Bangalore, Actor Shiva Rajkumar, DK Shivakumars: ಡಿಕೆಶಿ ಲೋಕಸಭೆ ಟಿಕೆಟ್ ಆಫರ್ ; ಬಣ್ಣ ಹಚ್ಚೋದನ್ನು ತಂದೆ ಬಳುವಳಿ ಕೊಟ್ಟಿದ್ದಾರೆ, ರಾಜಕೀಯ ನನಗೆ ಬೇಡ ಎಂದ ನಟ ಶಿವಣ್ಣ 

11-12-23 05:11 pm       Bangalore Correspondent   ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಲೋಕಸಭೆ ಟಿಕೆಟ್ ಆಫರ್ ನೀಡಿದರೆ, ಅದನ್ನು ನಟ ಶಿವರಾಜ್‌ ಕುಮಾರ್‌ ನಯವಾಗಿಯೇ ತಿರಸ್ಕರಿಸಿದ್ದು ತಾನು ರಾಜಕೀಯಕ್ಕೆ ಬರಲ್ಲ, ಬಣ್ಣ ಹಚ್ಚೋದರಲ್ಲಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ. 

ಬೆಂಗಳೂರು, ಡಿ.11: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಲೋಕಸಭೆ ಟಿಕೆಟ್ ಆಫರ್ ನೀಡಿದರೆ, ಅದನ್ನು ನಟ ಶಿವರಾಜ್‌ ಕುಮಾರ್‌ ನಯವಾಗಿಯೇ ತಿರಸ್ಕರಿಸಿದ್ದು ತಾನು ರಾಜಕೀಯಕ್ಕೆ ಬರಲ್ಲ, ಬಣ್ಣ ಹಚ್ಚೋದರಲ್ಲಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ. 

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈಡಿಗರ ಜಾಗೃತ ಸಮಾವೇಶದಲ್ಲಿ ಮಾತನಾಡುತ್ತ ಡಿಸಿಎಂ ಡಿಕೆಶಿ ಅವರು, ಜೊತೆಯಲ್ಲಿದ್ದ ಶಿವರಾಜ್ ಕುಮಾರ್ ಗೆ ಲೋಕಸಭೆ ಟಿಕೆಟ್ ಆಫರ್ ನೀಡಿದ್ದಾರೆ. ಆದರೆ ನಟ ಶಿವಣ್ಣ ಅದನ್ನು ಅದೇ ವೇದಿಕೆಯಲ್ಲಿ ನಿರಾಕರಿಸಿ ಗಮನ ಸೆಳೆದರು. 

ಡಿ.ಕೆ. ಶಿವಕುಮಾರ್ ಈಡಿಗ ಸಮಾವೇಶದಲ್ಲಿ ಮಾತನಾಡಿ, ನೀನು ಪಾರ್ಲಿಮೆಂಟ್‌ ವೋಟಿಗೆ ನಿಂತುಕೊಳ್ಳಲು ರೆಡಿಯಾಗಿ. ನಿನಗೆ ಎಲ್ಲಿ ಬೇಕೋ ಅಲ್ಲಿ ಸೀಟು ಕೊಡುತ್ತೇನೆ ಎಂದು ಹೇಳಿದ್ದು ಸಂಚಲನ ಮೂಡಿಸಿದೆ. ಆದರೆ, ಆನಂತರ ಈ ಬಗ್ಗೆ  ಮಾತನಾಡಿದ ಶಿವಣ್ಣ, ಈಗಾಗಲೇ ಐದಾರು ಸಿನಿಮಾ ಒಪ್ಪಿಕೊಂಡು ಬಿಟ್ಟಿದ್ದೇನೆ, ನನಗೆ ರಾಜಕೀಯ ಮಾಡಲು ಟೈಮಿಲ್ಲ. ನನಗೆ ಅದು ಹಿಡಿಸದಯ ಎಂದು ಹೇಳಿದ್ದಾರೆ.

ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು, ಪಾರ್ಲಿಮೆಂಟ್‌ಗೆ ಹೋಗುವ ಯೋಗ ಸುಲಭವಾಗಿ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗಬೇಡ ಎಂದು ಡಿ.ಕೆ.ಶಿವಕುಮಾರ್‌ ಸಮಾವೇಶದಲ್ಲಿ ಬಹಿರಂಗವಾಗಿ ಶಿವರಾಜ್‌ ಕುಮಾರ್‌ಗೆ ಎಂಪಿ ಟಿಕೆಟ್‌ ಆಫ‌ರ್‌ ಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್‌, ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿ ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್‌ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದನ್ನು ಮಾಡೋಕೆ ಬೇರೆಯವರು ಇದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Kannada film actor Shiva Rajkumar has declined Karnataka Deputy Chief Minister DK Shivakumar's offer to contest in the upcoming Lok Sabha elections. During the Ediga community convention in Bengaluru, Congress leader DK Shivakumar had offered Shiva Rajkumar a Lok Sabha ticket from the party, stating that such an opportunity to enter Parliament does not come to everyone.