ಬ್ರೇಕಿಂಗ್ ನ್ಯೂಸ್
19-07-23 08:06 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 19: ಬಿಜೆಪಿ ರೌಡಿತನಕ್ಕೆ ನಾವು ಹೆದರಲ್ಲ. ಅಸಭ್ಯವಾಗಿ, ಅನಾಗರಿಕವಾಗಿ ನಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಬಿಜೆಪಿ ಧರಣಿ ಹಾಗೂ ಸ್ಪೀಕರ್ ಪೀಠಕ್ಕೆ ಅಗೌರವ ಮಾಡಿದ ವಿಚಾರವಾಗಿ ಮಾತನಾಡಿದ ಅವರು, " ಬೇರೆ ರಾಜ್ಯದ ನಾಯಕರನ್ನು ಗೌರವಿಸೋದು ಪರಂಪರೆ ಅಲ್ವಾ? ಮೊದಲಿಂದಲೂ ನಡೆದುಕೊಂಡು ಬಂದಿರುವ ಪದ್ದತಿ ಇದು. ವಿಪಕ್ಷ ನಾಯಕರನ್ನು ಕರೆದುಕೊಂಡು ಬರೋದಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು ಅಷ್ಟೇ.
ಇದಕ್ಕೆ ಇಡೀ ದಿನ ರಂಪ ಮಾಡಿದ್ದಾರೆ " ಎಂದರು. ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆದಿದ್ದಾರೆ. ಬಹಳ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅನಾಗರಿಕವಾಗಿ ನಡೆದುಕೊಂಡಿದ್ದಾರೆ. ವಿರೋಧ ಪಕ್ಷವಾಗಿರುವಾಗ ಬಹಳ ಗೌರವಯುತವಾಗಿ ನಡೆದುಕೊಳ್ಳಬೇಕು. ನಾವು ಹಿಂದೆ ವಿಪಕ್ಷದ ಸ್ಥಾನದಲ್ಲಿದ್ದಾಗ ಗೌರವಯುತವಾಗಿ ನಡೆದುಕೊಂಡಿದ್ದೇವೆ ಎಂದು ಹೇಳಿದರು.
ಅಂಬೇಡ್ಕರ್, ಬುದ್ದ, ಬಸವ ಮುಂತಾದ ಮಹನೀಯರ ಪ್ರಜಾಪ್ರಭುತ್ವವಾದಿ ಮೌಲ್ಯಗಳ ಮುಂದುವರೆದ ಪರಂಪರೆಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದ ವಿಧಾನಸಭೆಗೆ ಅಗೌರವ ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮತ್ತು ಸದನದ ನಿಯಮಾವಳಿಗಳ ಆಧಾರದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿಯವರಿಗೆ ಅವಕಾಶ ಇತ್ತು. ಆದರೆ ಸ್ಪೀಕರ್ ಮುಖಕ್ಕೆ ಪತ್ರ ಎಸೆಯುವುದು, ಸ್ಪೀಕರ್ ಪೀಠಕ್ಕೆ ಎಸೆಯುವುದು, ಅವಮಾನ ಮಾಡುವುದು ನಿಯಮ ಬಾಹಿರ. ಇದು ಅನಾಗರೀಕ ನಡವಳಿಕೆಯಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಗ್ಯಾರಂಟಿಗಳನ್ನು ತಡೆದುಕೊಳ್ಳಕೆ ಆಗ್ತಿಲ್ಲ ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿರೋದೇ ಅವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಬಿಜೆಪಿಯವರು ಬಹಳ ಹತಾಶರಾಗಿದ್ದಾರೆ. ಕೊಟ್ಟ ಮಾತಿನ ವೇಳೆ ಅವರು ನಡೆದುಕೊಳ್ಳೋರು ಅಲ್ಲ. ಆದರೆ ನಾವು ಕಾಯಕವೇ ಕೈಲಾಸದಂತೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಜನರು ಖುಷಿಯಾಗಿದ್ದಾರೆ, ಇವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ ಎಂದು ಕಿಡಿಕಾರಿದರು.
ಇವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಕ್ಕಾಗಿಲ್ಲ ;
ಇವರ ಯೋಗ್ಯತೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳೋಕೆ ಆಗಿಲ್ಲ. ಬಜೆಟ್ ಮೇಲೆ ಚರ್ಚೆ ನಡೀತ್ತಿದೆ, ವಿಪಕ್ಷ ನಾಯಕ ಇಲ್ಲ ಅಂದರೆ ಇದು ಪ್ರಜಾಪ್ರಭುತ್ವ , ಸಂವಿಧಾನ ವಿರೋಧಿ ಅಲ್ವಾ? ಬಿಜೆಪಿಯವರಿಗೆ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದೇ ಇರೋದು ಪಾಠ ಹೇಳಿಕೊಡೋಕೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
Siddaramaiah CM Angry over BJP rowdyism inside assembly. They are not even cable of even selecting opposition leader so far he added.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm