ಬ್ರೇಕಿಂಗ್ ನ್ಯೂಸ್
19-11-20 03:44 pm Bangalore Correspondent ಕರ್ನಾಟಕ
ಬೆಂಗಳೂರು, ನವೆಂಬರ್ 19 : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕಾಫಿ ಡೇ ಸಿದ್ಧಾರ್ಥ ಪುತ್ರ ಅಮಾರ್ಥ್ಯ ಅವರ ವಿವಾಹ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ.
ಡಿಕೆ ಶಿವಕುಮಾರ್ ಹಾಗೂ ಎಸ್ ಎಂ ಕೃಷ್ಣ ಕುಟುಂಬಸ್ಥರು ಮತ್ತು ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಜೂನ್ 12 ರಂದು ಸದಾಶಿವ ನಗರದಲ್ಲಿರುವ ಎಸ್.ಎಂ. ಕೃಷ್ಣ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಕುಟುಂಬ ಸದಸ್ಯರು ಮದುವೆ ಮಾತುಕತೆ ನಡೆಸಿದ್ದರು. 2021ರ ಫೆಬ್ರವರಿಯಲ್ಲಿ ಇವರ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಆರ್ ಅಶೋಕ್ ಸೇರಿದಂತೆ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಉತ್ತರ ಪ್ರದೇಶದ ಖ್ಯಾತ ಜ್ಯೋತಿಷಿ ಪಂಡಿತ್ ಅವರ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಿಶ್ಚಿತಾರ್ಥ ನಡೆಯಿತು. ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗಮಿಸಿ ನವ ಜೋಡಿಗೆ ಹಾರೈಸಿದರು. ಸಭಾಂಗಣವೆಲ್ಲ ಗುಲಾಬಿಮಯವಾಗಿದ್ದು, ಐಶ್ವರ್ಯ ಹಾಗೂ ಅಮರ್ಥ್ಯ ಗುಲಾಬಿ ಬಣ್ಣದ ಉಡುಗೆಯನ್ನು ತೊಟ್ಟು ಕಂಗೊಳಿಸುತ್ತಿದ್ದಾರೆ.
ಹೋಟೆಲ್‌ನಲ್ಲಿ ಒಟ್ಟು 50 ರೂಂಗಳನ್ನು ಬುಕ್ ಮಾಡಲಾಗಿದ್ದು, ಒಟ್ಟು 250 ಮಂದಿಗೆ ಆಹ್ವಾನ ನೀಡಲಾಗಿದೆ. ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಕೊರೊನಾ ಹಿನ್ನೆಲೆ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಆಮಂತ್ರಣ ನೀಡಲಾಗಿಲ್ಲ.
ಅಮರ್ಥ್ಯ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.
Politics were set aside temporarily as photos from the celebrations showed Karnataka Chief Minister Yediyurappa, who sat in the front row, holding DK Shivakumar's hand.
03-01-25 10:47 pm
HK News Desk
ಮಂಗಳೂರು, ಶಿವಮೊಗ್ಗ ಸೇರಿ ಆರು ಸ್ಮಾರ್ಟ್ ಸಿಟಿ ಯೋಜ...
03-01-25 08:33 pm
ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ಹಣ ವಸೂಲಿ...
03-01-25 02:02 pm
KSRTC Bus Fare Hike; ಬಿಟ್ಟಿ ಭಾಗ್ಯ ಐಸಾ, "ಕೈ" ಕ...
02-01-25 11:03 pm
Chamarajanagar Hostel Death: ನ್ಯೂ ಇಯರ್ ಗೆ ವಿದ...
02-01-25 07:42 pm
03-01-25 06:22 pm
HK News Desk
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
03-01-25 10:14 pm
Mangalore Correspondent
Mangalore Kambala: ಕಂಬಳದಲ್ಲಿ ಅನಗತ್ಯ ವಿಳಂಬ ತಪ್...
03-01-25 05:40 pm
BJP, Pralhad Joshi, Mangalore: ರಾಹುಲ್ ಹೇಳಿದಂತ...
02-01-25 09:26 pm
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
03-01-25 09:26 pm
Mangalore Correspondent
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm
Bangalore crime, Job fraud: ಸರ್ಕಾರಿ ನೌಕರಿ ಆಸೆ...
31-12-24 11:32 am
Online Fraud, Stock Market, Mangalore: ಯೂಟ್ಯೂ...
29-12-24 10:50 pm