ಬ್ರೇಕಿಂಗ್ ನ್ಯೂಸ್
13-12-23 07:10 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.13: ಸಂಸತ್ತಿನಲ್ಲಿ ಕಲಾಪದ ನಡೆಯುತ್ತಿದ್ದಾಗಲೇ ಸ್ಮೋಕ್ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳು ಮೈಸೂರು ಮೂಲದವರಾಗಿದ್ದು ಸಂಸದ ಪ್ರತಾಪಸಿಂಹ ಕಚೇರಿ ಮೂಲಕ ಪಾಸ್ ಪಡೆದು ಸಂಸತ್ತಿಗೆ ಬಂದಿದ್ದರು ಎನ್ನುವ ಸುದ್ದಿ ಸಂಚಲನ ಮೂಡಿಸಿದೆ.
ಆರೋಪಿಗಳಾದ ಸಾಗರ್ ಶರ್ಮಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದು ಮತ್ತು ಮತ್ತೊಬ್ಬ ಮೈಸೂರು ನಿವಾಸಿ ಮನೋರಂಜನ್ ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಇವರಲ್ಲದೆ, ಸಂಸತ್ತಿನ ಹೊರಗೆ ಕಲರ್ ಸ್ಮೋಕ್ ಹೊರಚೆಲ್ಲುತ್ತ ಪ್ರತಿಭಟನೆ ನಡೆಸಿದ ಹರ್ಯಾಣ ಮೂಲದ ಹಿಸ್ಸಾರ್ ನಿವಾಸಿ ನೀಲಂ ಕೌರ್(42) ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ(25) ಎಂಬವರನ್ನೂ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ.
ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಮನೋರಂಜನ್ ಮತ್ತು ಸಾಗರ್ ಶರ್ಮಾ ಅಧಿವೇಶನ ನಡೆಯುತ್ತಿದ್ದಲ್ಲಿಗೆ ಹಾರಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ಕೈಯಲ್ಲಿದ್ದ ವಸ್ತುವಿನಿಂದ ಯೆಲ್ಲೋ ಕಲರ್ ಗ್ಯಾಸನ್ನು ಹೊರ ಬಿಟ್ಟಿದ್ದರು. ಇದರಿಂದ ಒಂದು ಕ್ಷಣ ಬೆಚ್ಚಿಬಿದ್ದ ಸಂಸದರು ಬಳಿಕ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಸಂಸದರೇ ಸೇರಿ ಯುವಕರಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ.
ಸದನಕ್ಕೆ ನುಗ್ಗಿದ ಇವರಿಬ್ಬರು ಕೂಡ ಮೈಸೂರು ಸಂಸದ ಪ್ರತಾಪಸಿಂಹ ಅವರ ಹೆಸರನ್ನು ಉಲ್ಲೇಖಿಸಿ ವಿಸಿಟರ್ ಪಾಸ್ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದರು. ಈ ಬಗ್ಗೆ ಪ್ರತಾಪ್ ಸಿಂಹ ದೆಹಲಿಯಲ್ಲಿ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ್ದು, ಮೈಸೂರು ಕಚೇರಿಯಿಂದ ಪಾಸ್ ನೀಡುವಂತೆ ಕೇಳಲಾಗಿತ್ತು. ಬಹಳ ಒತ್ತಡ ಹೇರಿದ ಕಾರಣ ಪಾಸ್ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಸಂಸತ್ ಠಾಣೆಯ ಪೊಲೀಸರು ನಾಲ್ವರ ವಿಚಾರಣೆ ಮುಂದುವರಿಸಿದ್ದು, ಸಂಸದ ಪ್ರತಾಪ್ ಸಿಂಹ ಮತ್ತು ಅವರ ಆಪ್ತ ಕಾರ್ಯದರ್ಶಿಯ ಹೇಳಿಕೆಯನ್ನು ದಾಖಲಿಸುತ್ತಿದ್ದಾರೆ. ಘಟನೆ ಕುರಿತು ಎಫ್‌ಎಸ್ಎಲ್, ಎಸ್‌ಐಟಿ ಮತ್ತು ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಲೋಕಸಭೆ ಕಲಾಪ ಸ್ಥಳದಲ್ಲಿ ಯುವಕ ತೇಲಿಬಿಟ್ಟ ಹಳದಿ ಹೊಗೆ ಯಾವುದರದ್ದು, ಆತನ ಬಳಿ ಇದ್ದ ವಸ್ತು ಯಾವುದು, ಬಿಗಿ ಭದ್ರತೆ ಮೀರಿ ಆತ ಅದನ್ನು ಒಳಗೆ ತೆಗೆದುಕೊಂಡು ಹೋಗಿದ್ದು ಹೇಗೆ, ಇವರಿಗೆ ಉಗ್ರರ ಜೊತೆಗೆ ಲಿಂಕ್ ಇದೆಯಾ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ.
ಘಟನೆ ಬೆನ್ನಲ್ಲೇ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪಸಿಂಹ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಸಂಸದರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 22 ವರ್ಷಗಳ ಹಿಂದೆ ಇದೇ ದಿನ 2001ರ ಡಿ.13ರಂದು ಸಂಸತ್ತಿಗೆ ದಾಳಿ ನಡೆಸಿದ್ದ ಉಗ್ರರು ಹಲವರನ್ನು ಕೊಂದಿದ್ದರು. ಆ ಕೃತ್ಯದ ವಾರ್ಷಿಕ ದಿನವೇ ಮತ್ತೆ ಭದ್ರತಾ ವೈಫಲ್ಯ ನಡೆದಿದ್ದಲ್ಲದೆ, ಪ್ರಜಾಪ್ರಭುತ್ವದ ದೇಗುಲ ಎಂದೆನಿಸಿರುವ ಸಂಸತ್ತಿನ ಒಳಗಡೆಯೇ ಸ್ಮೋಕ್ ಬಾಂಬ್ ದಾಳಿ ಮಾಡಿರುವುದು ಭಯೋತ್ಪಾದಕ ಕೃತ್ಯದ ಸಂಚಿನ ಭಾಗ ಆಗಿರಬಹುದು ಎನ್ನುವ ಶಂಕೆಯಿದೆ.
आज संसद भवन के अंदर घुसकर जिन्होंने हमला किया उनके पास मैसूर से भाजपा सांसद Pratap Simha ने जारी कराए।
— Nitin Agarwal (@nitinagarwalINC) December 13, 2023
आख़िर वे कौन लोग थे,जिनके लिए भाजपा सांसद ने पास बनवाये?#SecurityBreach #Parliament pic.twitter.com/a97N9ole7t
The Lok Sabha on Wednesday witnessed a major security breach on the 22nd anniversary of the 2001 Parliament attack, that left 9 dead, as two men jumped down from the gallery and hurled gas-emitting objects in the House. Sagar Sharma, one of the individuals involved in the security breach, has been identified, and according to MP Danish Ali, his visitor pass was signed by BJP's Mysuru MP Pratap Simha.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm