26 08:52 pm
Pumpwell Road Close, Mangalore: ಪಂಪ್ವೆಲ್ ಸರ್...
14-02-26 07:16 pm
CT Ravi, Mangalore: ಕಾಂಗ್ರೆಸ್ ಸಂಭ್ರಮ ಭ್ರಷ್ಟಾ...
14-02-26 05:16 pm
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm