ಬ್ರೇಕಿಂಗ್ ನ್ಯೂಸ್
05-05-23 08:50 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 5: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ರಾಜಧಾನಿಯ 18 ಕ್ಷೇತ್ರಗಳಲ್ಲಿ 36.6 ಕಿ.ಮೀ. ದೂರ ಬೃಹತ್ ರೋಡ್ ಶೋ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.
ನಗರದ 18 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ. ದೂರ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 10.1 ಕಿ.ಮೀ. ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26.5 ಕಿ.ಮೀ. ದೂರ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಮೇ.6 ರಂದು ರೋಡ್ ಶೋ ಹಳೆ ವಿಮಾನ ನಿಲ್ದಾಣ ಜಂಕ್ಷನ್ ಬಳಿಯ ಸುರಂಜನ್‌ದಾಸ್ ರಸ್ತೆ, ಬೆಮಲ್ ಕಾರ್ಖಾನೆ ಜಂಕ್ಷನ್, ತಿಪ್ಪಸಂದ್ರ ಮುಖ್ಯ ರಸ್ತೆ, ಎಚ್‌ಎಎಲ್ 2ನೇ ಹಂತದ 80 ಅಡಿ ಜಂಕ್ಷನ್, ಸಾಯಿ ರಸ್ತೆ ಜಂಕ್ಷನ್, ಇಂದಿರಾನಗರ, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆಯಲಿದೆ.
ಸಂಜೆ ರೋಡ್ ಶೋ ಜೆ.ಪಿ.ನಗರದ ಆರ್‌ಬಿಐನಿಂದ ಶುರುವಾಗಿ ಬೊಮ್ಮನಹಳ್ಳಿ, ಜೆ.ಪಿನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಕಲ್ಲಪ್ಪ ಸರ್ಕಲ್, ಎನ್.ಆರ್.ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್.ಮಿಲ್, ಸಿರ್ಸಿ ಸರ್ಕಕ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಾರಮ್ಮ ದೇವಸ್ಥಾನ ಬಳಿ ಅಂತ್ಯವಾಗಲಿದೆ.
ರೋಡ್ ಶೋ ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಸೂಚಿಸಲಾಗಿದೆ.
ಮೇ 6 ಮತ್ತು 7ರಂದು ರೋಡ್ ಶೋ ಮಾಡಲು ಇಂದು ಸಂಜೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಇಂದು ಸಾಯಂಕಾಲ 5.30ರಿಂದ ರಾತ್ರಿ 7 ಗಂಟೆ ವರೆಗೆ ಈ ಕೆಳಕಂಡ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾತಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಡ್ಜ್ ಲೇಔಟ್ ರಸ್ತೆ, ಇಂದಿರಾ ನಗರ 100 ಅಡಿ ರಸ್ತೆ, ಅರಳಿ ಕಟ್ಟೆ, ಎ.ಎಸ್.ಸಿ ಸೆಂಟರ್, ಟ್ರಿನಿಟಿ ವೃತ್ತ, ರಾಜಭವನ ರಸ್ತೆ, ಎಂಜಿ ರಸ್ತೆ, ಡಿಕನ್ಸನ್ ರಸ್ತೆ, ಮಣಿಪಾಲ್ ಸೆಂಟರ್, ಕಬ್ಬನ್ ರಸ್ತೆ, ಬಿಆರ್ವಿ ಜಂಕ್ಷನ್, ಸಿಟಿಓ ಜಂಕ್ಷನ್, ಇನ್ಫೆಂಟ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂದಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಟ್ರಾಫಿಕ್ ಪೊಲೀಸ್ ಮನವಿ ಮಾಡಿಕೊಂಡಿದ್ದಾರೆ.
Prime Minister Narendra Modi will hold a mega 36.6-km-long road show in Bengaluru on May 6, a massive investment of his political capital to help the BJP win the Assembly elections. Prime Minister Narendra Modi will hold a mega 36.6-km-long road show in Bengaluru on May 6, a massive investment of his political capital to help the BJP win the Assembly elections.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm