ಬ್ರೇಕಿಂಗ್ ನ್ಯೂಸ್
27-07-23 04:26 pm HK News Desk ಕರ್ನಾಟಕ
ರಾಯಚೂರು, ಜುಲೈ 27: ವೇಗವಾಗಿ ಬಂದ ಕಾರೊಂದು ಬೈಕ್ ಸವಾರ ಹಾಗೂ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ 15 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಬೈಕ್‍ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿನಿ ಬರೊಬ್ಬರಿ 15 ಅಡಿ ಎತ್ತರಕ್ಕೆ ಹಾರಿ ಬಿದ್ದಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ನಗರದ ಸ್ಟೇಷನ್ ವೃತ್ತದಿಂದ ಅತೀವೇಗದಲ್ಲಿ ಬರುತ್ತಿದ್ದ ಕಾರು ರಸ್ತೆ ವಿಭಜಕದಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ಬಳಿಕ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಶಿವರಾಜ್ ಪಾಟೀಲ್‍ಗೆ ಕಾಲು ಮುರಿತವಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಸ್ತೆ ಬದಿಯಲ್ಲಿ ತೆರಳುತ್ತಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರಲ್ಲಿ ಇಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, ಜ್ಯೋತಿ ಹಾಗೂ ಶಿವಮಂಗಳಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಬೈಕ್ ಸವಾರ ಶಿವರಾಜ್ ಪಾಟೀಲ್ ಎಂಬುವವರಿಗೂ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರಾದ ದೇವದುರ್ಗ ತಾಲೂಕು ಬೂಮನಗುಂಡ ತಾಲೂಕಿನ ಶಿವಮಂಗಳ ಹಾಗೂ ಸಿರವಾರ ತಾಲೂಕು ಬೇವಿನೂರು ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿದೆ.
15 ಅಡಿ ಹಾರಿ ಬಿದ್ದರೂ ಬದುಕಿದ ವಿದ್ಯಾರ್ಥಿನಿ;
ಈ ಘಟನೆ ಜುಲೈ 18ರಂದು ನಡೆದಿದ್ದು, ಬೈಕ್ ಸವಾರ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರಿಗೆ ಸಾಮಾನ್ಯ ಗಾಯಗಳಾಗಿದ್ದು, ಗುಣಮುಖರಾಗಿದ್ದಾರೆ. ಅಪಘಾತದ ದೃಶ್ಯ ವಾಣಿಜ್ಯ ಮಳಿಗೆಯೊಂದರಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ. ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಫಘಾತ ಸಂಭವಿಸಿದ ನಂತರ ನಗರಸಭೆ ಅಧಿಕಾರಿಗಳು ಎಚ್ಚರಗೊಂಡಿದ್ದು ರಸ್ತೆ ವಿಭಜಕಗಳ ಮಧ್ಯೆ ಬೆಳೆದ ಸಸಿಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
#WATCH : CCTV Visuals of a speedy car ran over a bike & a woman on the station road, both were injured in the accident at Raichur, Karnataka.#CCTV #cctvfootage #accident #roadaccident #Raichur #Karnataka #LatestNews #LatestUpdates #latest pic.twitter.com/a8yyxQ6tOL
— upuknews (@upuknews1) July 27, 2023
Girl Tossed In Air By 15 Feet As Speeding Jaguar Car Runs Over Students In Raichur; Horrifying Accident Captured On CCTV. : A horrific road incident which has gone viral on social media, shows a speeding car colliding with a bike and two female students in Karnataka's Raichur district. The incident reportedly took place on July 18 near Sri Ram Temple in Raichur.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 06:05 pm
Mangalore Correspondent
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
12-02-25 06:23 pm
Bangalore Correspondent
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm