ಬ್ರೇಕಿಂಗ್ ನ್ಯೂಸ್
05-07-23 06:48 pm Bangalore Correspondent ಕರ್ನಾಟಕ
ಬೆಂಗಳೂರು, ಜು 05: ಕೆಫೆ ಕಾಫಿ ಡೇ (ಸಿಸಿಡಿ) ಹೆಸರಿನಲ್ಲಿ ದೇಶಾದ್ಯಂತ ಪ್ರಸಿದ್ಧ ಕಾಫಿ ಶಾಪ್‌ಗಳ ಚಿಲ್ಲರೆ ಸರಪಳಿಯನ್ನು ನಡೆಸುತ್ತಿರುವ ಕರ್ನಾಟಕ ಮೂಲದ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 450 ಕೋಟಿ ರೂ. ಸಾಲ ಕಟ್ಟಲು ವಿಫಲವಾಗಿದೆ. ಸಾಲದಲ್ಲಿ ತಾನು ಡಿಫಾಲ್ಟ್ ಆಗಿರುವ ಮಾಹಿತಿಯನ್ನು ಸ್ವತಃ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಹಂಚಿಕೊಂಡಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳು ಅಥವಾ ನಗದು ಕ್ರೆಡಿಟ್‌ನ 189.70 ಕೋಟಿ ರೂ. ಅಸಲನ್ನು ಜೂನ್ 30ಕ್ಕೂ ಮೊದಲ ಪಾವತಿಸಲು ವಿಫಲವಾಗಿರುವುದಾಗಿ ಹೇಳಿದೆ.
ಪರಿವರ್ತಿಸಲಾಗ ಡಿಬೆಂಚರ್‌ಗಳು ಮತ್ತು ಪರಿವರ್ತಿಸಲಾಗದ ರಿಡೀಮ್ ಮಾಡಬಹುದಾದ ಆದ್ಯತೆಯ ಷೇರುಗಳಂತಹ ಪಟ್ಟಿ ಮಾಡದ ಸಾಲ ಭದ್ರತೆಗಳ ಜೂನ್ ತ್ರೈಮಾಸಿಕ ಅಂತ್ಯದ ವೇಳೆಗಿನ ಡೀಫಾಲ್ಟ್ ಮೊತ್ತವು 200 ಕೋಟಿ ರೂ. ಆಗಿದೆ ಎಂದು ಕಂಪನಿ ಹೇಳಿದ್ದು, ಇದರ ಮೇಲಿನ 44.77 ಕೋಟಿ ರೂ. ಬಡ್ಡಿಯನ್ನೂ ಪಾವತಿಸಿಲ್ಲ ಎಂದು ತಿಳಿಸಿದೆ.
2019ರಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರು ನೇತ್ರಾವದಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕಂಪನಿ ಸ್ಥಿತಿಯು ಕೆಟ್ಟದಾಗಿದೆ. ಅವರ ಮರಣದ ನಂತರ ಪ್ರಾರಂಭವಾದ ಹಣಕಾಸಿನ ಬಿಕ್ಕಟ್ಟು ಇನ್ನೂ ಕೊನೆಯಾಗಿಲ್ಲ.
ಈಗಿನ ಮುಖ್ಯಸ್ಥೆ, ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ಆಸ್ತಿಗಳನ್ನು ಮಾರಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಹೆಚ್ಚಿನ ಸಾಲವನ್ನು ಮರುಪಾವತಿಸಿದ್ದರೂ, ಕಂಪನಿಯನ್ನು ಡೀಫಾಲ್ಟ್‌ನಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಕಂಪನಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಆಸ್ತಿಗಳನ್ನು ಮಾರಾಟ ಮಾಡಲು ಯೋಜಿಸಿದ್ದು, ಈ ಮೂಲಕ ಸಾಲವನ್ನು ಪಾವತಿಸುವುದಾಗಿ ಹೇಳಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಮಾರ್ಚ್ 2020ರಲ್ಲಿ 13 ಸಾಲದಾತರಿಗೆ 1,644 ಕೋಟಿ ರೂ. ಸಾಲವನ್ನು ಪಾವತಿಸುವುದಾಗಿ ಹೇಳಿತ್ತು. ಆ ಸಮಯದಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ತನ್ನ ಟೆಕ್ನಾಲಜಿ ಬ್ಯುಸಿನೆಸ್ ಪಾರ್ಕ್ ಅನ್ನು ಮಾರಾಟ ಮಾಡಿತ್ತು. ಇದಕ್ಕಾಗಿ ಬ್ಲಾಕ್‌ಸ್ಟೋನ್ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಮೂಲಕ ಸಾಲವನ್ನು ಪಾವತಿಸಿತ್ತು.
ಸಿಸಿಡಿ ಗೆ ದಂಡ ವಿಧಿಸಿದ್ದ ಸೆಬಿ;
ಈ ವರ್ಷದ ಆರಂಭದಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ದಂಡವನ್ನು ವಿಧಿಸಿತ್ತು. ಕಂಪನಿಯು ತನ್ನ ಅಂಗಸಂಸ್ಥೆಗಳಿಂದ 3,535 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಬೇರೆಡೆಗೆ ತಿರುಗಿಸುವುದನ್ನು ತಡೆಯಲು ವಿಫಲವಾದ ಕಾರಣಕ್ಕಾಗಿ ಸಂಸ್ಥೆಗೆ ಸೆಬಿ 26 ಕೋಟಿ ರೂಪಾಯಿ ದಂಡ ವಿಧಿಸಿತ್ತು.
Coffee Day Enterprises Ltd (CDEL) on Tuesday reported a total default of Rs 450 crore in the quarter ended on June 30, 2023. Its "total financial indebtedness of listed entity including short term and long term debt" is Rs 44.77crore, the company stated in a regulatory filing to bourses. According to CDEL, its total outstanding amount is Rs 200 crore from loans or revolving facilities like cash credit from banks or financial institutions.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm